ಜೈಪುರ:ರಾಜಸ್ಥಾನಕ್ಕೆ ಆಗಮಿಸಿದ್ದ ಇಟಲಿಯ ಪ್ರವಾಸಿಗನೋರ್ವನಲ್ಲಿ ಮಾರಕ ಕೊರೊನಾ ವೈರಸ್​ ದೃಢಪಟ್ಟಿದ್ದು, ಭಾರತದಲ್ಲಿ ಪತ್ತೆಯಾದ ಆರನೇ ಪ್ರಕರಣ ಇದಾಗಿದೆ.
ಇಟಾಲಿಯನ್​ ಪ್ರವಾಸಿಗನಲ್ಲಿ ಮೊದಲು ಶಂಕಿತ ಸೋಂಕು ಕಾಣಿಸಿಕೊಂಡಿತ್ತು. ಶನಿವಾರ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್​ ಎಂದು ವರದಿ ಬಂದಿತ್ತು. ಆದರೆ ಆ ವ್ಯಕ್ತಿಯ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತ ಹೋಯಿತು. ಅನುಮಾನ ಬಂದು ಮತ್ತೊಮ್ಮೆ ರಕ್ತ ಪರೀಕ್ಷೆ ಮಾಡಿದಾಗ ಇಂದು (ಮಂಗಳವಾರ) ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ರೋಗಿಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಿ, ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ತಿಳಿಸಿದೆ.
ಸೋಮವಾರ ದೆಹಲಿ ಹಾಗೂ ತೆಲಂಗಾಣದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಅವರಲ್ಲಿ ಓರ್ವ ಇಟಲಿಗೆ ಭೇಟಿ ನೀಡಿದ್ದರೆ, ಇನ್ನೋರ್ವ ದುಬೈಗೆ ಹೋಗಿ ವಾಪಸ್​ ಬಂದಿದ್ದ. ಈ ಹಿಂದೆ ಕೇರಳದಲ್ಲಿ ಮೂವರಿಗೆ ಕೊರೊನಾ ವೈರಸ್​ ದೃಢಪಟ್ಟಿತ್ತು.
ಭಾರತದಲ್ಲಿ ಕೊರೊನಾ ವೈರಸ್​ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನೂ ನಡೆಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವರ ಸಭೆ ಕೂಡ ನಡೆದಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
