ನವದೆಹಲಿ: ಕರೊನಾ ವೈರಸ್​ ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ವೈದ್ಯಕೀಯ ಸಿಬ್ಬಂದಿಯಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.
ದೇಶಗಳ, ರಾಜ್ಯಗಳ ಸರ್ಕಾರಗಳು ಕರೊನಾ ನಿಯಂತ್ರಣ, ಚಿಕಿತ್ಸೆಗಾಗಿ ಅವಿತರವಾಗಿ ಶ್ರಮ ವಹಿಸುತ್ತಿವೆ. ಜಗತ್ತಿನ ಹಲವು ದೇಶಗಳು ಕರೊನಾ ಪರಿಣಾಮದಿಂದ ಲಾಕ್​ಡೌನ್​ ಆಗಿದ್ದರ ಫಲವಾಗಿ ಆರ್ಥಿಕತೆ ಮಟ್ಟವೂ ಕುಸಿದಿದೆ. ಹೀಗೆಲ್ಲ ಇರುವಾಗ ಕರೊನಾ ವೈರಸ್​ ಬಗ್ಗೆ, ಕರೊನಾದಿಂದ ಸಂಕಷ್ಟವುಂಟಾಗಿರುವ ಈ ಸಂದರ್ಭದ ಬಗ್ಗೆ ಸಾವಿರಸಾವಿರ ರೂಮರ್​ಗಳು ಹರಡುತ್ತಿವೆ.
ಸೋಷಿಯಲ್​ ಮೀಡಿಯಾಗಳಲ್ಲಂತೂ ವಿಶ್ವ ಆರೋಗ್ಯ ಸಂಸ್ಥೆ, ದೇಶದ ನಾಯಕರು, ಪ್ರಖ್ಯಾತ ವೈದ್ಯರು, ಆರ್ಥಿಕ ತಜ್ಞರ ಹೆಸರಿನಲ್ಲೆಲ್ಲ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಲಾಗುತ್ತಿದೆ.
ಭಾರತದಲ್ಲೂ ಸಹ ಕರೊನಾ ವೈರಸ್​ಕ್ಕಿಂತ ವೇಗವಾಗಿ ಅದಕ್ಕೆ ಸಂಬಂಧಪಟ್ಟ ರೂಮರ್​ಗಳು ಹರಡುತ್ತಿವೆ. ಹೀಗಿರುವಾಗ ಕೇಂದ್ರ ಸರ್ಕಾರದ ಮಾಧ್ಯಮ ಸಂಸ್ಥೆ ಪ್ರೆಸ್​ ಇನ್ಫಾರ್ಮೇಶನ್​ ಬ್ಯೂರೋ(ಪಿಐಬಿ) ಫ್ಯಾಕ್ಟ್​ ಚೆಕ್​ ಘಟಕವನ್ನೇ ತೆರದು, ಜನರಿಗೆ ಸತ್ಯವನ್ನು ತಿಳಿಸುತ್ತಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿರುವ ತಲೆಬುಡ ಇಲ್ಲದ ವಿಚಾರಗಳ ಸತ್ಯಾಸತ್ಯೆಯನ್ನು ಪ್ರಕಟಿಸುತ್ತಿದೆ.
ಸದ್ಯ ಪಿಐಬಿ ಫ್ಯಾಕ್ಟ್​ಚೆಕ್​​ನಲ್ಲಿ ಬಯಲಾದ ಏಳು ವಿಚಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ 7 ಫೇಕ್​ ಸುದ್ದಿಗಳನ್ನು ಯಾವ ಕಾರಣಕ್ಕೂ ನಂಬಬೇಡಿ..
ಇದೊಂದು ಪಕ್ಕಾ ಫೇಕ್ ನ್ಯೂಸ್​. ಭಾರತದಲ್ಲಿ ಕರೊನಾ ವೈರಸ್​ ಮೂರನೇ ಹಂತ ಎಂದರೆ ಸಮುದಾಯ ಪ್ರಸರಣ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ಕೆಲವು ಸುದ್ದಿ ಮಾಧ್ಯಮಗಳಲ್ಲೂ ಹೇಳಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ಭಾರತದಲ್ಲಿ ವೈರಸ್​ ಹರಡುವಿಕೆ ಇನ್ನೂ ಎರಡನೇ ಹಂತದಲ್ಲಿಯೇ ಇದೆ. ಹಾಗಾಗಿ ಇದನ್ನು ಯಾರೂ ನಂಬಬೇಡಿ. ಮತ್ತು ವೈರಲ್​ ಕೂಡ ಮಾಡಬೇಡಿ. ಇದರಿಂದಾಗಿ ಜನರು ಗಾಬರಿಯಾಗುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೀಗೊಂದು ಸಂದೇಶ ನಿಮ್ಮ ವಾಟ್ಸ್​ಆ್ಯಪ್​ಗೆ ಬಂದಿದ್ದರೆ, ಫೇಸ್​ಬುಕ್​ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ನೀವಿದನ್ನು ನೋಡಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಸರ್ಕಾರದಿಂದ ಇಂತಹ ನಿರ್ಧಾರ ಪ್ರಕಟವಾಗಿಲ್ಲ. ಹಾಗೇ ಪೆನ್ಷನ್​ ಹಣದಲ್ಲಿ 5000 ರೂ.ಕಡಿತವಾಗುತ್ತದೆ ಎಂಬ ವದಂತಿಯೂ ಕೂಡ ವ್ಯಾಪಕವಾಗಿ ಸರ್ಕ್ಯೂಲೇಟ್​ ಆಗುತ್ತಿದ್ದು, ಅದು ಕೂಡ ಸುಳ್ಳು.

