ನವದೆಹಲಿ:ಅದಾನಿ ಸಮೂಹದ ಕಂಪನಿಗಳ ಆರ್ಥಿಕ ಸ್ಥಿತಿ, ಮಾರುಕಟ್ಟೆ ಮೌಲ್ಯ ದಿನವೂ ಕುಸಿಯುತ್ತಲೇ ಇದೆ. ಹಿಂಡನ್​ರ್ಬಗ್​ ವರದಿ ಬಳಿಕ ಈವರೆಗೆ 8.22 ಲಕ್ಷ ಕೋಟಿ ರೂ.ಗೂ ಅಧಿಕ ಸಂಪತ್ತು ನಷ್ಟವಾಗಿದೆ. ಇನ್ನೊಂದೆಡೆ, ಆರ್​ಬಿಐ ಕೂಡ ಅದಾನಿ ಪ್ರಕರಣದ ಮೇಲೆ ನಿಗಾ ವಹಿಸಿದ್ದು, ಈ ಕಂಪನಿಗಳ ಜತೆಗಿನ ವಹಿವಾಟಿನ ವಿವರ ನೀಡುವಂತೆ ಬ್ಯಾಂಕ್​ಗಳಿಗೆ ಸೂಚಿಸಿದೆ.
ಇದೀಗ ದೇಶದ ಅತಿದೊಡ್ಡ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಅದಾನಿ ಗ್ರೂಪ್​ ಅಡಿಯಲ್ಲಿ ಬರುವ ವಿವಿಧ ಕಂಪನಿಗಳಿಗೆ ಸುಮಾರು 21 ಸಾವಿರ ಕೋಟಿ. ರೂ. ಸಾಲ ನೀಡಿರುವುದಾಗಿ ವರದಿಯಾಗಿದೆ.
ಅದಾನಿ ಕಂಪನಿಗಳು ಹಾಗೂ ಎಸ್​ಬಿಐ ನಡುವೆ ನಡೆದಿರುವ ಸಾಲ ವ್ಯವಹಾರದ ಮಾಹಿತಿ ಹೊರಬಿದ್ದಿದೆ. ಬರೋಬ್ಬರಿ 8 ಲಕ್ಷ ಕೋಟಿ ನಷ್ಟ ಆಗಿದ್ದರೂ ಅದಾನಿ ಗ್ರೂಪ್​ಗೆ ನೀಡಿರುವ ಸಾಲದ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಎಸ್​ಬಿಐ ಮುಖ್ಯಸ್ಥ ದಿನೇಶ್​ ಕುಮಾರ್​ ಖರ ಅವರು ಹೇಳುತ್ತಿದ್ದಾರೆ.
ರಾತ್ರೋರಾತ್ರಿ ಷೇರು ಮಾರಾಟ ಸ್ಥಗಿತಅದಾನಿ ಸಮೂಹವು ಬಹುಕೋಟಿ ರೂಪಾಯಿ ಮೌಲ್ಯದ ಫಾಲೋ ಆನ್​ ಸಾರ್ವಜನಿಕ ಷೇರು ಮಾರಾಟವನ್ನು (ಎಫ್​​ಪಿಒ) ರಾತ್ರೋರಾತ್ರಿ ಸ್ಥಗಿತಗೊಳಿಸಿದೆ. ಇದರಿಂದ ಷೇರುಪೇಟೆಯಲ್ಲಿ ಭಾರಿ ಮುಖಭಂಗಕ್ಕೆ ಗುರಿಯಾಗಿದೆ. ಜ.31ಕ್ಕೆ ಎ್​ಪಿಒ ಬಿಡ್​ ಅಂತ್ಯಗೊಂಡಿದ್ದು, 20 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಬಿಡ್​ ಸಲ್ಲಿಕೆ ಆಗಿತ್ತು. ಅದಾನಿ ಎಂಟರ್​ಪ್ರೈಸಸ್​​ ಮಂಡಳಿಯು (ಎಇಎಲ್​) ಬುಧವಾರ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ಷೇರು ಮಾರಾಟ ಪ್ರಕ್ರಿಯೆಯನ್ನು ಈ ಹೊತ್ತಿನಲ್ಲಿ ಮುಂದುವರಿಸುವುದು ನೈತಿಕವಾಗಿ ಸರಿ ಎನಿಸುತ್ತಿಲ್ಲ. ನಮಗೆ ಗ್ರಾಹಕರ ಹಿತರಕ್ಷಣೆಯೇ ಮುಖ್ಯ. ಷೇರು ಖರೀದಿಗೆ ಬಿಡ್​ ಸಲ್ಲಿಸಿದವರ ಹಣ ಮರುಪಾವತಿ ಮಾಡಲಾಗುವುದು’ ಎಂದು