ನವದೆಹಲಿ:ಹೊರ ದೇಶಗಳಲ್ಲಿರುವ 6,300 ಭಾರತೀಯರು ಕರೊನಾ ವೈರಸ್​ಗೆ ತುತ್ತಾಗಿದ್ದಾರೆ. ಕಳೆದ 9 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಏಪ್ರಿಲ್ 16ರಂದು ಹೊರ ದೇಶಗಳಲ್ಲಿರುವ 3,336 ಭಾರತೀಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸಿಂಗಾಪುರ ಹಾಗೂ ಗಲ್ಪ್ ದೇಶಗಳಲ್ಲಿ ಹೆಚ್ಚಿನ ಭಾರತೀಯರಲ್ಲಿ ಸೋಂಕು ಪತ್ತೆಯಾಗಿದೆ. ಸಿಂಗಾಪುರದ ವಿದೇಶಿಗರ ವಸತಿ ನಿಲಯಗಳಲ್ಲಿ ಸೋಂಕು ಕಾಣಿಸಿಕೊಂಡು ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಿದೆ. ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ವಸತಿ ನಿಲಯಗಳಿಗೆ ನೀಡುತ್ತಿರುವುದಾಗಿ ತಿಳಿಸಿದೆ. ಮಾರ್ಚ್ 18ರಂದು ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ನೀಡಿದ್ದ ಮಾಹಿತಿಯ ಪ್ರಕಾರ, ಇರಾನ್​ನಲ್ಲಿ 255 ಭಾರತೀಯರು ಸೇರಿ ಒಟ್ಟು 276 ಭಾರತೀಯರು ವಿದೇಶದಲ್ಲಿ ಸೋಂಕಿಗೆ ಒಳಗಾಗಿದ್ದರು.
ಇಸ್ಪೀಟ್ ಆಟದಿಂದ ಹರಡಿದ ಕರೊನಾ:ಲಾಕ್​ಡೌನ್ ಸಮಯದಲ್ಲಿ ಬೇಸರ ಕಳೆಯುವುದಕ್ಕೆಂದು ಲಾರಿ ಡ್ರೈವರ್ ಒಬ್ಬ ನೆರೆ ಹೊರೆಯ ಮನೆಯವರ ಜತೆ ಇಸ್ಪೀಟ್ ಆಟವಾಡಿದ್ದು, 24 ಜನರಿಗೆ ಸೋಂಕು ತಗುಲಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಕೃಷ್ಣ ಲಂಕಾ ಪ್ರದೇಶದ ಲಾರಿ ಡ್ರೈವರ್ ಇಸ್ಪೀಟ್ ಆಟವಾಡಿದ್ದಾನೆ. ಅಲ್ಲಿಯ ಇನ್ನೊಬ್ಬ ಮಹಿಳೆ ನೆರೆಯ ಮಹಿಳೆಯರ ಸಂಪರ್ಕ ಹೊಂದಿದ್ದು, ಈ ಎರಡು ಪ್ರಕರಣಗಳಿಂದ ಒಟ್ಟು 24 ಜನ ಸೋಂಕಿಗೆ ತುತ್ತಾಗಿದ್ದಾರೆ. ವಿಜಯವಾಡದ ಕಾರ್ವಿುಕ ನಗರದಲ್ಲಿಯೂ ಸಹ ಇಂತದ್ದೇ ಒಂದು ಘಟನೆ ನಡೆದಿದೆ. ಅಲ್ಲಿನ ಲಾರಿ ಡ್ರೈವರ್ ಒಬ್ಬ ಲಾಕ್​ಡೌನ್ ನಿಯಮ ಮೀರಿ ಜನರ ಜತೆ ಸಂಪರ್ಕ ಬೆಳೆಸಿದ್ದು ಒಟ್ಟು 15 ಜನ ಸೋಂಕಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎ ಇಮ್ತಿಯಾಜ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