ಇಲ್ಲವೇ ಇಲ್ಲ. ಇದೂ ಕೂಡ ತಪ್ಪು ಮಾಹಿತಿ. ಜಮ್ಮಕಾಶ್ಮೀರದ ಕಾತ್ರಾದಲ್ಲಿರುವ ಪವಿತ್ರ ವೈಷ್ಣೋ ದೇವಿ ಯಾತ್ರೆಯನ್ನು ಲಾಕ್​ಡೌನ್​ಗೂ ಮೊದಲೇ ಅಂದರೆ ಮಾ.18ರಿಂದಲೇ ರದ್ದುಗೊಳಿಸಲಾಗಿದೆ. ಹಾಗಾಗಿ ಅಲ್ಲಿ ಯಾರೂ ಸಿಲುಕಿಕೊಂಡಿಲ್ಲ.

ಇದೂ ಕೂಡ ಸುಳ್ಳು ಸುದ್ದಿ. ಏಪ್ರಿಲ್​ ಮೂರನೇ ವಾರದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲಾಗುತ್ತದೆ. ಆಗ ಭಾರತೀಯ ಸೇನೆ, ಎನ್​ಸಿಸಿ ಸೇರಿ ಭದ್ರತಾ ಪಡೆಗಳನ್ನು ಇಡೀ ದೇಶಾದ್ಯಂತ ನಿಯೋಜಿಸಲಾಗುತ್ತದೆ ಎಂಬಂತಹ ಸಂದೇಶಗಳೂ ಕೂಡ ವಿಪರೀತ ವೈರಲ್ ಆಗುತ್ತಿವೆ. ಆದರೆ ಇದು ತಪ್ಪು ಮಾಹಿತಿ. ಸರ್ಕಾರ ಯಾವತ್ತೂ ಇದನ್ನು ಹೇಳಿಲ್ಲ.

ಕರೊನಾ ವೈರಸ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಹೇಳಿದ್ದಾಗಿ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.ಆದರೆ ಸರ್ಕಾರ ಹಾಗೇನೂ ಹೇಳಿಲ್ಲ. ಆದರೆ ಸಾರ್ವಜನಿಕರೇ ಅರಿತುಕೊಳ್ಳಬೇಕು. ಏನು ಪೋಸ್ಟ್ ಮಾಡಬಹುದು, ಏನನ್ನು ಮಾಡಬಾರದು ಎಂದು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಬಿಸಿ ನೀರಿನ ಹಬೆಯನ್ನು ತೆಗೆದುಕೊಂಡರೆ ಕರೊನಾ ವೈರಸ್​ ಸಾಯುತ್ತದೆ ಎಂದು ಚೀನಾದ ಆರೋಗ್ಯ ತಜ್ಞರೇ ಹೇಳಿದ್ದಾರೆ ಎಂಬಂತಹ ಮೆಸೇಜ್​ವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ. ಆದರೆ ಇದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಅದು ಸಾಬೀತೂ ಆಗಿಲ್ಲ.

ಕರೊನಾ ವೈರಸ್ ಗಾಳಿ ಮೂಲಕ ಪ್ರಸರಣ ಆಗುತ್ತದೆ ಎಂಬುದು ಸುಳ್ಳು. ಅದು ವಾಯುಗಾಮಿ ಎಂಬುದಿನ್ನೂ ನಿಖರವಾಗಿಯೇ ಇಲ್ಲ. ಯಾವ ಅಧ್ಯಯನದಲ್ಲೂ ಸಾಬೀತಾಗಿಲ್ಲ. ಆದರೂ ಕೊವಿಡ್ ವಾಯುಗಾಮಿ ಎಂಬರ್ಥದ ಸಂದೇಶವೊಂದು ವಿಶ್ವ ಆರೋಗ್ಯ ಸಂಸ್ಥೆಯ ಲೋಗೋದಡಿ ಹರಿದಾಡುತ್ತಿದೆ. ಆದರೆ ಇದು ಫೇಕ್​ ಆಗಿದ್ದು ನಂಬಲರ್ಹವಲ್ಲ ಎಂದು ಪಿಐಬಿ ತಿಳಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
