– ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿಮಧ್ಯಪ್ರದೇಶ:62ರ ಪ್ರಾಯದಲ್ಲಿ ವ್ಯಕ್ತಿಯೊಬ್ಬ 2ನೇ ಪತ್ನಿಯ ಮೂಲಕವಾಗಿ ಮೂರು ಮಕ್ಕಳಿಗೆ ತಂದೆಯಾಗಿದ್ದಾನೆ.
ಮಧ್ಯಪ್ರದೇಶದ ಸತ್ನಾಗೆ ಜಿಲ್ಲೆಯ ಉಚೆಹ್ರಾ ಬ್ಲಾಕ್‌ನ ಅತರ್ವೇದಿಯಾ ಖುರ್ದ್ ಗ್ರಾಮದ ನಿವಾಸಿ, 62 ವರ್ಷದ ಗೋವಿಂದ್ ಕುಶ್ವಾಹ್​​ನ  ಮೊದಲ ಹೆಂಡತಿಯ ಏಕೈಕ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಮಗನ ಸಾವಿನಿಂದ ಗೋವಿಂದ ಕೊರಗುತ್ತಿದ್ದನ್ನು ನೋಡಿದ ಮೊದಲ ಪತ್ನಿ ಆತನಿಗೆ ಹೀರಾಬಾಯಿ ಜತೆಗೆ 2ನೇ ಮದುವೆ ಮಾಡಿದಳು.
ಸೋಮವಾರ ರಾತ್ರಿ ಹೀರಾಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಿಸೇರಿಯನ್ ಮೂಲಕ ಹೀರಾಬಾಯಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವೈದ್ಯರು ಮಾತನಾಡಿ, ‘ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ 8 ತಿಂಗಳಿಗೆ ಜನಿಸಿದ್ದರಿಂದ ದುರ್ಬಲವಾಗಿವೆ. ಹೀಗಾಗಿ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಹೇಳಿದ್ದಾರೆ.
ವೃದ್ಧ ಗೋವಿಂದ್ ಮಾತನಾಡಿ, ‘ನನ್ನ ಮೊದಲ ಹೆಂಡತಿಯಿಂದ ಮಗ 18ರ ಪ್ರಾಯದಲ್ಲಿ  ಆತ ಅಪಘಾತದಲ್ಲಿ ಸಾವನ್ನಪ್ಪಿದ, ಇದಾದ ಬಳಿಕ ತನ್ನ ಪತ್ನಿ ತನಗೆ ಹೀರಾಬಾಯಿ ಜೊತೆ 2ನೇ ಮದುವೆ ಮಾಡಿದ್ದಳು. ಈಗ ಮಕ್ಕಳು ಜನಿಸಿರುವುದು ಖುಷಿಯಾಗಿದೆ’ ಎಂದು ಹೇಳಿದ್ದಾರೆ.
VIDEO| ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿ ಚುಚ್ಚಿಕೊಂಡು ಟ್ಯಾಕ್ಸಿ ಎಳೆದ ಸೋನು ಸೂದ್​ ಅಭಿಮಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
