ಹೈದರಾಬಾದ್​​:60 ವರ್ಷದ ವೃದ್ಧರೊಬ್ಬರು ಬ್ಯಾಟರಿ ಸೈಕಲ್ ತಯಾರಿಸಿದ್ದಾರೆ. ಈ ಸೈಕಲ್​​ ಒಂದೇ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 60 ಕಿಲೋಮೀಟರ್ ಪ್ರಯಾಣಿಸಬಲ್ಲದು ಎನ್ನಲಾಗಿದೆ. ಈ ಬ್ಯಾಟರಿ ಸೈಕಲ್ ಹಲವು ವಿಶೇಷತೆಗಳಿಂದ ಸುದ್ದಿಯಲ್ಲಿದೆ.
ಸಿದ್ದಿಪೇಟೆ ಜಿಲ್ಲೆಯ ದುಬ್ಬಾಕ ಮಂಡಲದ ಹಬ್ಬೀಪುರ ಗ್ರಾಮದ ಚಂದ್ರು ಎನ್ನುವ 60 ವರ್ಷದ ವ್ಯಕ್ತಿ ಸೈಕಲ್‌ನಲ್ಲಿ ಸುತ್ತಾಡುತ್ತಾ ಕುರುಕುರೆ, ಬಿಂಗೊಗಳನ್ನು ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ ಮತ್ತು ಅದರಿಂದ ಬರುವ ಆದಾಯದಿಂದ ತಮ್ಮ ಕುಟುಂಬವನ್ನು ಪೋಷಿಸುತ್ತಾರೆ.
ಏನಾದರೂ ಹೊಸದು ಮಾಡಬೇಕು ಎಂದು ಯೋಚಿಸಿದ್ದ ಚಂದ್ರು ಅವರ ಯೋಚನೆಗೆ ಬಂದಿರುವ ವಿಚಾರವೇ ಬ್ಯಾಟರಿ ಸೈಕಲ್. ಮೊದಮೊದಲು ಇವರೇನು ಮಾಡುತ್ತಿದ್ದಾರೆ ಎಂದು ಎಲ್ಲರೂ ಅಣಕಿಸುತ್ತಿದ್ದರು. ಈ ವಯಸ್ಸಲ್ಲಿ ಈ ಮುದುಕ ಏನು ಮಾಡಬಲ್ಲ ಎಂದು   ಹೇಳಿದವರಿಗೆ ಉತ್ತರಿಸಬೇಕು ಎಂದುಕೊಂಡರು.
ತಮ್ಮ ಬುದ್ಧಿವಂತಿಕೆಯಿಂದ ಕೇವಲ 22 ಸಾವಿರ ರೂಪಾಯಿಯಲ್ಲಿ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದಾರೆ. ಇದನ್ನು ಒಂದೇ ಬಾರಿ ಚಾರ್ಜ್ ಮಾಡಿದರೆ ಸುಮಾರು 60 ಕಿಲೋಮೀಟರ್ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಚಂದ್ರು ಮಾತನಾಡಿ, ಯಾರಿಗಾದರೂ ಈ ಬ್ಯಾಟರಿ ಸೈಕಲ್ ಬೇಕು ಎಂದಾದರೆ ಈ ಸೈಕಲ್ ನೀಡಲು ಸಿದ್ಧ ಎಂದಿದ್ದಾರೆ. ಪ್ರಸ್ತುತ, ಅವರು ಈ ಬ್ಯಾಟರಿ ಸೈಕಲ್‌ನಲ್ಲಿ ಪಟ್ಟಣವನ್ನು ಸುತ್ತುವ ಮೂಲಕ ತಮ್ಮ ಜೀವನೋಪಾಯವನ್ನು ಮುಂದುವರೆಸುತ್ತಿದ್ದಾರೆ.
Worlds Tallest Dog: ವಿಶ್ವದ ಅತಿ ಎತ್ತರದ ಶ್ವಾನ ಕ್ಯಾನ್ಸರ್​​ನಿಂದ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
