ನವದೆಹಲಿ: ದೆಹಲಿಯ ನಿಜಾಮುದ್ದೀನ್​ ಪಶ್ಚಿಮ ಏರಿಯಾದ ಮಸೀದಿಯಲ್ಲಿ ಮಾ.1ರಿಂದ 15ರವರೆಗೆ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ 6 ಮಂದಿ ತೆಲಂಗಾಣದಲ್ಲಿ ಮೃತಪಟ್ಟಿದ್ದಾರೆ.
ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ಮುಸ್ಲಿಂ ಧಾರ್ಮಿಕ ಸಂಘಟನೆಯಾದ ತಬ್ಲೀ ಎ ಜಮಾತ್​ನಿಂದ ಪ್ರಾರ್ಥನಾ ಸಭೆ ನಡೆದಿತ್ತು. ಇದರಲ್ಲಿ ಇಂಡೋನೇಷಿಯಾ, ಮಲೇಷಿಯಾ, ಸೌದಿ ಅರೇಬಿಯಾ ದೇಶಗಳಿಂದ ಆಗಮಿಸಿದ ಕೆಲವರೂ ಭಾಗವಹಿಸಿದ್ದರು. ಒಟ್ಟು 2000 ಜನರು ಭಾಗವಹಿಸಿದ್ದ ಸಭೆಯಲ್ಲಿ 600 ಮಂದಿ ಭಾರತೀಯರೇ ಇದ್ದರು. ಮಾ.1ರಿಂದ 15ರವರೆಗೆ ನಡೆದರೂ, ಅದಾದದ ಬಳಿಕವೂ ಸುಮಾರು 1400 ಜನ ಅಲ್ಲೇ ಉಳಿದುಕೊಂಡಿದ್ದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದರಲ್ಲಿ ಪಾಲ್ಗೊಂಡಿದ್ದ 60 ವರ್ಷದ ಓರ್ವ ಧರ್ಮಗುರು ಕಳೆದ ವಾರ ಕರೊನಾ ವೈರಸ್​ನಿಂದ ಶ್ರೀನಗರದಲ್ಲಿ ಮೃತಪಟ್ಟಿದ್ದ. ಆಗಿನಿಂದಲೇ ಎಚ್ಚೆತ್ತುಕೊಳ್ಳಲಾಗಿತ್ತು. ಮಸೀದಿಯಿಂದ ರೈಲು, ವಿಮಾನಗಳಲ್ಲಿ ತೆರಳಿದವರ ಗುರುತು ಪತ್ತೆಹಚ್ಚಿದ್ದಲ್ಲದೆ, ಅವರ ಸಂಪರ್ಕಕ್ಕೆ ಬಂದವರನ್ನೂ ಟ್ರ್ಯಾಕ್​ ಮಾಡಲು ಪ್ರಯತ್ನಿಸಲಾಗುತ್ತಿತ್ತು.
ಸದ್ಯ ತೆಲಂಗಾಣ ಸರ್ಕಾರವೂ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಮೃತಪಟ್ಟ ಆರು ಮಂದಿಯೂ ನವದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡವರು ಎಂದು ದೃಢಪಡಿಸಿದೆ.
ಕಳೆದ ವಾರ ಧರ್ಮಗುರು ಮೃತಪಡುತ್ತಿದ್ದಂತೆ ಈ ಸಭೆಯಲ್ಲಿ ಭಾಗವಹಿಸಿದ್ದ 300 ಜನರನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಕರೊನಾ ತಪಾಸಣೆ ನಡೆಸಲಾಗಿದೆ. ಅನೇಕರನ್ನು ಇನ್ನೂ ಪ್ರತ್ಯೇಕವಾಗಿಯೇ ಇಡಲಾಗಿದೆ.ಅಂಡಮಾನ್ ನಿಕೋಬಾರ್​​ನಿಂದ ಧಾರ್ಮಿಕ ಸಭೆಗೆ ಆಗಮಿಸಿದ್ದ 9 ಜನರಿಗೆ ಕರೊನಾ ಇರುವುದು ದೃಢಪಟ್ಟಿದೆ. ಅದರಲ್ಲಿ ಓರ್ವನ ಪತ್ನಿಗೂ ಸೋಂಕು ತಗುಲಿದೆ.
ಆರು ಮಂದಿ ಕರೊನಾ ವೈರಸ್​ನಿಂದ ಸಾಯುತ್ತಿದ್ದಂತೆ ತೆಲಂಗಾಣ ಸರ್ಕಾರ ತೀವ್ರ ಮುನ್ನೆಚ್ಚರಿಕೆ ವಹಿಸುತ್ತಿದೆ. ಇವರೊಂದಿಗೆ ಸಂಪರ್ಕಕ್ಕೆ ಬಂದವರನ್ನೆಲ್ಲ ಪತ್ತೆಹಚ್ಚಿ, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರ ಕಚೇರಿ ತಿಳಿಸಿದೆ.
ಧಾರ್ಮಿಕ ಸಭೆಯಲ್ಲಿ ಯಾರ್ಯಾರು ಪಾಲ್ಗೊಂಡಿದ್ದರೋ ಅವರೆಲ್ಲ ಆಯಾ ಸ್ಥಳೀಯರ ಆಡಳಿತವನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ದೆಹಲಿ ಸರ್ಕಾರ ತಿಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
