ನವದೆಹಲಿ:ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಯುವಕರು, ರೈತರು, ಮಹಿಳೆಯರು ಮತ್ತು ಸಣ್ಣ ಉದ್ಯಮಗಳ ಸುತ್ತ ಚಕ್ರವ್ಯೂಹವನ್ನು (ಮಹಾಭಾರತದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಯುದ್ಧ ರಚನೆ) ರಚಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(ಜುಲೈ 29) ಆರೋಪಿಸಿದ್ದಾರೆ.
ಇದನ್ನು ಓದಿ:ಸಿಎಂ ಹೇಮಂತ್​ ಸೊರೆನ್​​​ ಜಾಮೀನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​​​​
ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಮಲ (ಬಿಜೆಪಿಯ ಚಿಹ್ನೆ) ರಚನೆಯ ಕೇಂದ್ರದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಮೋಹನ್ ಭಾಗವತ್, ಅಜಿತ್ ದೋವಲ್, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಆರು ಜನರು ಇದ್ದಾರೆ. ಸಾವಿರಾರು ವರ್ಷಗಳ ಹಿಂದೆ, ಕುರುಕ್ಷೇತ್ರದ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಆರು ಜನರು ಕೊಂದರು. ಚಕ್ರವ್ಯೂಹದೊಳಗೆ ಭಯದ ಸ್ಥಿತಿಯಿದ್ದು, ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಆರು ಜನರು ಕೊಂದಿದ್ದಾರೆ. ನಾನು ಸ್ವಲ್ಪ ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯುತ್ತಾರೆ. ಅದು ಕಮಲದ ಆಕಾರದಲ್ಲಿದೆ ಎಂದು ಅಧ್ಯಯನದ ನಂತರ ತಿಳಿಯಿತು ಎಂದು ರಾಹುಲ್ ಹೇಳಿದರು.
ಚಕ್ರವ್ಯೂಹವು ಕಮಲದ ಹೂವಿನ ಆಕಾರದಲ್ಲಿದೆ. 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹವನ್ನು ರಚಿಸಲಾಗಿದೆ. ಅದರ ಚಿಹ್ನೆಯನ್ನು ಪ್ರಧಾನಿ ಮೋದಿ ಎದೆಯ ಮೇಲೆ ಧರಿಸುತ್ತಾರೆ. ಹೇಗೆ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದನೋ ಅದೇ ಭಾರತಕ್ಕೆ ಆಗುತ್ತಿದೆ. ದೇಶದ ಯುವಕರು, ರೈತರು, ತಾಯಂದಿರು ಮತ್ತು ಸಹೋದರಿಯರೊಂದಿಗೆ ಅದೇ ರೀತಿ ಮಾಡಲಾಗುತ್ತಿದೆ.
ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಅಭಿಮನ್ಯುವನ್ನು ಸುತ್ತುವರೆದು ಕೊಂದರು. ಇಂದಿಗೂ ಚಕ್ರವ್ಯೂಹದಲ್ಲಿ ಆರು ಜನರಿದ್ದಾರೆ. ಆರು ಜನರು ಕೇಂದ್ರವನ್ನು ನಿಯಂತ್ರಿಸುತ್ತಾರೆ. ನರೇಂದ್ರ ಮೋದಿ, ಅಮಿತ್ ಷಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಎಂದು ಹೇಳಿದರು. (ಏಜೆನ್ಸೀಸ್​​)
ದಾಸವಾಳ ಚಹಾ ರೋಗಕ್ಕೆ ಮದ್ದು!; ವೈದ್ಯರ ಟೀಕೆ ಬೆನ್ನಲ್ಲೇ ಪೋಸ್ಟ್​​ ಡಿಲೀಟ್ ಮಾಡಿದ ನಯನತಾರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + two =
Remember me
