ನವದೆಹಲಿ:ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾದ 20 ದಿನಗಳಲ್ಲಿ 600 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇದು ಮಂದಿರ ನಿರ್ವಣಕ್ಕೆ ಅಂದಾಜಿಸಿರುವ 1,100 ಕೋಟಿ ರೂಪಾಯಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತ. ಜ.15ರಂದು ಆರಂಭವಾಗಿರುವ ‘ನಿಧಿ ಸಮರ್ಪಣ ಅಭಿಯಾನ’ ಫೆ. 27ಕ್ಕೆ ಕೊನೆಗೊಳ್ಳಲಿದ್ದು, ಆ ದಿನದೊಳಗೆ ದೇಣಿಗೆ ಸಂಗ್ರಹ ಮತ್ತಷ್ಟು ವೇಗವಾಗಿ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಆದರೆ, ದೇಣಿಗೆ ಸಂಗ್ರಹಕ್ಕೆ ಯಾವುದೇ ಗುರಿಯನ್ನು ಇರಿಸಿಕೊಂಡಿಲ್ಲ ಎಂದು ಟ್ರಸ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ.
ಮ.ಪ್ರ.ದಲ್ಲಿ ಶತಕೋಟಿ!:ಈವರೆಗೆ ಮಧ್ಯಪ್ರದೇಶದಲ್ಲಿ 100 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇಲ್ಲಿನ 10 ಮಂದಿ ತಲಾ 1 ಕೋಟಿ ರೂ. ಹಾಗೂ 20ಕ್ಕೂ ಹೆಚ್ಚು ಜನರು 50 ಲಕ್ಷ ರೂ. ದೇಣಿಗೆಯನ್ನು ಕೊಟ್ಟಿದ್ದಾರೆ. ರಾಜಸ್ಥಾನದಲ್ಲಿ 50 ಜನರು ತಲಾ 1 ಕೋಟಿ ರೂ. ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ಮನೆ ಮನೆ ಸಂಗ್ರಹ:ಆರ್​ಎಸ್​ಎಸ್, ವಿಶ್ವ ಹಿಂದು ಪರಿಷದ್ ಮೂಲಕ ದೇಣಿಗೆ ಮನೆ ಮನೆಗೆ ತೆರಳಿ ಸಂಗ್ರಹವನ್ನು ಟ್ರಸ್ಟ್ ಆರಂಭಿಸಿದ್ದು, ಇದಕ್ಕಾಗಿ 10, 100, 1,000 ರೂ. ಮುಖಬೆಲೆಯ ಕೂಪನ್​ಗಳನ್ನು ಬಿಡುಗಡೆ ಮಾಡಿದೆ. 20 ಸಾವಿರ ರೂಪಾಯಿವರೆಗಿನ ದೇಣಿಗೆಯನ್ನು ಮಾತ್ರ ನಗದು ರೂಪದಲ್ಲಿ ಸ್ವೀಕರಿಸಲಾಗುತ್ತಿದ್ದು, ಇದಕ್ಕೂ ಹೆಚ್ಚಿನ ಮೊತ್ತವನ್ನು ಚೆಕ್ ಮೂಲಕ ಪಡೆಯಲಾಗುತ್ತಿದೆ. ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿ ಇತರ ಧರ್ಮೀಯರು ಸಹ ಮಂದಿರಕ್ಕೆ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2020ರ ಆ. 5ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಬುನಾದಿ ಕಾಮಗಾರಿ ಪ್ರಗತಿಯಲ್ಲಿದೆ.
