ಕೋಲ್ಕತ:ಪಶ್ಚಿಮ ಬಂಗಾಳ ಮತ್ತು ಕೇರಳದಿಂದ ಅಲ್ ಕೈದಾದ 9 ಉಗ್ರರನ್ನು ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಬಂಧಿಸಿದ ಬೆನ್ನಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರು ಜನರನ್ನು ಕೋಲ್ಕತ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಇವರಲ್ಲದೆ, ಜಾಮೀನು ರಹಿತ ವಾರೆಂಟ್ ಇದ್ದು, ತಲೆಮರೆಸಿಕೊಂಡಿದ್ದ 74 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ನಿಶ್ಚಿತ ಆರೋಪ ಎದುರಿಸುತ್ತಿರುವ 47 ಆರೋಪಿಗಳು ಮತ್ತು ಮುಂಜಾಗರೂಕತಾ ಕ್ರಮವಾಗಿ 42 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೃಹತ್ ಪ್ರಮಾಣದ ಶೋಧ ಕಾರ್ಯಾಚರಣೆ ನಿನ್ನೆ ರಾತ್ರಿ 9 ಗಂಟೆಗೆ ಕೈಗೊಳ್ಳಲಾಗಿತ್ತು. ಕೋಲ್ಕತದ ವಿವಿಧ ಭಾಗಗಳಲ್ಲಿ ಈ ದಾಳಿ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿಮಾಡಿದೆ.
ಇದನ್ನೂ ಓದಿ:ಶ್ರೇಷ್ಠಮಾರ್ಗದಲ್ಲಿ ನಡೆಯಲೂ ಛಾತಿ ಬೇಕು!
ಕೇಂದ್ರೀಯ ಗುಪ್ತಚರ ಸಂಸ್ಥೆ ನೀಡಿದ್ದ ಮಾಹಿತಿ ಆಧರಿಸಿ ಈ ದಾಳಿ ನಡೆದಿತ್ತು. ಈ ದಾಳಿಯ ವೇಳೆ ಅಕ್ರಮ ಮದ್ಯವನ್ನು ಪತ್ತೆ ಹಚ್ಚಲಾಗಿತ್ತು. ಹಲವು ವಾಹನಗಳನ್ನೂ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಚೀನಾ-ಅರುಣಾಚಲ ಪ್ರದೇಶದ ಗಡಿ ವಿಂಗಡಿಸುವುದು ಎಲ್​ಎಸಿ ಅಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
