ಕಂಗ್ರಾ (ಹಿಮಾಚಲ ಪ್ರದೇಶ):ಕೆಲವರಿಗೆ ತಮ್ಮ ವಾಹನಕ್ಕೆ ಇಂಥದ್ದೇ ನಂಬರ್‌ ಬೇಕು ಎನ್ನುವ ಆಸೆ. ಇಂಥ ಫ್ಯಾನ್ಸಿ ನಂಬರ್‌ಗಾಗಿ ಎಷ್ಟು ಬೇಕಾದರೂ ಖರ್ಚು ಮಾಡೋಕೆ ರೆಡಿ ಇರ್ತಾರೆ.
ಹಾಗೆಂದು ಸಾವಿರಾರು ರೂಪಾಯಿ ಬೆಲೆ ಬಾಳುವ ಗಾಡಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲಿದ್ದಾನೆ ನೋಡಿ ಅಂಥದ್ದೊಂದು ಪುಣ್ಯಾತ್ಮ; ಕಾಂಗಡಾದ ರಾಹುಲ್​​ ಪ್ರೈಮ್​​ ಪ್ರೈವೇಟ್​ ಲಿಮಿಟೆಡ್ ಕಂಪನಿಯ ಲೀಕ ಇಂಥದ್ದೊಂದು ಸಾಹಸಕ್ಕೆ ಹೈಹಾಕಿದ್ದಾನೆ.
ಇದನ್ನೂ ಓದಿ:ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’
ಹಿಮಾಚಲ ಪ್ರದೇಶದ ಕಂಗ್ರಾ ಊರಿನ ಫ್ಯಾನ್ಸಿ ನಂಬರ್‌ ಕ್ರೇಜ್‌ ಹಚ್ಚಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ 60 ಸಾವಿರ ರೂಪಾಯಿ ಬೈಕ್‌ಗೆ 18 ಲಕ್ಷ ರೂಪಾಯಿ ಕೊಟ್ಟು ಫ್ಯಾನ್ಸಿ ನಂಬರ್‌ ಪಡೆದಿದ್ದಾನೆ. ಕರೆಕ್ಟಾಗಿ ಹೇಳುವುದಾದರೆ 18 ಲಕ್ಷದ 22 ಸಾವಿರದ 500 ರೂಪಾಯಿ ಖರ್ಚು ಮಾಡಿದ್ದಾನೆ.
ಹೆಚ್​ಪಿ 90-0009 ಎಂಬ ನಂಬರ್​ ಪಡೆಯಲು ಈತ ಇಷ್ಟೊಂದು ದುಡ್ಡು ಖರ್ಚು ಮಾಡಿದ್ದಾನೆ! ಈ ಫ್ಯಾನ್ಸಿ ನಂಬರ್‌ಗಾಗಿ ಬಿಡ್‌ ಕರೆದಿತ್ತು. ಅದರಲ್ಲಿ ಭಾಗವಹಿಸಿದ್ದ ಹಲವರ ಪೈಕಿ ಈತನದ್ದು ಅತಿ ಹೆಚ್ಚಿನ ಮೊತ್ತವಾಗಿರುವ ಕಾರಣ, ಇವನಿಗೆ ಈ ನಂಬರ್‌ ಸಿಕ್ಕಿದೆ.
ಈ ಸಂಖ್ಯೆ ಪಡೆಯುವುದಕ್ಕಾಗಿ 10-15 ಲಕ್ಷ ರೂಪಾಯಿ ನೀಡಲು ಕೂಡ ಅನೇಕ ಮಂದಿ ತಯಾರಿದ್ದರು ಎನ್ನುತ್ತಾರೆ ಬಿಡ್‌ ಕರೆದಿದ್ದ ಎಸ್‌ಡಿಎಂ ಕಂಗ್ರಾ ಮುರಳಿ ಲಿಮಿಟೆಡ್‌.(ಏಜೆನ್ಸೀಸ್‌)
ಆನ್‌ಲೈನ್‌ ಕ್ಲಾಸ್‌ಗೆ ಸೆಡ್ಡು ಹೊಡೆದ ಗ್ರಾಮ: ದೇಶಾದ್ಯಂತ ಶ್ಲಾಘನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
