ಹೈದರಾಬಾದ್​:ಉದ್ಯಾನವನದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪೊಂದು ಕಚ್ಚಿ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ವಾರಂಗಲ್​-ಕಾಜಿಪೇಟ್​ ಪ್ರದೇಶದಲ್ಲಿರುವ ರೈಲ್ವೇ ಕಾಲೋನಿಯಲ್ಲಿ ನಡೆದಿದೆ.
ಉತ್ತರಪ್ರದೇಶದಿಂದ ವಲಸೆ ಬಂದಿದ್ದ ಬೀದಿ ಬದಿ ವ್ಯಾಪರಸ್ಥರ ಕುಟುಂಬಕ್ಕೆ ಸೇರಿದ್ದ ಚೋಟು(7) ಮೃತ ದುರ್ದೈವಿ ಎಂದು ತಳಿದು ಬಂದಿದೆ.
ಚೋಟು ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶ್ವಾನವೊಂದು ಚೋಟು ಕತ್ತಿನ ಭಾಗವನ್ನು ಕಚ್ಚಿದ್ದು ದೇಹಾದಾದ್ಯಂತ ಪರಚಿದ ಗಾಯಗಳಾಗಿವೆ.
ಕೂಡಲ್ಲೇ ಅಲ್ಲಿದ್ದ ಸ್ಥಳೀಯರು ಬಾಲಕನನ್ನು ಹತ್ತಿರದ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಚೋಟು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ:ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವನ ದೇವಾಲಯ; ASIನಿಂದ ಎಚ್ಚರಿಕೆ
ಆಸ್ಪತ್ರೆಗೆ ವಾರಂಗಲ್​ ಪಶ್ಚಿಮ ಕ್ಷೇತ್ರದ ಶಾಸಕ ದಾಸ್ಯಂ ವಿನಯ್​ ಭಾಸ್ಕರ್​, ಹೈದರಾಬಾದ್​ ನಗರ ಪಾಲಿಕೆ ಮೇಯರ್​ ಗುಂಡಾ ಪ್ರಕಾಶ್​ ರಾವ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರದ ಚೆಕ್​ಅನ್ನು ಹಸ್ತಾಂತರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಬೀದಿ ನಾಯಿ ದಾಳಿ ಮಾಡಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಮಾರ್ಚ್​ ಹಾಗು ಏಪ್ರಿಲ್​ ತಿಂಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 19 =
Remember me
