ನವದೆಹಲಿ:70 ಲಕ್ಷಕ್ಕೂ ಹೆಚ್ಚು ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ಖಾಸಗಿ ದತ್ತಾಂಶ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಭಾರತೀಯ ಸೈಬರ್ ಭದ್ರತಾ ಸಂಶೋಧಕರೊಬ್ಬರು ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನಕಲಿ ಐಡೆಂಟಿಟಿ ತಯಾರಿಕೆ, ಆನ್​ಲೈನ್ ವಂಚನೆ, ಫಿಶಿಂಗ್ ದಾಳಿ, ಸ್ಪಾಮ್ ಮತ್ತು ಇತರ ಸೈಬರ್ ಕ್ರಿಮಿನಲ್ ಚಟುವಟಿಕೆಗಳಿಗೆ ಇಂಥ ದತ್ತಾಂಶವನ್ನು ಬಳಸಬಹುದಾಗಿದೆ. 1.3 ಜಿಬಿ ಸಾಮರ್ಥ್ಯದ ಫೋಲ್ಡರ್​ನಲ್ಲಿ ಬ್ಯಾಂಕ್ ಅಥವಾ ನಗರವಾರು ವಿಂಗಡಿಸಿರುವ 58 ಸ್ಪ್ರೆಡ್​ಶೀಟ್​ಗಳಿವೆ. ಪ್ರತಿಯೊಂದರಲ್ಲೂ ಸಾವಿರಾರು ಎಂಟ್ರಿಗಳು ಇವೆ. ಡೇಟಾಶೀಟ್​ಗಳಲ್ಲಿ ಕ್ರೆಡಿಟ್ ಕಾರ್ಡ್​ಗಳ ಪೂರ್ಣ ಸಂಖ್ಯೆ ಅಥವಾ ಬಳಕೆದಾರರನ್ನು ಗುರುತಿಸಲು ಸಾಧ್ಯವಾಗುವಂಥ ಯಾವುದೇ ವಿವರ ಇಲ್ಲ. ಅದರ ಬದಲು ಸ್ಪ್ರೆಡ್​ಶೀಟ್​ಗಳಲ್ಲಿ ಫೋನ್ ನಂಬರ್, ಯಾವ ಬಗೆಯ ಕ್ರೆಡಿಟ್ ಕಾರ್ಡ್, ವರಮಾನ ಸ್ಥಿತಿಗತಿ, ವಾರ್ಷಿಕ ಆದಾಯ, ಜನ್ಮ ದಿನಾಂಕ, ವಾಸಿಸುವ ನಗರ ಮುಂತಾದ ವಿವರ ಇದೆ.
ಮಾರಾಟಕ್ಕಿದೆ!:ಭಾರತದ ಪ್ರಮುಖ ದೊಡ್ಡ ನಗರಗಳ ಮಾಹಿತಿಗಳೂ ಅದರಲ್ಲಿವೆ. ಡಾರ್ಕ್ ವೆಬ್​ನಲ್ಲಿ ಶೇರ್ ಮಾಡಲಾದ ಈ ಫೋಲ್ಡರ್ ಮಾರಾಟಕ್ಕೂ ಲಭ್ಯವಿದೆ. ಆದರೆ, ಪ್ರಸಕ್ತ ಸೈಬರ್ ಅಪರಾಧದ ವಾತಾವರಣದಲ್ಲಿ ಈ ಮಾಹಿತಿಗಳು ಸೈಬರ್ ದಾಳಿಕೋರರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಾರದು ಎನ್ನಲಾಗಿದೆ. ಈ ಬಗ್ಗೆ ಭಾರತದ ಸೈಬರ್ ತುರ್ತು ಸ್ಪಂದನೆ ತಂಡವಾದ ಸಿಇಆರ್​ಟಿ-ಇನ್​ಗೆ ಸೈಬರ್ ತಜ್ಞರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + one =
Remember me
