ಮುಂಬೈ:ನಗರದ ಪ್ರಸಿದ್ಧ ತಾಜ್​ ಮಹಲ್ ಟವರ್​ ಹೋಟೆಲ್​​ನ ಆರು ಮಂದಿ ಉದ್ಯೋಗಿಗಳಿಗೆ ಕರೊನಾ ವೈರಸ್​ ತಗುಲಿದ್ದು ದೃಢಪಟ್ಟಿದೆ ಎಂದು ಅಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ತಿಳಿಸಿದ್ದಾರೆ. ಹೋಟೆಲ್ ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಇದೆ.ತಾಜ್​ ಹೋಟೆಲ್​ಗಳನ್ನು ನಡೆಸುತ್ತಿರುವ ಇಂಡಿಯನ್​ ಹೋಟೆಲ್ಸ್​ ಕಂಪನಿಯೂ ಸಹ, ಕೆಲವು ಉದ್ಯೋಗಿಗಳಲ್ಲಿ ಕರೊನಾ ವೈರಸ್​ ಕಾಣಿಸಿಕೊಂಡಿದ್ದಾಗಿ ಹೇಳಿದೆ. ಆದರೆ ನಿಖರ ಸಂಖ್ಯೆಯನ್ನು ತಿಳಿಸಿಲ್ಲ.
ಮುಂಬೈನ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಇಂಡಿಯನ್​ ಹೋಟೆಲ್ಸ್ ಕಂಪನಿಯು ತನ್ನ ಹೋಟೆಲ್​ಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಊಟಾಹಾರದ ವ್ಯವಸ್ಥೆಯನ್ನು ಮಾಡಿದೆ.
ತಾಜ್​ ಪ್ಯಾಲೇಸ್​, ತಾಜ್​ ಲ್ಯಾಂಡ್ಸ್​ ಎಂಡ್​, ವಿವಾಂತಾ ಪ್ರೆಸಿಡೆಂಟ್​ ಮತ್ತು ತಾಜ್​ ಸಂತಾಕ್ರೂಜ್​​ಗಳನ್ನು ಈ ಸಂಸ್ಥೆ ನಡೆಸುತ್ತಿದೆ. ಎಲ್ಲ ಹೋಟೆಲ್​ಗಳ ಉದ್ಯೋಗಿಗಳಲ್ಲೂ ಕರೊನಾ ಕಾಣಿಸಿಕೊಂಡಿದೆಯಾ? ಎಷ್ಟುಮಂದಿಗೆ ತಗುಲಿದೆ ಎಂಬುದು ಖಚಿತವಾಗಿಲ್ಲ. ಆದರೆ ವೈದ್ಯರು ನೀಡಿರುವ ವರದಿ ಅನ್ವಯ ಕೊಲಾಬಾದಲ್ಲಿರುವ ತಾಜ್​ ಪ್ಯಾಲೇಸ್​ನ ಆರು ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.ಸದ್ಯ ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಈ ಆರು ಮಂದಿಯ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ.
ತಾಜ್​ ಮಹಲ್​ ಪ್ಯಾಲೇಸ್​ ಹೋಟೆಲ್​ನಲ್ಲಿ ಈಗ ಗ್ರಾಹಕರಾಗಲಿ, ಅತಿಥಿಗಳಾಗಲೀ ಯಾರೂ ಇಲ್ಲ. ಕೆಲವೇ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + six =
Remember me
