ನವದೆಹಲಿ:ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುತ್ತಾರೆ. ಇದಕ್ಕೆ ಅಸಂಖ್ಯ ನಿದರ್ಶನಗಳು ಇವೆ. ಅಂತೆಯೇ, ಮಧ್ಯಪ್ರದೇಶದಲ್ಲೂ ಇಂಥದ್ದೇ ಘಟನೆ ವರದಿಯಾಗಿದೆ.
ಓಂಕಾರ್​ ಸಿಂಗ್ಗೆ 70 ವರ್ಷ ವಯಸ್ಸಾದರೆ, ವಧು ಗುಡ್ಡಿಬಾಯಿಗೆ 55 ವರ್ಷ. ಇವರಿಬ್ಬರ ಲವ್ ಶುರುವಾಗಿದ್ದು ಅಶೋಕ್​ನಗರದ ಆಸ್ಪತ್ರೆಯಲ್ಲಿ. ಕೆಲಕಾಲ ಅಕ್ಕಪಕ್ಕದ ಬೆಡ್​ಗಳಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಮೂರು ದಿನಗಳ ಮಾತುಕತೆ ಪ್ರೀತಿಗೆ ತಿರುಗಿ ಇನ್ನುಳಿದ ಸಮಯವನ್ನು ಜತೆಯಲ್ಲಿಯೆ ಕಳೆಯುವ ನಿರ್ಧಾರ ಮಾಡಿದರು.
ಇದನ್ನೂ ಓದಿ;VIDEO: ಗಾಂಜಾ ಬೆಳೆಯೋದಲ್ಲ…., ಇಸ್ರೇಲ್​ನಲ್ಲಿ ಸುರಿಯಿತು ‘ಗಾಂಜಾ ಮಳೆ’…!
ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡುತ್ತಿದ್ದಂತೆ ಓಂಕಾರ್​ ಸಿಂಗ್​ ಆಕೆಯನ್ನು ತನ್ನ ಊರಾದ ಭೂರಾಖೇಡಿಗೆ ಕರೆದೊಯ್ದಿದ್ದಾನೆ. ತನ್ನ ನಾಲ್ಕು ಮಕ್ಕಳು ಹಾಗೂ 12 ಮೊಮ್ಮಕ್ಕಳಿಗೆ ಗುಡ್ಡಿಬಾಯಿ ಮೇಲೆ ಪ್ರೀತಿ ಉಂಟಾಗಿರುವ ವಿಚಾರ ತಿಳಿಸಿದ್ದಾನೆ. ಕುಟುಂಬದವರೆಲ್ಲ ಒಪ್ಪಿದ ಬಳಿಕ, ಗ್ರಾಮಸ್ಥರೆಲ್ಲರ ಎದುರು ಭರ್ಜರಿಯಾಗಿಯೇ ಮದುವೆಯಾಗಿದ್ದಾನೆ.
ಗುಡ್ಡಿಬಾಯಿ ಹರೆಯದ ವಧುವಂತೆ ಸಿಂಗರಿಸಿಕೊಂಡಿದ್ದರೆ, ಓಂಕಾರ್​ ಸಿಂಗ್​ ಮ್ಯಾಚಿಂಗ್​ ಡ್ರೆಸ್​ನಲ್ಲಿ ಕಂಗೊಳಿಸಿದ್ದ. ಗ್ರಾಮದ ತುಂಬೆಲ್ಲ ವಧು-ವರರ ಮೆರವಣಿಗೆಯೂ ಜೋರಾಗಿಯೇ ನಡೆದಿದೆ. ಬಂದವರೆಲ್ಲ ಖುಷಿಯಿಂದ ನೃತ್ಯ ಮಾಡಿ ಹಿರಿಯ ದಂಪತಿಗೆ ಶುಭ ಕೋರಿದ್ದಾರೆ.
https://youtu.be/4W6BDtBrvcw
ಪಾರ್ಕ್​ನಲ್ಲಿ ಕಿರಿಕ್​ ನಟಿಯ ‘ತುಂಡುಡುಗೆ’ ಕಸರತ್ತು; ಉದ್ಯಾನದಲ್ಲೇ ಲಾಕ್​ ಮಾಡಿದ ಸಾರ್ವಜನಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
