ಕಲ್ಯಾಣಪುರ:ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರದ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಹತ್ತು ಅಡಿ ಉದ್ದದ ಹೆಬ್ಬಾವು ಸೆರೆ
ಕಲ್ಯಾಣಪುರದ ಪ್ರಾಥಮಿಕ ಶಾಲೆಯ ಶಿಕ್ಷಕರು ಮನೆಗೆಲಸವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದರು. ಆದರೆ ಆರು ವರ್ಷದ ವಿದ್ಯಾರ್ಥಿಯೊಬ್ಬ ನಿಯೋಜಿಸಲಾದ ಮನೆಗೆಲಸವನ್ನು ಮಾಡುವಲ್ಲಿ ವಿಫಲನಾಗಿದ್ದ. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿ, ಮೇಲ್ಛಾವಣಿಗೆ ಕರೆದೊಯ್ದು ಕೆಳಗೆ ಎಸೆದಿದ್ದಾರೆ ಎಂದು ಪೊಲೀಸ​ರು ತಿಳಿಸಿದ್ದಾರೆ.
ಘಟನೆಯಿಂದಾಗಿ ವಿದ್ಯಾರ್ಥಿಯು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿದ್ಯಾರ್ಥಿ ಮೈಮೇಲೆ ಕೋಲಿನಿಂದ ಹೊಡೆದ ಗುರುತುಗಳು ಸ್ಪಷ್ಟವಾಗಿದ್ದು, ಆತನಿಗೆ ಮನಃಬಂದತೆ ಥಳಿಸಲಾಗಿದೆ ಎಂದು ಆತನ ಚಿಕ್ಕಪ್ಪ ಆರೋಪಿಸಿದ್ದಾನೆ. ಪೊಲೀಸರು ಆರೋಪಿ ಶಿಕ್ಷಕನನ್ನ ಬಂಧಿಸಿದ್ದು, ಗೌಪ್ಯತೆಯ ಉದ್ದೇಶದಿಂದ ಯಾರ ಗುರುತನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
