ನವದೆಹಲಿ:ಕ್ವಾರಂಟೈನ್​ ಶಬ್ದ ಕೇಳಿದರೆ ಬಹುತೇಕ ಮಂದಿ ಭಯಭೀತರಾಗುತ್ತಾರೆ. ಕರೊನಾ ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಶಂಕಿತರನ್ನೆಲ್ಲ ಕ್ವಾರಂಟೈನ್​ನಲ್ಲಿ ಇಡಲಾಗುತ್ತಿದೆ. ಕನಿಷ್ಠ 14 ದಿನಗಳು ಯಾರ ಸಂಪರ್ಕಕ್ಕೂ ಬಾರದೇ ಒಂಟಿಯಾಗಿ ಇರಬೇಕು ಎಂಬ ನಿಯಮ ಆರಂಭದಲ್ಲಿ ಮಾಡಿ, ನಂತರ ಈ ಅವಧಿಯನ್ನು ಹೆಚ್ಚಿಗೆ ಕೂಡ ಮಾಡಲಾಗಿತ್ತು.
ಒಮ್ಮೆ ಕ್ವಾರಂಟೈನ್​ ಮುಗಿಸಿ ಬರುವವರೆಗೆ ಸಾಕಪ್ಪಾ ಸಾಕು ಎಂದುಕೊಳ್ಳುವವರೇ ಎಲ್ಲಾ. ಆದರೆ ಇಲ್ಲೊಬ್ಬ ಯುವಕನ ಗ್ರಹಚಾರ ಹೇಗಿತ್ತೆಂದರೆ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಕ್ವಾರಂಟೈನ್​ ಅನುಭವಿಸಬೇಕಾಗಿ ಬಂದಿದೆ!
ಇದನ್ನೂ ಓದಿ:ಬಾರ್​ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ಈ ಯುವಕ ಉತ್ತರಾಖಂಡದ ಖಾಟೋಲಿಯದ ಪ್ರವೀಣ್​ ಬುರಾಠಿ. ಇರಾನ್​ನ ರಾಜಧಾನಿ ಟೆಹರಾನ್‌ನಲ್ಲಿ ಸಮುದ್ರಯಾನ ಕಂಪನಿಯೊಂದರ ಉದ್ಯೋಗಿ ಈತ. ಕಳೆದ ತಿಂಗಳು ರಜೆ ಪಡೆದು ತನ್ನ ತವರೂರು ಖಾಟೋಲಿಗೆ ಮರಳುತ್ತಲಿದ್ದ.
ಅದು ಫೆಬ್ರುವರಿ 28. ಈತ ವಾಪಸ್​ ಬರುತ್ತಿದ್ದಂತೆಯೇ ಇರಾನ್​ನಲ್ಲಿ ಲಾಕ್‌ಡೌನ್‌ ಘೋಷಿಸಲಾಯಿತು. ಭಾರತಕ್ಕೆ ಮರಳುವ ಸಲುವಾಗಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿದ. ‘14 ದಿನ ಕ್ವಾರಂಟೈನ್‌ಗೆ ಒಳಪಟ್ಟು, ಮುಂದಿನ ವಿಮಾನ ವ್ಯವಸ್ಥೆಯಾದಾಗ ಭಾರತಕ್ಕೆ ಹೋಗಬಹುದು ಎಂಬ ಸೂಚನೆ ಸಿಕ್ಕಿತು.
ಇದನ್ನೂ ಓದಿ:ಭಾರತದ ಮೇಲೆ ಅಟ್ಯಾಕ್​ಗೆ ಪಾಕ್​ನಿಂದ ದಿನಾಂಕ ಫಿಕ್ಸ್​​! ಸಿಕ್ಕಿದೆ ಸ್ಫೋಟಕ ಮಾಹಿತಿ
ಅಲ್ಲಿಂದ ಶುರುವಾಯ್ತು ಮೊದಲ ಕ್ವಾರಂಟೈನ್​. ಹೀಗೆ ಅಲ್ಲೇ 14 ದಿನಗಳ ಕ್ವಾರೆಂಟೈನ್ ಮುಗಿಸಿದ ಪ್ರವೀಣ, ಮಾ.16ರಂದು ಇತರ 195 ಭಾರತೀಯ ಪ್ರಜೆಗಳ ಜತೆ ದೆಹಲಿಗೆ ಬಂದ. ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕ್ವಾರಂಟೈನ್​ ಮಾಡಲಾಯಿತು! ಇನ್ನೇನು ಕ್ವಾರಂಟೈನ್​ ಅವಧಿ ಮುಗಿದು ಮನೆಗೆ ತಲುಪಬಹುದು ಎಂದು ಕನಸು ಕಾಣುತ್ತಿದ್ದ ಪ್ರವೀಣ್​ಗೆ ಮತ್ತೆ ಆಘಾತವಾಯಿತು. ಮಾ.31ಕ್ಕೆ ಮರು ರಕ್ತ ಪರೀಕ್ಷೆ ನಡೆಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪುನಃ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಯಿತು!
ಮೂರನೆ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಮನೆಗೆ ಹೋಗಲು ಅನುಮತಿ ಸಿಕ್ಕಿತು. ಅಬ್ಬಾ ಇನ್ನಾದರೂ ಮನೆ ಸೇರಿಬಹುದು ಎಂದುಕೊಂಡ ಪ್ರವೀಣ್​. ಆದರೆ ಗ್ರಹಚಾರಕ್ಕೆ ಅವನ ಊರಿಗೆ ಹೋದಾಗ, ಪರ ಊರಿನಿಂದ ಬಂದ ಹಿನ್ನೆಲೆಯಲ್ಲಿ ಮತ್ತೆ ಕ್ವಾರಂಟೈನ್​ನಲ್ಲಿ ಇಡಲಾಯಿತು!
ಇದನ್ನೂ ಓದಿ:ಉಗ್ರರಿಂದ ಜನರನ್ನು ರಕ್ಷಿಸಿ ಹುತಾತ್ಮರಾದ ಐವರು ಭಾರತೀಯ ಯೋಧರು
ಅಂತೂ ಎರಡು ತಿಂಗಳು ಒಂದರ ಮೇಲೊಂದರಂತೆ ನಾಲ್ಕು ಬಾರಿ ಕ್ವಾರಂಟೈನ್​ ಮುಗಿಸಿ ಮನೆಯನ್ನು ಸೇರಿದ ಪ್ರವೀಣ. ಈಗ ತನ್ನ ರಜೆಯ ಅವಧಿಯೂ ಮುಗಿಯುತ್ತಲಿದ್ದು, ಲಾಕ್​ಡೌನ್​ ಮುಗಿದ ಮೇಲೆ ಪುನಃ ವಾಪಸಾಗಬೇಕು ಎಂಬ ಬೇಸರ ಈ ಯುವಕನಿಗೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve − 12 =
Remember me
