ನವದೆಹಲಿ:ಮಹಾಮಾರಿ ಕರೊನಾ ವೈರಸ್ ಸೋಂಕಿಗೆ ದೇಶದಲ್ಲಿ ಎರಡನೇ ಬಲಿಯಾಗಿದೆ.​ 69 ವರ್ಷದ ವೃದ್ಧೆಯೊಬ್ಬರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಕರ್ನಾಟಕದ ಕಲಬುರಗಿಯಲ್ಲಿ ದೇಶದ ಹಾಗೂ ರಾಜ್ಯದ ಮೊದಲ ಕರೊನಾ ಸಾವಿನ ಪ್ರಕರಣ ದಾಖಲಾಗಿತ್ತು.
ಪಶ್ಚಿಮ ದೆಹಲಿಯ ಜನಕ್​ಪುರಿ ನಿವಾಸಿಯಾಗಿದ್ದ ವೃದ್ಧೆ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಜಪಾನ್​, ಜಿನೇವಾ ಮತ್ತು ಇಟಲಿ ಮುಂತಾದ ಕಡೆ ವಿದೇಶ ಪ್ರವಾಸ ಮಾಡಿ ತವರಿಗೆ ಮರಳಿದ್ದ 46 ವರ್ಷದ ಪುತ್ರನಿಂದ ವೃದ್ಧೆಗೆ ಸೋಂಕು ತಗುಲಿತ್ತು ಎಂದು ದೆಹಲಿಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ವೃದ್ಧೆಯು ದೆಹಲಿಯಲ್ಲಿ ಸೋಂಕು ತಗುಲಿದ ಆರನೇ ಪ್ರಕರಣವಾಗಿದ್ದರು. ಅಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ವೃದ್ಧೆಯ ಮಗನಿಗೂ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಗುರುವಾರವಷ್ಟೇ ಕರ್ನಾಟಕದ ಕಲಬುರಗಿಯಲ್ಲಿ ದೇಶದ ಮೊದಲ ಪ್ರಕರಣ ವರದಿಯಾಗಿತ್ತು. ಸದ್ಯ ಭಾರತದಲ್ಲಿ ಸೋಂಕು ತಗುಲಿದವರ ಸಂಖ್ಯೆ 85ಕ್ಕೇ ಏರಿದ್ದು, ಇಬ್ಬರು ಕರೊನಾಗೆ ಬಲಿಯಾಗಿದ್ದಾರೆ.(ಏಜೆನ್ಸೀಸ್​)
ಕರೊನಾ ವೈರಸ್​ ಕಾಟಕ್ಕೆ ಕರುನಾಡಲ್ಲಿ ಮೊದಲ ಬಲಿ: ದುಬೈನಿಂದ ಕಲಬುರಗಿಗೆ ಆಗಮಿಸಿದ್ದ ವೃದ್ಧ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
