ಶ್ರೀನಗರ:ಜಮ್ಮು-ಕಾಶ್ಮೀರದ ತ್ರಾಲ್ ಮತ್ತು ಶೋಪಿಯಾನ್​ನಲ್ಲಿ ಭದ್ರತಾ ಪಡೆಗಳು ಏಳು ಉಗ್ರರನ್ನು ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಿವೆ
ತ್ರಾಲ್​ನಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರ ತಂಡ ಜಂಟಿಯಾಗಿ ಶೋಧಕಾರ್ಯವನ್ನು ಶುರುಮಾಡಿತ್ತು. ಉಗ್ರರ ಅಡಗುದಾಣದ ಪ್ರದೇಶದಲ್ಲಿರುವ ಸಾರ್ವಜನಿಕರನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಬಳಿಕ ಶರಣಾಗುವಂತೆ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿತು.
ಆದರೆ ಇದಕ್ಕೆ ಬಗ್ಗದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ಶುರುಮಾಡಿದರು. ಸೇನೆ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಇನ್ನೊಂದೆಡೆ ಶೋಪಿಯಾನ್​ನಲ್ಲಿ, ಮಸೀದಿಯಲ್ಲಿ ಉಗ್ರರು ಆಶ್ರಯ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಗುರುವಾರ ಸಂಜೆ ಕಾರ್ಯಾಚರಣೆ ಶುರುವಾಗಿತ್ತು. ಎನ್​ಕೌಂಟರ್​ನಲ್ಲಿ ಕನಿಷ್ಠ ಐವರು ಉಗ್ರರು ಹತರಾಗಿದ್ದಾರೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಮಸೀದಿ ಒಳಗಿರುವ ಉಗ್ರರ ಸಂಖ್ಯೆ ನಿಖರವಾಗಿ ಬಹಿರಂಗವಾಗಿಲ್ಲ. ಉಗ್ರರ ಮನವೊಲಿಸುವುದಕ್ಕೆ ಸ್ಥಳೀಯ ಇಮಾಮ್ ಒಬ್ಬರನ್ನು ಭದ್ರತಾ ಪಡೆ ಮಧ್ಯಸ್ಥಿಕೆದಾರನನ್ನಾಗಿ ಮಸೀದಿಯೊಳಕ್ಕೆ ಕಳುಹಿಸಿದೆ. ಅನ್ಸಾರ್ ಘಝ್ವಾತುಲ್ ಹಿಂದ್ ಉಗ್ರ ಸಂಘಟನೆಯ ಕಮಾಂಡರ್ ಮಸೀದಿಯೊಳಗೆ ಅವಿತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ದೀದಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರಾ ?’ : ಅಮಿತ್​ ಷಾ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eleven =
Remember me
