ಮುಂಬೈ:ಕರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ ಎಂದಿರುವ ಅನೇಕರನ್ನು ನೀವು ನೋಡಿರುತ್ತೀರಿ. ಆದರೆ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಅಂತದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ಇದಾದ ಮೇಲೆ ಆಕೆಯ ಎರಡೂ ಕಣ್ಣುಗಳು ಶೇ.30-40ರಷ್ಟು ಕಾಣಲಾರಂಭಿಸಿವೆಯಂತೆ.
ಈ ರೀತಿ ಮಹಿಳೆ ಹೇಳಿಕೊಂಡಿದ್ದು, ಪೂರ್ತಿ ದೇಶವೇ ಆಕೆಯನ್ನು ಅಚ್ಚರಿಯಿಂದ ನೋಡುವಂತಾಗಿದೆ. ಆದರೆ ಇದಕ್ಕೆ ವೈಜ್ನಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಈ ವಿಚಾರ ಸದ್ಯ ದೇಶದೆಲ್ಲೆಡೆ ಹರಿದಾಡುತ್ತಿದ್ದು, ಇದರ ಬಗ್ಗೆ ಪರಿಣತರು ಪರಿಶೀಲನೆ ನಡೆಸಿದ ನಂತರವೇ ನಿಜಾಂಶ ಹೊರಬರಬೇಕಿದೆ. (ಏಜೆನ್ಸೀಸ್)
120 ರೂಪಾಯಿ ಫಿಶ್ ಬಿಲ್​ ತಂದಿಟ್ಟ ಸಂಕಷ್ಟ! ಸೋದರ ಮಾವ ಎಂದೂ ಲೆಕ್ಕಿಸದ ಅಳಿಯ ಮಾಡಿದ್ದೇನು?

ಟಾಯ್ಲೆಟ್​ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
