ಬೆಂಗಳೂರು:ಕರೊನಾ ನಡುವೆ ನಕಲಿ ವೀಸಾ ಪಡೆದು ಇಂಗ್ಲೆಂಡ್​ಗೆ ಹೋಗಿದ್ದ ಕೇರಳದ ಏಳು ಮಂದಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರು ಬಂಧಿಸಿದ್ದಾರೆ. ಮೇ 14ರಂದು ಬ್ರಿಟಿಷ್​ ಏರ್​ವೇಸ್​​ನಲ್ಲಿ ಏಳು ಪ್ರಯಾಣಿಕರು ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದರು. ಆಗಮನ ದ್ವಾರದಲ್ಲಿ ವೀಸಾ ಪರಿಶೀಲನೆ ನಡೆಸಿದ ಯುಕೆ ವಿಮಾನ ನಿಲ್ದಾಣ ಸಿಬ್ಬಂದಿಗೆ ನಕಲಿ ಎಂಬುದು ಅನುಮಾನ ಬಂದಿದೆ. ತಕ್ಷಣ ನವದೆಹಲಿಯಲ್ಲಿ ಇರುವ ಬ್ರಿಟಿಷ್​​ ಹೈ ಕಮಿಷನ್​ ಕಚೇರಿಗೆ ಇ-ಮೇಲ್​ನಲ್ಲಿ ಎಲ್ಲ ವೀಸಾ ಕಳುಹಿಸಿ ಅಸಲಿತನದ ಬಗ್ಗೆ ಮಾಹಿತಿ ಕೋರಿದ್ದರು.
ಆ ಎಲ್ಲ ವೀಸಾ ಪರಿಶೀಲನೆ ನಡೆಸಿದ ಅಧಿಕಾರಿಗಳು ನಕಲಿ ಎಂಬುದು ಖಚಿತಪಡಿಸಿದ್ದಾರೆ. ತಕ್ಷಣ ಅಷ್ಟೂ ಪ್ರಯಾಣಿಕರನ್ನು ಕೆಐಎಗೆ ಯುಕೆ ಅಧಿಕಾರಿಗಳು ವಾಪಸ್​ ಕಳುಹಿಸಿದ್ದರು. ಕೆಐಎ ಇಮಿಗ್ರೇಷನ್​ ಅಧಿಕಾರಿಗಳು ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿ ಪ್ರತ್ಯೇಕ ದೂರು ನೀಡಿದ್ದಾರೆ.
ಇದರ ಅನ್ವಯ 7 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜಪ್ತಿ ಆಗಿರುವ ಅಷ್ಟೂ ವೀಸಾಗಳು ನೌಕರಿ ವೀಸಾ ಆಗಿವೆ. ಏಜೆಂಟ್​ಗಳಿಗೆ ಹಣ ಕೊಟ್ಟು ನಕಲಿ ವೀಸಾ ಪಡೆದಿದ್ದಾರೆ. ಆ ಏಜೆಂಟ್​ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಎಲ್ಲರೂ ಕೇರಳ ಮೂಲದವಾಗಿದ್ದಾರೆ ಎಂದು ಕೆಐಎ ಪೊಲೀಸರು ತಿಳಿಸಿದ್ದಾರೆ.
ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಗೋವಾ; ಈಗಾಗಲೇ 100ಕ್ಕೂ ಅಧಿಕ ಮನೆಗಳಿಗೆ ಹಾನಿ, 2 ಸಾವು; ಈ ಸಂಖ್ಯೆ ಹೆಚ್ಚುವ ಸಾಧ್ಯತೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 6 =
Remember me
