ರಾಜಮಂಡ್ರಿ:ಒಂದಲ್ಲ, ಎರಡಲ್ಲ ಬರೋಬ್ಬರಿ 108 ಬೈಕ್​ಗಳನ್ನು ಕಳುವು ಮಾಡಿದ ಖತರ್ನಾಕ್​ ಖದೀಮರಿಬ್ಬರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕವದಿ ನಾನಿ ಸಿಂಗಮ್​ ಮತ್ತು ಬಂಡಿ ಶಿವ ಎಂದು ಗುರುತಿಸಲಾಗಿದೆ. ಇಬ್ಬರು ಸಹ ಈಸ್ಟ್​ ಗೋದಾವರಿ ಜಿಲ್ಲೆಯ ಅಲಮರು ಮಂಡಲದ ಮಡಿಕಿ ಗ್ರಾಮದವರು. ಬಂಧಿತರಿಂದ ಸುಮಾರು 43 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಹೊರತುಪಡಿಸಿದರೆ, ಪ್ರಕರಣದಲ್ಲಿ ಇತರೆ ಆರೋಪಿಗಳಾದ ಕಾಥೆಟಿ ಚಿನ್ನ, ಸಿಂಗಿದಿ ಹರಿ ದುರ್ಗ ಪ್ರಸಾದ್​, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಎಂಬುವವರನ್ನು ಬಂಧಿಸಲಾಗಿದೆ. ಇವರು ಕದ್ದ ಬೈಕ್​ಗಳನ್ನು ಕೊಂಡು ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವೃತ್ತಿಯಲ್ಲಿ ಮೇಸನ್​ ಆಗಿರುವ ಕವದಿ ನಾನಿ ಸಿಂಗಮ್​ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಇತ್ತೀಚೆಗಷ್ಟೇ ಬೈಕ್​ ಕದ್ದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2016ರಲ್ಲಿ ಜೆಸಿಬಿ ಆಪರೇಟರ್​ ಆಗಿ ಅಬುದಾಬಿಗೆ ತೆರಳಿದ್ದ ಈತ 2018ರವರೆಗೆ ಕೆಲಸ ಮಾಡಿದ್ದ. ಪ್ರಕರಣದ ಮತ್ತೊಬ್ಬ ಆರೋಪಿ ಬಂಡಿ ಶಿವ ಕೂಡ ಮೇಸನ್​ ಆಗಿದ್ದು, ಈತ ನಾನಿ ಸಿಂಗಮ್​ ಸೋದರ ಸಂಬಂಧಿ. ಸುಲಭವಾಗಿ ಹಣ ಸಂಪಾದಿಸಲು ಬೈಕ್​ ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳು ಐಶಾರಾಮಿ ಜೀವನವನ್ನು ಸಹ ನಡೆಸುತ್ತಿದ್ದರು.
ಇದನ್ನೂ ಓದಿ:ಪತಿಯನ್ನು ರಕ್ಷಿಸಿಕೊಳ್ಳಲು ನೋಟುಗಳನ್ನು ಸುಟ್ಟ ಅರಣ್ಯಾಧಿಕಾರಿ ಪತ್ನಿಗೆ ಬಿಗ್​ ಶಾಕ್​!
ತಾವು ಗುರಿಯಾಗಿರಿಸಿದ ವಾಹನಗಳನ್ನು ಕದಿಯಲು ನಕಲಿ ಕೀಗಳನ್ನು ಬಳಸುತ್ತಿದ್ದರು ಅಥವಾ ಲಾಕ್​ಗಳನ್ನು ಮುರಿದು ಬೈಕ್ ಕದ್ದೊಯ್ಯುತ್ತಿದ್ದರು. ಬಳಿಕ ಬೈಕ್​ಗಳನ್ನು ಕಾಥೇಟಿ ಚಿನ್ನ, ಸಿಂಗುಡಿ ಹರಿ ದುರ್ಗ ಪ್ರಸಾದ್​, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಸಹಾಯದಿಂದ ಮಾರಾಟ ಮಾಡುತ್ತಿದ್ದರು. ಈ ನಾಲ್ವರು ಆರೋಪಿಗಳು ಗ್ರಾಹಕರಿಂದ ಮುಂಗಡವಾಗಿ 7 ರಿಂದ 10 ಸಾವಿರ ರೂ. ತೆಗೆದುಕೊಳ್ಳುತ್ತಿದ್ದರು. ಬಳಿಕ ಸಿಂಗಮ್​ ಮತ್ತು ಶಿವನಿಂದ ಬೈಕ್​ಗಳನ್ನು ಸಂಗ್ರಹಿಸಿ ಆರ್​ಸಿ ಬುಕ್​ ವ್ಯವಸ್ಥೆ ಮಾಡಿದ ಬಳಿಕ ಉಳಿದ ಹಣವನ್ನು ಪಡೆದುಕೊಳ್ಳುತ್ತಿದ್ದರು. ನಿರಂತರವಾಗಿ ಬೈಕ್​ ಕಳ್ಳತನ ಪ್ರಕರಣಗಳು ದಾಖಲಾಗುವುದನ್ನು ನೋಡಿ ಎಚ್ಚೆತ್ತ ಪೊಲೀಸರು ಹೊಂಚು ಹಾಕಿ ಖದೀಮರನ್ನು ಹಿಡಿದಿದ್ದಾರೆ.
ಸುಮಾರು 108 ಬೈಕ್​ಗಳನ್ನು ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಈಸ್ಟ್​ ಗೋದಾವರಿ ಜಿಲ್ಲೆಯಿಂದ 34, ವೆಸ್ಟ್​ ಗೋದಾವರಿ ಜಿಲ್ಲೆಯಲ್ಲಿ 22, ವಿಶಾಖಪಟ್ಟಣಂದಿಂದ 43, ವಿಜಯವಾಡದಿಂದ 7 ಮತ್ತು ವಿಜಯನಗರಂದಿಂದ ಎರಡು ಬೈಕ್​ಗಳನ್ನು ಕದ್ದಿದ್ದಾರೆ. ಸದ್ಯ ಬಂಧಿತವಾಗಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 379, 411 ಮತ್ತು 413ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಭಾರತಕ್ಕೆ ಮರಳುತ್ತಿದ್ದ ಏಳು ಮಂದಿ ಭಾರತೀಯರ ಅಪಹರಣ ಮಾಡಿದ ಲಿಬಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