ತಿಳಿಸಿದೆ. ಗುರುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಗೌತಮ್​ ಅದಾನಿ, ಕಂಪನಿ ಸೈದ್ಧಾಂತಿಕವಾಗಿ ಬಲಿಷ್ಠವಾಗಿದೆ. ನಮ್ಮ ಹಣಕಾಸು ಸ್ಥಿತಿ ಆರೋಗ್ಯಪೂರ್ಣವಾಗಿದ್ದು, ಸ್ವತ್ತುಗಳ ಮೌಲ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಸಾಲದ ಬಾಬ್ತನ್ನು ತಗ್ಗಿಸಲು ಅದಾನಿ ಎಂಟರ್​ಪೆಸಸ್​ನ ಷೇರು ಮಾರಾಟದ ಮೂಲಕ 20,500 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿತ್ತು. ಕಂಪನಿ ಪ್ರಸ್ತಾವಿಸಿದ್ದ ದರಕ್ಕಿಂತ ಷೇರು ಮೌಲ್ಯ ಇಳಿಕೆಯಾಗಿರುವ ಕಾರಣ ಸಣ್ಣ ಹೂಡಿಕೆದಾರರು ಷೇರು ಖರೀದಿಯಿಂದ ಹಿಂದೆ ಸರಿದಿದ್ದರು. ಆದರೆ, ಅಬುಧಾಬಿ ಮೂಲ ಇಂಟರ್​ನ್ಯಾಷನಲ್​ ಹೋಲ್ಡಿಂಗ್​ ಕಂಪನಿ, ಸಜ್ಜನ್​ ಜಿಂದಾಲ್​ ಹಾಗೂ ಸುನಿಲ್​ ಮಿತ್ತಲ್​ ಷೇರು ಖರೀದಿಗೆ ಬಿಡ್​ ಮಾಡಿದ್ದರು ಎಂದು ಬ್ಲೂಮ್​ರ್ಬಗ್​ ವರದಿ ಹೇಳಿದೆ. ಈ ಮಧ್ಯೆ, ಅದಾನಿ ಸಮೂಹದ ಮೇಲಿನ ಷೇರು ಅಕ್ರಮ ಮತ್ತು ಎಫ್​ಪಿಒ ಹಿಂಪಡೆದ ಕುರಿತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಯಾವುದೇ ತನಿಖೆಗೆ ಆದೇಶಿಸಿಲ್ಲ.
ವಿವರ ಕೇಳಿದ ಆರ್​ಬಿಐಅದಾನಿ ಸಮೂಹದ ಕಂಪನಿಗಳು ಹೊಂದಿರುವ ಬ್ಯಾಂಕ್​ ಖಾತೆ, ಪಡೆದಿರುವ ಸಾಲ, ವಿತರಿಸುವ ಸಾಲಪತ್ರ ಸೇರಿ ಈ ಸಮೂಹದ ಎಲ್ಲ ಬ್ಯಾಂಕಿಂಗ್​ ವ್ಯವಹಾರದ ಮಾಹಿತಿ ನೀಡುವಂತೆ ಆರ್​ಬಿಐ ಬ್ಯಾಂಕ್​ಗಳಿಗೆ ಸೂಚಿಸಿದೆ. ಈ ಸಾಲಪತ್ರದ ಆಧಾರದ ಮೇಲೆ ಬ್ಯಾಂಕ್​ಗಳು ಗ್ರಾಹಕರಿಗೆ ಸಣ್ಣ ಮೊತ್ತದ ಸಾಲ ಮಂಜೂರು ಮಾಡುತ್ತಿದ್ದವು. ಈ ಮಧ್ಯೆ, ಅದಾನಿ ಸಮೂಹದ ಕಂಪನಿಗಳು ವಿತರಿಸುವ ಸಾಲದ ಬಾಂಡ್​ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಸ್ವಿಸ್​ ಬ್ಯಾಂಕ್​, ಸಿಟಿ ಗ್ರೂಪ್​ ಬ್ಯಾಂಕ್​ಗಳು ಹೇಳಿದೆ. ಈ ರೀತಿ ಸಾಲದ ಬಾಂಡ್​ಗಳನ್ನು ಆಧರಿಸಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ 7,000 ಕೋಟಿ ರೂ., ಬ್ಯಾಂಕ್​ ಆ್​ ಬರೋಡಾ 4,000 ಕೋಟಿ ರೂ. ವರೆಗೂ ಸಾಲ ವಿತರಣೆ ಮಾಡಿವೆ ಎನ್ನಲಾಗಿದೆ.
