ಹೈದರಾಬಾದ್​:ಜನವರಿ 29ರಂದು ತೆಲಂಗಾಣದ ಮೆಹಬೂಬಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದುರ್ಮರಣ ಹೊಂದಿದ್ದಾರೆ. ವಿಷಾದನೀಯ ಸಂಗತಿಯೆಂದರೆ ಮೃತರು ವಿವಾಹ ಸಮಾರಂಭಕ್ಕೆಂದು ಬಟ್ಟೆ ಖರೀದಿಸಲು ತೆರಳಿದ್ದ ವೇಳೆಯೇ ದುರ್ಘಟನೆ ಸಂಭವಿಸಿದ್ದು, ಹಸೆಮಣೆ ಏರಬೇಕಿದ್ದ ವಧುವೂ ಸಹ ದುರಂತ ಸಾವಿಗೀಡಾಗಿದ್ದಾಳೆ.
ಅಪಘಾತವು ಮೆಹಬೂಬಬಾದ್​ನ ಗುಡುರ್​ ಮಂಡಲದ ಮರ್ರಿಮಿತ್ತ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮದುವೆಗೆ ಬಟ್ಟೆ ತರಲೆಂದು ಆಟೋ ರಿಕ್ಷಾದಲ್ಲಿ ತೆರಳಿದ್ದರು. ಮಾರ್ಗ ಮಧ್ಯೆ ಎದುರುಗಡೆಯಿಂದ ವೇಗವಾಗಿ ಜವರಾಯನಂತೆ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದು ವಧು ಸೇರಿದಂತೆ ಒಂದೇ ಕುಟುಂಬದ ಆರು ಮಂದಿಯ ಪ್ರಾಣ ಹೊತ್ತೊಯ್ದಿದಿದೆ.
ಇದನ್ನೂ ಓದಿರಿ:ಸೋದರತ್ತೆಯನ್ನೇ ರೇಪ್​ ಮಾಡಲು ಪ್ರಯತ್ನಿಸಿದ ಯುವಕ! ಕುತ್ತಿಗೆ ಕೊಯ್ದು ಕೊಂದೇ ಬಿಟ್ಟ
ಮೃತರನ್ನು ವಧು ಪರಿಮಳಾ, ತಂದೆ ಜತೊತ್​ ಕಾಸ್ನಾ, ತಾಯಿ ಜತೂತ್​ ಕಲ್ಯಾಣಿ, ಸಹೋದರ ಜತೂತ್​ ಪ್ರದೀಪ್​ ಮತ್ತು ಸಂಬಂಧಿಕರಾದ ಜತೂತ್​ ಪ್ರಸಾದ್​, ಅವರ ಮಗಳು ಜತೂತ್​ ದಿವ್ಯಾ ಮತ್ತು ಆಟೋ ಚಾಲಕ ಜತೂತ್​ ರಾಮು ಎಂದು ಗುರುತಿಸಲಾಗಿದೆ.
ಮೃತ ಕುಟುಂಬವೂ ಗುಡುರ್​ ಮಂಡಲದ ಎರ್ರಕುಂಟಾ ತಾಂಡಾ ಮೂಲದವರು. ಪರಿಮಳಾ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಬಟ್ಟೆ ಖರೀದಿಸಲೆಂದು ಬಾಡಿಗೆ ಆಟೋ ಮೂಲಕ ಕುಟುಂಬ ನರಸಂಪೇಟ್​ ಪಟ್ಟಣಕ್ಕೆ ತೆರಳಿದ್ದರು. ಮಾರ್ಗ ಮಧ್ಯೆ ಎದರುಗಡೆಯಿಂದ ವೇಗವಾಗಿ ಬಂದ ಲಾರಿ ನೋಡನೋಡುತ್ತಿದ್ದಂತೆ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪರಿಮಳಾ ಸೇರಿ ಆರು ಮಂದಿಯು ಸಹ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ದುರಂತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಆಘಾತ ವ್ಯಕ್ತಪಡಿಸಿ, ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸಿದ್ದಾರೆ. ಅಲ್ಲದೆ, ಅಪಘಾತ ಹೇಗೆ ಸಂಭವಿಸಿತು? ಎಂದು ತನಿಖೆಗೆ ಆದೇಶಿಸಿದ್ದು, ಗಾಯಗೊಂಡವರ ಚಿಕಿತ್ಸೆಗೆ ಅಗತ್ಯ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಸೆಕ್ಸ್​ ವೇಳೆ ದುರಂತ ಸಾವಿಗೀಡಾದ ವ್ಯಕ್ತಿ: ಮರಣೋತ್ತರ ವರದಿಯಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ!
ಪ್ರೇಯಸಿ ಶವ ತಂದು ರಸ್ತೆಬದಿ ಎಸೆದ ಪ್ರಕರಣ: ಜ.26ರ ರಾತ್ರಿ ಹೋಟೆಲ್​ ರೂಮ್ ಘಟನೆ ಬಿಚ್ಚಿಟ್ಟ ಪ್ರಿಯಕರ!​

ಪತ್ರ ಬರೆದಿಟ್ಟು ಯುವಕ ನಾಪತ್ತೆ: ಪತ್ರ ಓದಿ ಬೆಚ್ಚಿಬಿದ್ದ ತಂದೆ-ತಾಯಿ ಪೊಲೀಸ್​ ಠಾಣೆಗೆ ದೌಡು!

ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 18 =
Remember me
