ಮುಂಬೈ:ಈ 70 ವರ್ಷದ ಮುದುಕನಿಗೆ ಮತ್ತೆ ಮದುವೆಯಾಗುವ ಆಸೆ ಬಂತು. ಆದರೆ ಆ ಆಸೆಯೇ ಅವರ ಬದುಕಿಗೆ ಮುಳ್ಳಾಯ್ತು..!
ಇದು ಒಂದು ವರ್ಷದ ಹಿಂದಿನ ಘಟನೆ. ಆದರೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಮುಂಬೈನ ಬೋರಿವಾಲಿ ನಿವಾಸಿಯಾಗಿರುವ ಈ ವೃದ್ಧನ ಪತ್ನಿ 2018ರಲ್ಲಿ ಮೃತಪಟ್ಟರು. ಒಂದು ದಿನ ಅವರ ಸ್ನೇಹಿತರೆಲ್ಲ ಸೇರಿ, ಇನ್ನೊಂದು ಮದುವೆಯಾಗುವಂತೆ ಸಲಹೆ ನೀಡಿದರು. ಗೆಳೆಯರ ಮಾತಿನಿಂದ ಆಸೆ ಬಂದು, ಮದುವೆಯಾಗಲು ಹೆಣ್ಣನ್ನೂ ನೋಡಿಯಾಯ್ತು. ಆದರೆ ಆ ಭಾವಿ ಪತ್ನಿ ವೃದ್ಧನಿಗೆ 28 ಲಕ್ಷ ರೂ.ವಂಚಿಸಿ, ಪರಾರಿಯಾದಳು. ಅದೇ ಕೊರಗಲ್ಲಿ ಕಳೆಯುತ್ತಿದ್ದ ವೃದ್ಧನಿಗೆ ಇತ್ತೀಚೆಗೆ ಹಾರ್ಟ್​ ಅಟ್ಯಾಕ್​ ಆಗಿದೆ.
ವಂಚನೆ ನಡೆದಿದ್ದು 2019ರ ಆಗಸ್ಟ್​ನಲ್ಲಿ. ವೃದ್ಧನಿಗೆ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದ ಗೆಳೆಯರೇ ಒಬ್ಬಳು 21 ವರ್ಷದ, ವಿಚ್ಛೇದಿತ ಯುವತಿಯನ್ನು ಪರಿಚಯಿಸಿದರು. ವೃದ್ಧನ ಮಗಳ ವಯಸ್ಸಿನ ಈ ಯುವತಿಯೇ ಆತನ ಕೈಹಿಡಿಯುವ ಹೆಣ್ಣು ಎಂದು ನಿಶ್ಚಿತವಾಯಿತು. ಹಾಗೇ ಅವಳೂ ಕೂಡ, ನಾನು ನನ್ನ ಅಪ್ಪ, ಅಮ್ಮ, ಸಹೋದರನೊಂದಿಗೆ ಮುಂಬೈಗೆ ಬರುತ್ತೇನೆ. ಮದುವೆ ಮಾತುಕತೆ ಅಂತಿಮಗೊಳಿಸೋಣ ಎಂದು ಮುದುಕನ ಬಳಿ ಹೇಳಿದ್ದಳು.
