ಪುದುಚೇರಿ:ಭಾರತದಲ್ಲಿ ಕರೊನಾ ವೈರಸ್​ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಇಂದು ದೆಹಲಿಯಲ್ಲಿ 60 ವರ್ಷ ಮೇಲ್ಪಟ್ಟ ಮಹಿಳೆಯೋರ್ವರು ಕರೊನಾಕ್ಕೆ ಬಲಿಯಾಗಿದ್ದಾರೆ. ಅದರ ಬೆನ್ನಲ್ಲೇ ಪುದುಚೇರಿಯ ಮಾಹೆಯಲ್ಲಿ 68ವರ್ಷದ ಮಹಿಳೆಯೋರ್ವರಿಗೆ ಕರೊನಾ ತಗುಲಿದ್ದು ದೃಢಪಟ್ಟಿದೆ.
ಈ ಮಹಿಳೆ ಕಳೆದವಾರ ಯುಎಇ(ಸಂಯುಕ್ತ ಅರಬ್​ ರಾಷ್ಟ್ರ)ದಿಂದ ವಾಪಸ್​ ಆಗಿದ್ದರು. ಇವರಿಗೆ ಮಾಹೆ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದು ಪುದುಚೇರಿಯಲ್ಲಿ ಪತ್ತೆಯಾದ ಮೊದಲ ಕರೊನಾ ಕೇಸ್​.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಳೆದ ವಾರ ಮೂವರು ಶಂಕಿತ ಕರೊನಾ ಸೋಂಕಿತರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪುದುಚೇರಿ ಸರ್ಕಾರ ಎಲ್​ಕೆಜಿ, ಯುಕೆಜಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಭಾನುವಾರದಿಂದಲೇ ರಜೆ ಘೋಷಣೆ ಮಾಡಿದೆ. ಹಾಗೇ ಹಲವು ಕ್ರಮಗಳನ್ನು ಕೈಗೊಂಡಿದೆ.
ಭಾರತದಲ್ಲಿ ಒಟ್ಟು 126 ಮಂದಿಯಲ್ಲಿ ಕರೊನಾ ಇರುವುದು ದೃಢಪಟ್ಟಿದ್ದು, ಇದುವರೆಗೆ ಮೂವರು ಮೃತಪಟ್ಟಿದ್ದಾರೆ. 13 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.(ಏಜೆನ್ಸೀಸ್​)
ವಿದ್ಯಾರ್ಥಿನಿ ಮೇಲೆ ಪದೇಪದೆ ರೇಪ್​ ಮಾಡಿದ ಬಾಕ್ಸಿಂಗ್​ ಕೋಚ್​: ರೈಲಿನಲ್ಲೇ ನಡೆಯಿತು ಮೊದಲ ಅತ್ಯಾಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
