ನವದೆಹಲಿ:ಹೊಸ ಭವಿಷ್ಯ ನಿರ್ಮಿಸುವ ಸಲುವಾಗಿ ಭಾರತ ಹೊಸ ರ್ನಿಣಯಗಳನ್ನು ತೆಗೆದುಕೊಳ್ಳುತ್ತಿದೆ. 41 ಆರ್ಡಿನೆನ್ಸ್​ ್ಯಾಕ್ಟರಿಗಳ ನವೀಕರಣ ಮತ್ತು ಏಳು ಹೊಸ ಕಂಪನಿಗಳ ರಚನೆ ಈ ನಿರ್ಧಾರ ಒಂದು ಭಾಗವಾಗಿದೆ. 15&20 ವರ್ಷ ಹಿಂದೆಯೇ ಆಗಬೇಕಾಗಿದ್ದ ಕೆಲಸ ಈಗ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿಳಿಸಿದರು.ಏಳು ಹೊಸ ಡಿೆನ್ಸ್​ ಕಂಪನಿಗಳನ್ನು ಲೋಕಾರ್ಪಣೆ ಗೊಳಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಅವರು ಮಾತನಾಡಿ ದರು. ಸೇನೆಗೆ ಭಾರಿ ಬಲ ತುಂಬುವ ಕಂಪನಿಗಳಾಗಿ ಇವು ರೂಪುಗೊಳ್ಳಲಿವೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಹಾಗೂ ಅರೆಸೇನಾ ಪಡೆಗಳಿಂದ 65,000 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಗಳು ಸಿಗಲಿವೆ.ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಭಾರತದ ಶಸ್ತ್ರಾಸ್ತ್ರ ಟಕಗಳು ಜಗತ್ತಿನ ಅತಿಶಕ್ತಿಶಾಲಿ ಟಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿತ್ತು. ಈ ್ಯಾಕ್ಟರಿಗಳಿಗೆ 100ರಿಂದ 150 ವರ್ಷಗಳ ಇತಿಹಾಸವಿದೆ. ಸ್ವಾತಂತ್ರಾ$್ಯ ನಂತರದಲ್ಲಿ ಇದನ್ನು ಮೇಲ್ದರ್ಜೆಗೇರಿಸಬೇಕಾಗಿತ್ತು. ಆದರೆ ಅದರ ಬಗ್ಗೆ ಸರ್ಕಾರಗಳು ಸಾಕಷ್ಟು ಗಮನಹರಿಸಿರಲಿಲ್ಲ ಎಂದು ಪ್ರಧಾನಿ ಹೇಳಿದರು.
ಮುಂಚೂಣಿಗೆ ಭಾರತರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಮುಂಚೂಣಿಗೆ ತರುವುದಕ್ಕೆ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಬದಲಾವಣೆಯ ಕ್ರಮಗಳನ್ನು ಖಚಿತಪಡಿಸುವುದಕ್ಕಾಗಿಯೇ ಹೊಸ ಏಳು ಕಂಪನಿಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಹೊಸ ಉದ್ದೇಶಗಳ ಇಂತಹ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದಕ್ಕೆ ಇದಕ್ಕಿಂತ ಉತ್ತಮ ಅವಕಾಶ ಇನ್ನೊಮ್ಮೆ ಸಿಗದು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.
100% ಸ್ವದೇಶಿ ಸಂಸ್ಥೆಡಿೆನ್ಸ್​ ್ಯಾಕ್ಟರಿ ಬೋರ್ಡ್​ (ಒಎ್​ಬಿ)ಯಿಂದ ಬೇರ್ಪಡಿಸಿ ಸ್ಥಾಪಿಸಿರುವ ಏಳು ಕಂಪನಿಗಳು ಕಾರ್ಪೊ ರೇಟ್​ ಕಂಪನಿಗಳಾಗಿದ್ದು ಶೇಕಡ 100 ಸರ್ಕಾರಿ ಸ್ವಾಮ್ಯದ ಸ್ವದೇಶಿ ಸಂಸ್ಥೆಯಾಗಿವೆ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸನ್ನದ್ಧತೆ ಮತ್ತು ಸ್ವಾವಲಂಬನೆಯನ್ನು ಖಾತರಿಗೊಳಿಸುವ ಉದ್ದೇಶ ಈ ಕಂಪನಿಗಳ ಸ್ಥಾಪನೆ ಯಲ್ಲಿ ಅಡಗಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಹೊಸ ಕಂಪನಿಗಳು* ಮ್ಯುನಿಷನ್ಸ್​ ಇಂಡಿಯಾ ಲಿಮಿಟೆಡ್​ (ಎಂಐಎಲ್​)* ಆಮ್ಡ್​ರ್ ವೆಹಿಕಲ್ಸ್​ ನಿಗಮ್​ ಲಿಮಿಟೆಡ್​ (ಅವನಿ)* ಅಡ್ವಾನ್ಸ್​ ್ಡ ವೆಪನ್ಸ್​ ಆ್ಯಂಡ್​ ಇಕ್ವಿಪ್​ಮೆಂಟ್​ ಇಂಡಿಯಾ ಲಿಮಿಟೆಡ್​ (ಎಡಬ್ಲುಇ ಇಂಡಿಯಾ)* ಟ್ರೂಪ್​ ಕಂರ್ಟ್ಸ್​ ಲಿಮಿಟೆಡ್​ (ಟಿಸಿಎಲ್​)* ಯಂತ್ರ ಇಂಡಿಯಾ ಲಿಮಿಟೆಡ್​ (ವೈಐಎಲ್​)* ಗ್ಲೈಡರ್ಸ್​ ಇಂಡಿಯಾ ಲಿಮಿಟೆಡ್​ (ಜಿಐಎಲ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