ಸದನದಲ್ಲೂ ಗದ್ದಲಗೌತಮ್​ ಅದಾನಿ ಒಡೆತನದ ಅದಾನಿ ಸಮೂಹದ ಷೇರುಪೇಟೆ ಅಕ್ರಮ ಮತ್ತು ತೆರಿಗೆ ವಂಚನೆ ಕುರಿತು ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ರ್ಬಗ್​ ವರದಿ ಸಂಸತ್​ನಲ್ಲಿ ಗುರುವಾರ ಮಾರ್ದನಿಸಿತು. ಈ ಆರೋಪದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸುಪ್ರೀಂಕೋರ್ಟ್​ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು 11 ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳ ಸಭಾಧ್ಯಕ್ಷರು ಇದನ್ನು ತಳ್ಳಿಹಾಕಿದ ಕಾರಣ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ, ಮಧ್ಯಾಹ್ನ 2 ಗಂಟೆವರೆಗೆ ಕಲಾಪ ಮುಂದೂಡಿಕೆ ಆಗಿತ್ತು. ಅದಾನಿ ಸಮೂಹದ ವಂಚನೆ ಕುರಿತು ಕಲಾಪದಲ್ಲಿ ಕೈಗೊಳ್ಳ ಬೇಕಾದ ಕ್ರಮ ಯಾವುದು ಎಂಬ ಬಗ್ಗೆ ಕಾಂಗ್ರೆಸ್​, ಡಿಎಂಕೆ, ಟಿಎಂಸಿ, ಎಸ್​ಪಿ, ಜೆಡಿಯು, ಶಿವಸೇನೆ (ಉದ್ಧವ್​ ಠಾಕ್ರೆ ಬಣ), ಸಿಪಿಐ(ಎಂ), ಸಿಪಿಐ, ಎನ್​ಸಿಪಿ, ಐಯುಎಂಎಲ್​, ಎಎಪಿ, ಎನ್​ಸಿ ಪಕ್ಷಗಳು ಬೆಳಗ್ಗೆ ಸಭೆ ನಡೆಸಿದ್ದವು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅದಾನಿ ಸಮೂಹಕ್ಕೆ ಹೆಚ್ಚು ಅನುಕೂಲ ಮತ್ತು ಲಾಭ ಆಗಿದೆ. ಈ ಬಗ್ಗೆಯೂ ಚರ್ಚೆ ನಡೆಸುವಂತೆ ಒತ್ತಾಯಿಸಲಾಗಿದೆ.(ಏಜೆನ್ಸೀಸ್​)
ರಾಯಲ್​ ಎನ್​ಫೀಲ್ಡ್​ಗೆ ಕೆಟಿಎಂ ಬೈಕ್​ಗೆ ಡಿಕ್ಕಿ: ಯುವತಿ ದುರಂತ ಸಾವು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ

ವಿಮಾನ ಪ್ರಯಾಣ ಉಚಿತ!

ಯುಪಿಎಸ್​ಸಿಯಲ್ಲೇಕೆ ಕನ್ನಡಕ್ಕೆ ತಾರತಮ್ಯ? ಪೂರ್ವಭಾವಿ ಪರೀಕ್ಷೆಯಲ್ಲಿಲ್ಲ ಕನ್ನಡಕ್ಕೆ ಅವಕಾಶ | ಪ್ರಾದೇಶಿಕ ಭಾಷೆಗೂ ಬೇಕಿದೆ ಮನ್ನಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 19 =
Remember me
