ಹಾಪುರ್​ (ಉತ್ತರ ಪ್ರದೇಶ):ಇಲ್ಲಿನ ಘರ್​ಮುಕ್ತೇಶ್ವರ ಪ್ರದೇಶದಲ್ಲಿ ಮನೆಯ ಹೊರಗೆ ಆಡಿಕೊಂಡಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿದ ಬೈಕ್ ಸವಾರ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಜನನಾಂಗವನ್ನು ಮನಬಂದಂತೆ ಕೊಯ್ದು, ಹೊಲವೊಂದರಲ್ಲಿ ಆಕೆಯನ್ನು ಬಿಸಾಡಿ ಪರಾರಿಯಾಗಿದ್ದಾನೆ.
ಗುರುವಾರ (ಆ.6) ರಾತ್ರಿ ಮಗು ಘರ್​ಮುಕ್ತೇಶ್ವರದಲ್ಲಿರುವ ತನ್ನ ಮನೆಯ ಮುಂದೆ ಆಟವಾಡುತ್ತಿತ್ತು. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಬೈಕ್​ ಸವಾರ ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಚೂರಿಯಿಂದ ಮಗುವಿನ ಗುಪ್ತಾಂಗವನ್ನು ಮನಬಂದಂತೆ ಕೊಯ್ದಿದ್ದಾನೆ ಎಂದು ಘರ್​ಮುಕ್ತೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ರಾತ್ರಿಯೇ ದೂರು ಬಂದಿತ್ತು. ತಕ್ಷಣವೇ ಹಾಪುರ್​ನ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಯವರೆಗೆ ಮಗುವಿಗಾಗಿ ಹುಡುಕಾಡಿದೆವು. ಆದರೆ ಸಿಕ್ಕಿರಲಿಲ್ಲ. ಶುಕ್ರವಾರ (ಆ.7) ಬೆಳಗ್ಗೆ ಗ್ರಾಮಸ್ಥರು ಕೂಡ ಶೋಧ ಕಾರ್ಯಕ್ಕೆ ನೆರವಾದರು. ಆ ಸಂದರ್ಭದಲ್ಲಿ ಗ್ರಾಮದ ಹೊಲವೊಂದರಲ್ಲಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ ಪತ್ತೆಯಾದಳು. ಆಕೆಯ ಗುಪ್ತಾಂಗದಿಂದ ಸಾಕಷ್ಟು ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೋದರತ್ತೆಯಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಪೋರ್ನ್​ ದೃಶ್ಯಗಳನ್ನು ತೋರಿಸಿ ಕೃತ್ಯ
ಮೊದಲಿಗೆ ಬಾಲಕಿಯನ್ನು ಹಾಪುರ್​ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟ ಬಳಿಕ ಮೇರಠ್​ಗೆ ಸ್ಥಳಾಂತರಿಸಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು, ಆಕೆಯ ಮೇಲೆ ಅತ್ಯಾಚಾರ ನಡೆದಿದ್ದಲ್ಲದೆ, ಗುಪ್ತಾಂಗವನ್ನು ಕೊಯ್ದಿರುವ ಬಗ್ಗೆ ಮಾಹಿತಿ ನೀಡಿದರು. ಇದೀಗ ಬಾಲಕಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಆರಂಭಿಸಲಾಗಿದೆ. ಶಂಕಿತನ ರೇಖಾಚಿತ್ರವನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಗಾಗಿ 8 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಹಾಪುರ್​ ಎಸ್​ಪಿ ಸಂಜೀವ್​ ಸುಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
3 ಕೋಟಿ ರೂ. ಆಸ್ತಿ ಕಿತ್ತುಕೊಂಡರು; ವಯಸ್ಸಾದ ತಂದೆಯನ್ನು ಬೀದಿಗೆ ಬಿಟ್ಟ ‘ವರ’ಪುತ್ರರು ಮುಂದೆ ಏನಾದರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
