ಭೋಪಾಲ್​:ಲಾಕ್​ಡೌನ್​ ಇದ್ದರೂ ಹಲವು ವಿನಾಯ್ತಿಗಳನ್ನು ನೀಡಲಾಗಿದೆ. ಆದರೆ, ಕ್ಷೌರದಂಗಡಿ, ಸಲೂನ್​ಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗೋದು ಕಷ್ಟಸಾಧ್ಯವೇ ಸರಿ.
ಮಧ್ಯಪ್ರದೇಶದ ಖರಗೋನ್​ ಜಿಲ್ಲೆಯ ಬಡಗಾಂವ್​ ಎಂಬ ಹಳ್ಳಿಯಲ್ಲಿ ಆರು ಜನರಿಗೆ ಸೋಂಕು ತಗುಲಿದೆ. ಇವರೆಲ್ಲರಿಗೆ ಸೋಂಕು ಹರಡಿದ್ದು, ಗ್ರಾಮದಲ್ಲಿದ್ದ ಕ್ಷೌರದಂಗಡಿಯಿಂದಾಗಿ. ಇವರೆಲ್ಲರಿಗೂ ಒಂದೇ ಬಟ್ಟೆ ಹಾಗೂ ಸಾಮಗ್ರಿಗಳನ್ನು ಬಳಸಿ ಕ್ಷೌರಿಕ ಹೇರ್​ಕಟ್​ ಮಾಡಿದ್ದ. ಹೀಗಾಗಿ ಸದ್ಯ ಇಡೀ ಗ್ರಾಮವನ್ನೇ ಸೀಲ್​ ಡೌನ್​ ಮಾಡಲಾಗಿದೆ.
ಇಂದೋರ್​ನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಗ್ರಾಮಕ್ಕೆ ಹಿಂದಿರುಗಿದ್ದ. ಆತ ಏಪ್ರಿಲ್​ 5ರಂದು ಹಳ್ಳಿಯಲ್ಲಿದ್ದ ಕ್ಷೌರದಂಗಡಿಗೆ ತೆರಳಿ ಹೇರ್​ಕಟ್ ಮಾಡಿಸಿಕೊಂಡಿದ್ದ. ಬಳಿಕ ಆತನಿಗೆ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ದಿವ್ಯೇಶ್​ ವರ್ಮಾ ಮಾಹಿತಿ ನೀಡಿದ್ದಾರೆ.
ಈತನ ಪ್ರಾಥಮಿಕ ಸೋಂಕಿತರ ಪಟ್ಟಿ ಮಾಡುತ್ತಿದ್ದಾಗ ಆತ ಕ್ಷೌರ ಮಾಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಅದೇ ದಿನ ಒಟ್ಟು 12 ಜನರು ಕ್ಷೌರ ಮಾಡಿಸಿಕೊಂಡಿದ್ದರು. ಅವರನ್ನು ಪರೀಕ್ಷೆಗೊಳಪಡಿಸಿದಾಗ 6 ಜನರು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ.
ಆದರೆ, ಅಚ್ಚರಿಯ ಸಂಗತಿ ಎಂದರೆ ಕ್ಷೌರಿಕನಲ್ಲಿ ಸೋಂಕು ಪತ್ತೆಯಾಗಿಲ್ಲ. ಆತನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಯಲ್ಲಿ ನೆಗೆಟಿವ್​ ಎಂದು ವರದಿ ಬಂದಿದೆ.
ತನ್ನೂರಿಗೆ ತೆರಳಲು ಆತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 4 =
Remember me
