ನೋಯ್ಡಾ: ತಪ್ಪು ಕೋವಿಡ್​ ವರದಿ ನೀಡಿ ಅನಗತ್ಯವಾಗಿ 35 ಜನರನ್ನು 3 ದಿನ ಕ್ವಾರಂಟೈನ್​ನಲ್ಲಿ ಇರಿಸುವಂತೆ ಮಾಡಿದ್ದಕ್ಕಾಗಿ ನೋಯ್ಡಾದ ಖಾಸಗಿ ಪ್ರಯೋಗಾಲಯದ ವಿರುದ್ಧ ದೂರು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಕೆಲವು ಪ್ರಯೋಗಾಲಯಗಳಿಗೆ ನೋಯ್ಡಾ ಜಿಲ್ಲಾಡಳಿತ ನೋಟಿಸ್​ ಜಾರಿ ಮಾಡಿದೆ. ಅಲ್ಲದೆ, ಪೊಲೀಸರು ಒಂದು ಆ ಪ್ರಯೋಗಾಲಯದ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ನೆಗಡಿ, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೋಯ್ಡಾದ 35 ಮಂದಿ ಖಾಸಗಿ ಚಿಕಿತ್ಸಾಲಯದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ತಕ್ಷಣವೇ ಅವರೆಲ್ಲರನ್ನೂ ಕೋವಿಡ್​ ಪರೀಕ್ಷೆಗೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದರು.
ಅವರೆಲ್ಲರಿಗೂ ಕರೊನಾ ಸೋಂಕು ತಗುಲಿರುವುದಾಗಿ ಪ್ರಯೋಗಾಲಯಗಳ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ 35 ಜನರನ್ನು ಸರ್ಕಾರಿ ಕ್ವಾರಂಟೈನ್​ ಸೌಲಭ್ಯದಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಇವರೆಲ್ಲರ ಗಂಟಲ ದ್ರವದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ರಾಷ್ಟ್ರೀಯ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್​ಐವಿ) ಕಳುಹಿಸಿದಾಗ ಅವರಲ್ಲಿ ಯಾರಿಗೂ ಕರೊನಾ ಸೋಂಕು ಇಲ್ಲ ಎಂಬುದು ಖಚಿತಪಟ್ಟಿತ್ತು. ಇದು ಆರೋಗ್ಯಾಧಿಕಾರಿಗಳನ್ನು ವಿಚಲಿತಗೊಳಿಸಿತ್ತು. ತಕ್ಷಣವೇ ಅವರು ಕ್ವಾರಂಟೈನ್​ ಕೇಂದ್ರದಲ್ಲಿದ್ದ ಈ ಎಲ್ಲ 35 ಜನರನ್ನು ಬಿಡುಗಡೆ ಮಾಡಿದರು ಎನ್ನಲಾಗಿದೆ.
ಇದನ್ನೂ ಓದಿ:ಬಲೂಚಿಸ್ತಾನದಿಂದ ಪೇರಿ ಕಿತ್ತ ಪಾಕಿಸ್ತಾನ ಸೇನಾಪಡೆ, ಮಿಲಿಟರಿ ಕಟ್ಟಡಗಳಿಗೆ ಬೆಂಕಿ
ಆದರೂ ಆ ಎಲ್ಲ 35 ಜನರ ಮೇಲೆ ನಿಗಾ ಇರಿಸಲಾಗಿದೆ. ಇವರೆಲ್ಲರಿಗೂ ಕೋವಿಡ್​ ಸೋಂಕು ತಗುಲಿರುವುದಾಗಿ 6 ಪ್ರಯೋಗಾಲಯಗಳು ವರದಿ ನೀಡಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವುಗಳ ಮೇಲೂ ನಿಗಾಯಿರಿಸಲಾಗಿದೆ. ಒಂದು ಪ್ರಯೋಗಾಲಯದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಅದರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಉಳಿದ 5 ಪ್ರಯೋಗಾಲಯಗಳಿಗೆ ನೋಟಿಸ್​ ನೀಡಲಾಗಿದೆ ಎಂದು ನೋಯ್ಡಾದ ಮುಖ್ಯ ವೈದ್ಯಾಧಿಕಾರಿ ದೀಪ್​ ಓಹ್ರಿ ತಿಳಿಸಿದ್ದಾರೆ.
ಕೋವಿಡ್​ ಪರೀಕ್ಷೆ ವೇಳೆ ಈ ಪ್ರಯೋಗಾಲಯಗಳು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದ, ಪ್ರಯೋಗಾಲಯದ ಅಧಿಕಾರಿಗಳು ನೋಟಿಸ್​ಗೆ ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಆ 5 ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಂಕಿತ ಸೋಂಕಿತರಿಂದ ಸಂಗ್ರಹಿಸಲಾಗಿದ್ದ ಗಂಟಲದ್ರವ ಮಾದರಿಯನ್ನು ಪ್ರಯೋಗಾಲಯದ ಉದ್ಯೋಗಿಗಳು ಸಮರ್ಪಕವಾದ ತಾಪಮಾನದಲ್ಲಿ ಇರಿಸದೇ ಹೋಗಿದ್ದು ತಪ್ಪು ವರದಿ ಬರಲು ಕಾರಣ ಎಂಬುದು ಮೇಲ್ನೋಟಕ್ಕೇ ಸಾಬೀತಾಗಿದೆ. ಅಲ್ಲದೆ, ಈ ಪ್ರಯೋಗಾಲಯಗಳು ಕೋವಿಡ್​-19 ಪರೀಕ್ಷೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನೋಂದಣಿಯನ್ನೂ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಜತೆಗೆ ಕೋವಿಡ್​-19 ಪರೀಕ್ಷೆಗೆ 4,500ರಿಂದ 5 ಸಾವಿರ ರೂ. ಶುಲ್ಕ ವಸೂಲಿ ಮಾಡಿದ್ದವು ಎನ್ನಲಾಗಿದೆ.
ಕರೊನಾ ನಡುವೆಯೇ ನೀರಾಗುತ್ತಿದೆ ಗುಲಾಬಿ! ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಚಮತ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
