ಲಖನೌ:ಉತ್ತರ ಪ್ರದೇಶದ ಗೋರಖ್​ಪುರವು ವಿಚಿತ್ರ ಘಟನೆಯೊಂದಕ್ಕೆ ಕಾರಣವಾಗಿದೆ. 70 ವರ್ಷದ ವ್ಯಕ್ತಿಯೊಬ್ಬ 28 ವರ್ಷದ ಸೊಸೆಯನ್ನೇ ಮದುವೆಯಾಗಿದ್ದು, ಉತ್ತರ ಪ್ರದೇಶದಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ಮಾಜಿ ಶಾಸಕರೊಬ್ಬರು ಮಗ ಮರಣ ಹೊಂದಿದ ಬಳಿಕ ತನ್ನ ಸೊಸೆಗೆ ಬೇರೊಬ್ಬ ವ್ಯಕ್ತಿಯ ಜೊತೆ ಮದುವೆ ಮಾಡಿಸಿ ಮಾದರಿಯಾಗಿದ್ದರು. ಆದರೆ, ಈ ಗೋರಖ್​ಪುರದ ಈ ವ್ಯಕ್ತಿ ಇದಕ್ಕೆ ವಿರುದ್ಧವಾಗಿದ್ದಾನೆ.
ಇಬ್ಬರು ಕೂಡ ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ದೇವರೇ ಇಬ್ಬರು ಮದುವೆ ಸಾಕ್ಷಿ ಎಂದು ಭಾವಿಸಿ, ಒಬ್ಬರಿಗೊಬ್ಬರು ಹೂವಿನ ಹಾರವನ್ನು ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ. ಸೊಸೆಯನ್ನು ಪತ್ನಿ ಎಂದು ಸ್ವೀಕರಿಸಿದ ಮಾವ, ಆಕೆಯ ಹಣೆಗೆ ಸಿಂಧೂರನ್ನು ಇಟ್ಟಿದ್ದಾನೆ. ಇದೀಗ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ಮದುವೆಯಾದ ವ್ಯಕ್ತಿಯ ಹೆಸರು ಕೈಲಾಶ್​ ಯಾದವ್​. ಈತ ಛಪಿಯಾ ಉಮ್ರೋ ಗ್ರಾಮದ ನಿವಾಸಿ. ಗೋರಖ್​ಪುರದ ಬರ್ಹಲ್​ಗಂಜ್​ ಪೊಲೀಸ್​ ಠಾಣೆಯ ವಾಚ್​ಮನ್​ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಳು. ಅಲ್ಲದೆ, 3ನೇ ಮಗನು ಸಹ ಸ್ವಲ್ಪ ಸಮಯದ ಬಳಿಕ ಮೃತಪಟ್ಟನು. ಇದೀಗ ಸೊಸೆಯನ್ನೇ ವರಿಸಿ, ಸಪ್ತಪದಿ ತುಳಿದಿದ್ದಾನೆ.
ಕೈಲಾಶ್ ಯಾದವ್ ತನ್ನ ವಿಧವೆ ಸೊಸೆ ಪೂಜಾಳನ್ನು ಮತ್ತೆ ಮದುವೆಯಾಗಿದ್ದು, ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ. ಕೈಲಾಶ್ ಗ್ರಾಮದಲ್ಲಿ ಯಾರಿಗೂ ತಿಳಿಸದೆ ಸದ್ದಿಲ್ಲದೆ ಸೊಸೆ ಪೂಜಾಳನ್ನು ಮದುವೆಯಾಗಿದ್ದಾನೆ. ಮದುವೆಯ ಫೋಟೋ ವೈರಲ್ ಆದ ನಂತರವೇ ಜನರಿಗೆ ಈ ಮದುವೆ ವಿಷಯ ತಿಳಿದಿದೆ. ಈ ಮದುವೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಫೋಟೋ ವೈರಲ್​ ಆಗುತ್ತಿದ್ದಂತೆ ಸೊಸೆಯನ್ನೇ ಮಾವ ಮದುವೆ ಆಗುವುದೆಂದರೆ ಹೇಗೆ? ಎಲ್ಲಿದೆ ಸಂಬಂಧಗಳಿಗೆ ಬೆಲೆ? ಪಾಶ್ಚಿಮಾತ್ಯ ಸಂಸ್ಕೃತಿಗೆ ಬೀಳುತ್ತಿದ್ದೇವೇಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.(ಏಜೆನ್ಸೀಸ್​)
ಪ್ರೀತಿಸಿ ಮದ್ವೆಯಾದ ಜೋಡಿಗೆ ಜೀವ ಭಯ: ಊರು ಬಿಟ್ಟು ಅಲೆದಾಡುತ್ತಿರುವ ಪ್ರೇಮಿಗಳಿಗೆ ಬೇಕಿದೆ ಪೊಲೀಸರ ಅಭಯ

ನೆಲಮಂಗಲದ ಪ್ರವಾಸಿ ಮಂದಿರದ ಬಾತ್​ರೂಮ್​ನಲ್ಲಿ ಪಿಡಬ್ಲ್ಯುಡಿ ಅಧಿಕಾರಿ ಸಾವಿಗೆ ಶರಣು

ರೈತರು ಇಲ್ಲ ಅಂದ್ರೆ ನಾವಿಲ್ಲ: ಕೃಷಿ ಮೇಳದಲ್ಲಿ ರೈತರ ಕೊಡುಗೆ ನೆನೆದ ಶಿವ ಸಂಕೇಶ್ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
