ನವದೆಹಲಿ:ಆರೋಗ್ಯಕರ ಜೀವನ ಹೊಂದಲು ನಿಯಮಿತವಾದ ವ್ಯಾಯಾಮ ಅತೀ ಮುಖ್ಯ. ಅದರಲ್ಲೂ ನಮ್ಮ ಇಂದಿನ ಯುಗದಲ್ಲಿ ನವ ಯುವಕ-ಯುವತಿಯರು ಜಿಮ್​ಗೆ​ ಹೋಗಲು, ಎಕ್ಸ್​ಸೈಸ್​ ಮಾಡಲು ನಿರಾಕರಿಸುವುದು, ಬದ್ಧತೆ ಇಲ್ಲದಿರುವ ಅದೆಷ್ಟೋ ಉದಾಹರಣೆಗಳು ನಮಗೆ ಕಾಣ ಸಿಗುತ್ತವೆ. ಇವರಿಗೆಲ್ಲಾ ಮಾದರಿ ಎಂಬಂತೆ 68ರ ವೃದ್ಧೆಯೊಬ್ಬರು ಜಿಮ್​ನಲ್ಲಿ ವೈಟ್​ ಲಿಫ್ಟಿಂಗ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಜೈಲಿನಲ್ಲಿರುವ ಉಗ್ರನಿಗೆ ಆಪ್ತರಿಂದ ಆರ್ಥಿಕ ನೆರವು; ಆಮಿಷವೊಡ್ಡಿ ಸಹಕೈದಿಗಳ ಮತಾಂತರ
ವಿಡಿಯೋದಲ್ಲಿ 68ರ ವೃದ್ಧೆ ತಮ್ಮ ಪುತ್ರ ಜಿಮ್​ ಟ್ರೈನರ್​ ಸಾಂಗ್ವಾನ್ ಅವರೊಂದಿಗೆ ವ್ಯಾಯಾಮ ಮಾಡುವುದನ್ನು ಕಾಣಬಹುದು. ಜಿಮ್​ನಲ್ಲಿ ಮಹಿಳೆಯ ಪುತ್ರ ತರಬೇತಿದಾರರಾಗಿ ಕೆಲಸ ಮಾಡುತ್ತಾರೆ. ಯುವಕ-ಯುವತಿಯರು ಎತ್ತಲು ಹರಸಾಹಸ ಪಡುವಂತ ತೂಕಗಳನ್ನು ಇವರು ಲಿಫ್ಟ್​ ಮಾಡುತ್ತಾರೆ. ವೃದ್ಧೆಯು ಉತ್ಸಾಹ, ಚೈತನ್ಯದಿಂದ ಇರುವುದು ನೋಡುಗರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ತಮ್ಮ ತಾಯಿ ತೂಕವನ್ನು ಎತ್ತಿಕೊಳ್ಳುವ ದೃಶ್ಯವನ್ನು ಅವರ ಮಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

A post shared by Choudhary Ajay Sangwan (@weightliftermummy)
ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸಾಂಗ್ವಾನ್​ ಅವರ ತಾಯಿಯ ಹುಮ್ಮಸ್ಸು, ಚೈತನ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ನಿಮ್ಮ ತಾಯಿ ಸಾಬೀತುಪಡಿಸಿದ್ದಾರೆ ಎಂದು ​ತಿಳಿಸಿದ್ದಾರೆ. ತನ್ನ ಅಮ್ಮ ವೈಟ್​ ಲಿಫ್ಟ್​ ಮಾಡುವ ದೃಶ್ಯವನ್ನು ಹಂಚಿಕೊಂಡಿರುವ ಸಾಂಗ್ವಾನ್​, ನನ್ನ ತಾಯಿ ಅವರಲ್ಲಿರುವ ಉತ್ತಮ ವರ್ಶನ್​ ಅನ್ನು ಹೊರಹಾಕಲು ತನ್ನಲ್ಲೇ ಪ್ರಮಾಣ ಮಾಡಿಕೊಂಡಿದ್ದಾರೆ ಎಂಬ ಶೀರ್ಷಿಕೆಯಡಿ ದೃಶ್ಯವನ್ನು ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).
‘ಜೈಲರ್​’ ಸಕ್ಸಸ್​ ಬೆನ್ನಲ್ಲೇ ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ತಲೈವಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 1 =
Remember me
