ಪಂಜಾಬ್:ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಗನನ್ನು ಶಾಲೆಗೆ ಬಿಡಲು ಹೊರಟಿದ್ದ ವ್ಯಕ್ತಿಯೊಂದಿಗೆ ಕೆಲ ಗೂಂಡಾಗಳು ಜಗಳವಾಡುತ್ತಿರುವುದು ಕಂಡುಬಂದಿದೆ. ಈ ಘಟನೆ ನಡೆದಿರುವುದು ಪಂಜಾಬ್‌ನ ಮಾನಸಾದಲ್ಲಿ ಎಂದು ಹೇಳಲಾಗುತ್ತಿದೆ. ಬೆಳಗಿನ ಸಮಯ ವ್ಯಕ್ತಿ ಎಂದಿನಂತೆ ಬೈಕ್ ನಲ್ಲಿ ತನ್ನ ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದರು. ಶಾಲೆ ತಲುಪಿದ ಅವರು ಬೈಕ್ ನಿಲ್ಲಿಸಿದಾಗ ಹಿಂಬಾಲಿಸಿದ ಕೆಲ ಗೂಂಡಾಗಳು ಆತನನ್ನು ಸುತ್ತುವರಿದು ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಅಪ್ಪನಿಗೆ ಹೊಡೆಯುತ್ತಿರುವುದನ್ನು ನೋಡಿದ ಮಗ ಜೋರಾಗಿ ಅಳತೊಡಗಿದ್ದಾನೆ.
ಮಗನನ್ನು ಶಾಲೆಗೆ ಬಿಡಲು ವ್ಯಕ್ತಿ ಬೈಕ್‌ನಲ್ಲಿ ಬಂದಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತದೆ. ಮುಂದೆ ಮಗ ಕುಳಿತಿದ್ದಾನೆ. ಕೆಲವು ಗೂಂಡಾಗಳು ತನ್ನನ್ನು ಹಿಂಬಾಲಿಸುತ್ತಿರುವುದು ಆ ವ್ಯಕ್ತಿಗೆ ತಿಳಿದಿರಲಿಲ್ಲ. ಶಾಲೆ ತಲುಪಿದ ವ್ಯಕ್ತಿ ಬೈಕ್ ನಿಲ್ಲಿಸಿದಾಗ ತಕ್ಷಣ 4-5 ಗೂಂಡಾಗಳು ಹಲ್ಲೆ ನಡೆಸಿ ದೊಣ್ಣೆ, ರಾಡ್‌ಗಳಿಂದ ಮನಬಂದಂತೆ ಥಳಿಸಿದ್ದಾರೆ. ತಂದೆಯನ್ನು ಥಳಿಸುತ್ತಿದ್ದಾಗ ಗೂಂಡಾಗಳಲ್ಲಿ ಒಬ್ಬರು ಮಗುವನ್ನು ಸುರಕ್ಷಿತವಾಗಿ ಬೈಕ್‌ನಿಂದ ಕೆಳಗಿಳಿಸಿ ನಂತರ ದೊಣ್ಣೆಯಿಂದ ಹೊಡೆದಿದ್ದಾರೆ.
ಅಲ್ಲಿದ್ದ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ ವ್ಯಕ್ತಿಯ ಬೆಂಬಲಕ್ಕೆ ಧ್ವನಿಗೂಡಿಸಲು ಪ್ರಯತ್ನಿಸಿದ್ದಾರೆ. ಗೂಂಡಾಗಳು ಅಲ್ಲಿಂದ ಹೊರನಡೆದ ನಂತರ ಇತರ ಕೆಲವರೊಂದಿಗೆ ಆ ವ್ಯಕ್ತಿಯ ಬಳಿಗೆ ಬಂದು ಅವನಿಗೆ ಮಹಿಳೆ ಸಹಾಯ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರುಶಾಲೆಯ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ. ಈ ಘಟನೆ ನಡೆದಾಗ ಸುತ್ತಮುತ್ತ ಅನೇಕ ಪೋಷಕರು ತಮ್ಮ ಮಕ್ಕಳನ್ನೂ ಶಾಲೆಗೆ ಬಿಡಲು ಬಂದಿದ್ದರು. ಗೂಂಡಾಗಳು ಮತ್ತು ವ್ಯಕ್ತಿಯ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈಗ ಗೂಂಡಾಗಳು ಈ ಕೃತ್ಯ ಎಸಗಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
https://twitter.com/Gagan4344/status/1689558174393892864/history
ತಿರುಪತಿಯಲ್ಲಿ ಚಿರತೆ ಭೀತಿ…ಒಂದೇ ವರ್ಷದಲ್ಲಿ ಎರಡನೇ ಘಟನೆ; ಪಾದಚಾರಿ ಮಾರ್ಗದಲ್ಲಿ ಓಡಾಡಲು ಭಯಪಡುತ್ತಿರುವ ಭಕ್ತರು

Sign in to your account
Please enter an answer in digits:20 + 17 =
Remember me
