ಮುಂಬೈ:ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿದ್ದರೂ ಈ ಬ್ಯಾಂಕ್​ ಸ್ಟಾಕ್​ ಬೆಲೆ ಏರುತ್ತಲೇ ಸಾಗಿದೆ. ಧನಲಕ್ಷ್ಮಿ ಬ್ಯಾಂಕ್ ಷೇರು ಬೆಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿವೆ. ಈ ಬ್ಯಾಂಕ್ ಷೇರುಗಳು ಗುರುಗಳು 10 ಪ್ರತಿಶತದಷ್ಟು ಏರಿಕೆ ಕಂಡು, 51.20 ರೂಪಾಯಿ ತಲುಪಿದವು.
ದುರ್ಬಲ ಮಾರುಕಟ್ಟೆಯಲ್ಲೂ ಧನಲಕ್ಷ್ಮಿ ಬ್ಯಾಂಕ್ ಷೇರುಗಳು ಸದ್ದು ಮಾಡುತ್ತಿವೆ. ಈ ಬ್ಯಾಂಕಿನ ಷೇರಿನ ಬೆಲೆ 2 ವಾರಗಳಲ್ಲಿ 69% ಜಿಗಿದಿದೆ. ಧನಲಕ್ಷ್ಮಿ ಬ್ಯಾಂಕ್ ಷೇರುಗಳು 9 ವರ್ಷಗಳ ಗರಿಷ್ಠ ಮಟ್ಟವನ್ನು ಈಗ ತಲುಪಿವೆ.ಇದು ಆಗಸ್ಟ್ 2014 ರ ನಂತರ ಈ ಖಾಸಗಿ ಬ್ಯಾಂಕ್ ಷೇರುಗಳ ಅತ್ಯಧಿಕ ಬೆಲೆಯಾಗಿದೆ. ಬ್ಯಾಂಕಿನ ಷೇರುಗಳು ಬುಧವಾರ 46.56 ರೂ. ಇದ್ದವು. ಈ ಬ್ಯಾಂಕಿನ ಷೇರುಗಳ 52 ವಾರದ ಕನಿಷ್ಠ ಬೆಲೆ 13.50 ರೂಪಾಯಿ ಇದೆ.
ಕಳೆದ 2 ವಾರಗಳಲ್ಲಿ ಧನಲಕ್ಷ್ಮಿ ಬ್ಯಾಂಕ್ ಷೇರುಗಳು ಬಲವಾದ ಏರಿಕೆ ಕಂಡಿವೆ. ಈ ಖಾಸಗಿ ವಲಯದ ಬ್ಯಾಂಕ್‌ನ ಷೇರುಗಳು ಕಳೆದ 2 ವಾರಗಳಲ್ಲಿ 69% ಕ್ಕಿಂತ ಅಧಿಕ ಏರಿಕೆ ಕಂಡಿದೆ.
ಜನವರಿ 11, 2024 ರಂದು ಧನಲಕ್ಷ್ಮಿ ಬ್ಯಾಂಕ್‌ನ ಷೇರುಗಳು 30.29 ರೂ. ಇದ್ದು, ಜನವರಿ 25ರ ಗುರುವಾರದಂದು ಖಾಸಗಿ ಬ್ಯಾಂಕ್‌ಗಳ ಷೇರುಗಳು 51.21 ರೂಪಾಯಿಗೆ ತಲುಪಿವೆ. ಕೊನೆಯ 5 ದಿನಗಳಲ್ಲಿ ಷೇರುಗಳ ಬೆಲೆ 29.6% ಏರಿಕೆಯಾಗಿದೆ. ಈ ವರ್ಷ ಇಲ್ಲಿಯವರೆಗೆ, ಧನಲಕ್ಷ್ಮಿ ಬ್ಯಾಂಕ್ ಷೇರುಗಳು 65.5 ಪ್ರತಿಶತದಷ್ಟು ಏರಿಕೆಯಾಗಿದೆ. ಕಳೆದ ಒಂದು ಈ ಬ್ಯಾಂಕ್ ಷೇರುಗಳ ಬೆಲೆ 74% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಷೇರುಗಳ ಬೆಲೆ ರೂ. 29.41 ರಿಂದ ರೂ.51.21ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಧನಲಕ್ಷ್ಮಿ ಬ್ಯಾಂಕ್ ಷೇರುಗಳ ಬೆಲೆ 197% ರಷ್ಟು ಏರಿಕೆಯಾಗಿದೆ. 27 ಜನವರಿ 2023 ರಂದು ಈ ಖಾಸಗಿ ವಲಯದ ಬ್ಯಾಂಕ್‌ನ ಷೇರುಗಳ ಬೆಲೆ 17.20 ರೂ ಇತ್ತು. ಕಳೆದ 6 ತಿಂಗಳಲ್ಲಿ, ಧನಲಕ್ಷ್ಮಿ ಬ್ಯಾಂಕ್‌ನ ಷೇರುಗಳು ಪ್ರಚಂಡ 145% ರಷ್ಟು ಹೆಚ್ಚಾಗಿವೆ.
ಧನಲಕ್ಷ್ಮಿ ಬ್ಯಾಂಕ್ ಕೇರಳದ ತ್ರಿಶೂರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಬ್ಯಾಂಕ್ 257 ಶಾಖೆಗಳನ್ನು ಹೊಂದಿದೆ.

ಸರ್ಕಾರಿ ಬ್ಯಾಂಕ್ ತ್ರೈಮಾಸಿಕ ಲಾಭ 60% ಹೆಚ್ಚಳ: 6 ತಿಂಗಳಲ್ಲಿ ಷೇರು ಬೆಲೆ ದುಪ್ಪಟ್ಟಾಗಬಹುದು ಎನ್ನುತ್ತಾರೆ ವಿಶ್ಲೇಷಕರು

ನಷ್ಟದಲ್ಲಿರುವ ಟಾಟಾ ಗ್ರೂಪ್​ ಕಂಪನಿ, ಸದ್ಯ ಷೇರು ಬೆಲೆ ಕುಸಿತ: ಹೀಗಿದ್ದರೂ ಮುಂದೆ ಲಾಭ ಮಾಡಿಕೊಳ್ಳಲು ಖರೀದಿಸಿ ಎನ್ನುತ್ತಿದ್ದಾರೆ ತಜ್ಞರು… ಟಾರ್ಗೆಟ್​ ಪ್ರೈಸ್​ Rs. 1100

Byju’s ದಿವಾಳಿಯ ಅಂಚಿಗೆ ಬಂದಿದ್ದೇಕೆ?: ಆನ್​ಲೈನ್​ ಎಡ್​-ಟೆಕ್​ ಕಂಪನಿ ವಿರುದ್ಧ ಸಾಲದಾತರಿಂದ ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − ten =
Remember me
