ಬೆಂಗಳೂರು:ಸಾಫ್ಟ್​ವೇರ್​ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಇನ್​ಫೊಸಿಸ್​ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಅವರ ಈ ಹೇಳಿಕೆಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿವೆ.
ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಈಗಾಗಲೇ ಮುಂದುವರಿದಿರುವ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕು ಎಂದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಕೆಲವು ದಿನಗಳ ಹಿಂದೆ ಯೂಟ್ಯೂಬ್​ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದಾದ ಬಳಿಕ ಅವರ ಹೇಳಿಕೆಗೆ ಸಾಕಷ್ಟು ವಿರೋಧ ಕೇಳಿ ಬಂದಿತ್ತು.
ಇದನ್ನೂ ಓದಿ:ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!
ಇದೀಗ ಉದ್ಯಮಿ, ಆರ್​ಪಿಜಿ ಎಂಟರ್​ಪ್ರೈಸಸ್​ ಚೇರ್ಮನ್ ಹರ್ಷ ಗೋಯೆಂಕಾ ಕೂಡ ನಾರಾಯಣಮೂರ್ತಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಲಿಗೆ ವಾರಕ್ಕೆ ಐದು ದಿನಗಳ ಕೆಲಸದ ದಿನ ಎಂಬ ಪದ್ಧತಿಯೇ ಈಗಿಲ್ಲ. ಜನರು ತಮ್ಮ ಕಚೇರಿ ಅವಧಿಯ ಶೇ. 33 ಸಮಯವನ್ನು ಕಚೇರಿಯಿಂದ ಹೊರಗೆ ಕೆಲಸ ಮಾಡಿಯೇ ನಿಭಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…
ಹೊಂದಾಣಿಕೆ ಅತ್ಯಂತ ಮುಖ್ಯವಾದುದು. ದೈನಂದಿನ ಪ್ರಯಾಣವನ್ನು ತಪ್ಪಿಸುವ ಜತೆಗೆ ಹೊಂದಾಣಿಕೆಗೆ ಸ್ಪಂದಿಸುವುದಕ್ಕೆ ನಾವು ಹೆಚ್ಚಿನ ಬೆಲೆ ಕೊಡಬೇಕಾಗಿದೆ. ಕಚೇರಿ, ಮನೆ ಅಥವಾ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಬಹುದಾದಂಥ ಹೈಬ್ರಿಡ್ ವರ್ಕ್ ಕಲ್ಚರ್ ವರ್ತಮಾನ ಹಾಗೂ ಭವಿಷ್ಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಕಚೇರಿ ಇಲ್ಲವೇ ಹೊರಗಿನಿಂದ ಕೆಲಸ ಮಾಡುವುದಕ್ಕೆ ಹೊಂದಿಕೊಳ್ಳಬೇಕಾಗಿದೆ ಎಂದು ಗೋಯೆಂಕಾ ಹೇಳಿದ್ದಾರೆ.
🚀 The 5-day office week is dead! 🏢 People are working nearly 33% of their office time remotely, and it’s a game-changer. Flexibility is worth as much to people as an 8% raise. 💰 What we value most is skipping the daily commute and the sense of flexibility! 🚗🚆🌟 Hybrid work…
— Harsh Goenka (@hvgoenka)October 30, 2023

ಅಲ್ಲದೆ ವಾರಕ್ಕೆ 50ರಿಂದ 70 ಗಂಟೆಗಳ ಕಾಲದಷ್ಟು ದೀರ್ಘವಾಗಿ ಕೆಲಸ ಮಾಡುವುದು ಮುಖ್ಯವಲ್ಲ. ನಮ್ಮ ಗುರಿ, ಉದ್ದೇಶ, ಉತ್ಪಾದಕತೆ ಸಾಧಿಸುವಷ್ಟು ಕೆಲಸ ಮಾಡುವುದು ಮುಖ್ಯ. ಪಾಳಿಗೆ ಅಪ್ಪಿಕೊಳ್ಳಿ, ಹೊಸ ಕೆಲಸದ ಸ್ಥಳವನ್ನು ಒಪ್ಪಿಕೊಳ್ಳಿ, ಕಚೇರಿ ಮತ್ತು ಮನೆಯ ಮಧ್ಯೆ ಒಂದು ಹಿತವಾದ ಕೆಲಸದ ತಾಣವನ್ನು ಕಂಡುಕೊಳ್ಳಿ, ನಮ್ಮ ವೃತ್ತಿಜೀವನದಲ್ಲಿ ಯಾವುದು ಮುಖ್ಯ ಎಂದು ಅದಕ್ಕೆ ಆದ್ಯತೆ ನೀಡುವ ಸಮಯವಿದು ಎಂದು ಗೋಯೆಂಕಾ ಹೇಳಿದ್ದಾರೆ.
ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
