ನವದೆಹಲಿ:ಕೊವಿಡ್​-19 ಮಹಾಮಾರಿಗೆ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಜಾರ್ಖಂಡದ ಧನ್​ಬಾದ್​ ಜಿಲ್ಲೆಯ ಕತ್ರಸ್​​ನಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಆಕೆಯ ಐದು ಜನ ಗಂಡುಮಕ್ಕಳು ಕೊವಿಡ್​-19ನಿಂದ ಮೃತಪಟ್ಟಿದ್ದಾರೆ.
ಮಹಿಳೆಗೆ 88 ವರ್ಷ. ಇವರು ಒಂದು ಮದುವೆಗಾಗಿ ದೆಹಲಿಯಿಂದ ಧನಬಾದ್​ಗೆ ಆಗಮಿಸಿದ್ದರು. ಆದರೆ ಇಲ್ಲಿಗೆ ಬರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಬೊಕಾರೋದ ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.ಅವರ ಸಾವಿನ ಬಳಿಕ ಕರೊನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಆದರೆ ರಿಪೋರ್ಟ್​ ಬರುವುದಕ್ಕೂ ಮೊದಲೇ ಐವರು ಪುತ್ರರು ಸೇರಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.ಇದನ್ನೂ ಓದಿ:ಚೀನಾದಲ್ಲಿ ಚಿತ್ರಮಂದಿರ ಓಪನ್​; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!
ವರದಿಯಲ್ಲಿ ಕರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಐವರು ಪುತ್ರರನ್ನೂ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಅವರೂ ಕೂಡ ಎಲ್ಲರೂ 60-70 ವರ್ಷ ಆಸುಪಾಸಿನವರು. ವೈರಸ್​ನಿಂದ ಪಾರಾಗಲು ಸಾಧ್ಯವಾಗದೆ, ಒಬ್ಬರ ಬಳಿಕ ಮತ್ತೊಬ್ಬರಂತೆ ಮೃತಪಟ್ಟಿದ್ದಾರೆ.
ಮಹಿಳೆಯ ಇನ್ನೊಬ್ಬ ಮಗ ದೆಹಲಿಯಲ್ಲಿ ಇದ್ದವರು ಸದ್ಯ ಪಾರಾಗಿದ್ದಾರೆ. (ಏಜೆನ್ಸೀಸ್​)
ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ…! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 3 =
Remember me