ಮುಸ್ಲಿಮರಿಂದ ದೇಣಿಗೆ:ಉತ್ತರ ಪ್ರದೇಶದ ಫೈಜಾಬಾದ್​ನ ಮುಸ್ಲಿಂ ಕುಟುಂಬವೊಂದು 5,100 ರೂ. ದೇಣಿಗೆ ಕೊಟ್ಟಿದೆ. ‘ಭಗವಾನ್ ಶ್ರೀರಾಮ ಹಿಂದುಸ್ತಾನಕ್ಕೆ ಸೇರಿದವ. ನಾವೆಲ್ಲರೂ ಈ ದೇಶದ ವಾಸಿಗಳು. ಆದ್ದರಿಂದ ಶ್ರೀರಾಮ ಎಲ್ಲರಿಗೂ ದೈವ ಮತ್ತು ಮಂದಿರ ಎಲ್ಲರಿಗೂ ಸೇರಿದ್ದು. ನಾವು ಇರಾಕ್, ಇರಾನ್ ಅಥವಾ ಟರ್ಕಿಯಿಂದ ಬಂದವರಲ್ಲ. ಹಿಂದುಗಳು ನಮ್ಮ ಸೋದರರು. ಮಂದಿರ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಂ ಸಮುದಾಯವು ದೊಡ್ಡ ಮಟ್ಟದಲ್ಲಿ ಭಾಗಿಯಾಗಲಿದೆ’ ಎಂದು ಅಯೋಧ್ಯೆಯ ಮುಸ್ಲಿಂ ರಾಷ್ಟ್ರೀಯ ಮಂಚ್​ನ ಸದಸ್ಯ ಹಾಜಿ ಸಯೀದ್ ಅಹ್ಮದ್ ತಿಳಿಸಿದ್ದಾರೆ. ‘ಮಂದಿರ ನಿರ್ವಣಕ್ಕೆ ಅತ್ಯಂತ ಸಂತಸದಿಂದ ದೇಣಿಗೆ ನೀಡಿರುವೆ. ಉದಾರವಾಗಿ ದೇಣಿಗೆ ನೀಡಬೇಕು ಎಂದು ನಮ್ಮ ಸಮುದಾಯದವರಲ್ಲಿ ಮನವಿ ಮಾಡುವೆ’ ಎಂದು ನವಾಬ್​ಗಂಜ್​ನ ಸೈಯದ್ ಹಫೀಜ್ ಹೇಳಿದ್ದಾರೆ.
ಬೆಂಗಳೂರು:ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಲ್ಲಿ ಈವರೆಗೆ 80 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ನಿಧಿ ಸಮರ್ಪಣ ಅಭಿಯಾನ ಕೈಗೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಬೆನ್ನೆಲುಬಾಗಿ ನಿಂತ ಆರೆಸ್ಸೆಸ್ ಹಾಗೂ ಪರಿವಾರದ ಎಲ್ಲ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರು ಮನೆಮನೆಗೆ ತೆರಳಿ ದೇಣಿಗೆ ಪಡೆಯುತ್ತಿದ್ದಾರೆ.
ತಮ್ಮ ಶಕ್ತ್ಯಾನುಸಾರ 10 ರೂ. ನಿಂದ ಲಕ್ಷಾಂತರ ರೂ.ವರೆಗೂ ಜನರು ದೇಣಿಗೆ ನೀಡುತ್ತಿದ್ದಾರೆ. ರಾಜಕಾರಣಿಗಳಲ್ಲಿ ಬಿಜೆಪಿ ನಾಯಕರಷ್ಟೇ ಅಲ್ಲ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ನಾನಾ ಪಕ್ಷಗಳ ನಾಯಕರು ಸಹ ದೇಣಿಗೆ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ಇದರಲ್ಲಿ ಸೇರಿದ್ದಾರೆ. ಅನೇಕ ನಟನಟಿಯರು, ಉದ್ಯಮಿಗಳು ಸಹ ನಿಧಿ ಸಮರ್ಪಿಸಿದ್ದಾರೆ.
ನಿಧಿ ದೇಣಿಗೆ ವಿವರ: ramjanmbhoomiteerthkshetratrustdeposit
(ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಡಿಪಾಸಿಟ್) ಮತ್ತುamjanmbhoomiteerthkshetratrustmoniter(ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮಾನಿಟರ್) ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ನಿಧಿ ಸಂಗ್ರಹಕಾರರು ತಾವು ಪಡೆದ ದೇಣಿಗೆಯ ವಿವರವನ್ನು ಡಿಪಾಸಿಟ್ ಆ್ಯಪ್​ನಲ್ಲಿ ದಾಖಲಿಸಿ ನಂತರ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಹಾಕುತ್ತಾರೆ. ಇದಕ್ಕಾಗಿ ಪ್ರತಿ ತಂಡದಲ್ಲಿ 5 ಮಂದಿ ಸದಸ್ಯರು ಇರುತ್ತಾರೆ. ಇದರ ನಿರ್ವಹಣೆಗೆ ಮಾನಿಟರಿಂಗ್ ಆ್ಯಪ್​ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