ಅದರಂತೆ, ಆಕೆಯ ಇಡೀ ಕುಟುಂಬ ಮುಂಬೈಗೆ ಆಗಮಿಸಿತು. ಬಂದು, ಈ 70ರ ವೃದ್ಧನ ಮನೆಯಲ್ಲೇ ಉಳಿದುಕೊಂಡರು. ವೃದ್ಧನಂತೂ ಆಕೆಯನ್ನು ಮದುವೆಯಾಗಲು ತುದಿಗಾಲಿನಲ್ಲಿಯೇ ನಿಂತಿದ್ದ, ಆಕೆಯನ್ನು ಸಂಪೂರ್ಣ ನಂಬಿ, ಇಡೀ ಮನೆಯ ಕೀಲಿಯನ್ನೇ ಅವಳಿಗೆ ಕೊಟ್ಟಿಬಿಟ್ಟಿದ್ದ. ಅವರಿಬ್ಬರೂ ರಾಜಸ್ಥಾನದ ಜೈಪುರದಲ್ಲಿ ರಿಜಿಸ್ಟರ್​ ಮ್ಯಾರೇಜ್​ ಮಾಡಿಕೊಳ್ಳಲು ನಿಶ್ಚಯ ಮಾಡಿದ್ದರು.ಇದನ್ನೂ ಓದಿ:ಬ್ರೇಕ್​ಅಪ್​ ಎಂದಿದ್ದಕ್ಕೆ ಸಿಟ್ಟಾದ, ಮನೆಗೆ ನುಗ್ಗಿ ಹುಡುಗಿಗೆ ಇರಿದೇ ಬಿಟ್ಟ
2019ರ ಆಗಸ್ಟ್​ 8ರಂದು ವೃದ್ಧ, ಯುವತಿ ಮತ್ತವಳ ಕುಟುಂಬದವರು ಜೈಪುರಕ್ಕೆ ಹೋದರು. ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಮದುವೆಗೆ ಬೇಕಾದ ಎಲ್ಲ ದಾಖಲೆಗಳನ್ನೂ ನೀಡಿದರು. ಆದರೆ ಅವರಿಗೆ ಆಗಸ್ಟ್ 30ರಂದು ಮದುವೆ ದಿನವನ್ನು ನೀಡಲಾಯಿತು. ಹಾಗಾಗಿ 70ರ ವೃದ್ಧ ಮುಂಬೈಗೆ ವಾಪಸ್​ ಹೋಗಲು ನಿಶ್ಚಯಿಸಿದರು. ತಿಂಗಳಗಟ್ಟಲೆ ಜೈಪುರಲ್ಲಿ ವಾಸವಾಗಿರಲು ಅವರಿಗೆ ಇಷ್ಟವಿರಲಿಲ್ಲ.
ಆದರೆ ಮನೆಗೆ ಬಂದ ವೃದ್ಧನಿಗೆ ಭರ್ಜರಿ ಶಾಕ್​ ಕಾದಿತ್ತು. ಅವರ ಹಣ, ಪ್ರಮುಖ ದಾಖಲೆಗಳು, ಅತ್ಯಮೂಲ್ಯ ವಸ್ತುಗಳೆಲ್ಲ ಕಾಣೆಯಾಗಿದ್ದವು. ಚಿನ್ನ, ಬೆಳ್ಳಿ ಆಭರಣಗಳೆಲ್ಲ ಕಳವಾಗಿದ್ದವು.  ವೃದ್ಧ ಕೂಡಲೇ ಯುವತಿ ಮತ್ತು ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಎಲ್ಲರೂ ನಾಟ್​ ರೀಚೇಬಲ್​ ಆಗಿದ್ದರು.
ಜೈಪುರಕ್ಕೆ ಹೋಗಿ ಯುವತಿಗಾಗಿ ಹುಡುಕಿದರೆ, ಅವರ್ಯಾರೂ ಅಲ್ಲಿರಲಿಲ್ಲ. ಮತ್ತೆ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಹೋಗಿ, ಮದುವೆಗೆ ಕೊಟ್ಟಿದ್ದ ದಾಖಲೆಗಳನ್ನೆಲ್ಲ ವಾಪಸ್​ ಪಡೆದರು. ಆದರೆ ಜೈಪುರದಲ್ಲಿ ಇದ್ದಾಗಲೇ ಅವರಿಗೆ ಹಾರ್ಟ್ ಅಟ್ಯಾಕ್​ ಆಗಿತ್ತು. ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿ ಮುಂಬೈಗೆ ಬಂದಿದ್ದರೂ ಇತ್ತೀಚೆಗೆ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಮೋಸ ಹೋದ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಯುವತಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್​)
ಭಾರತದ ಮೇಲೆ ಭಾರಿ ಭರವಸೆ; ಕೋವಿಡ್​ ಸಂಕಷ್ಟದಲ್ಲೂ ಹರಿದು ಬಂತು 1.5 ಲಕ್ಷ ಕೋಟಿ ರೂ. ಹೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
