ಜೈಪುರ:ಆಶ್ರಮವೊಂದರಲ್ಲಿ ಸನ್ಯಾಸಿಯ ಕೈಕಾಲು ಕಟ್ಟಿ ಇರಿದುಕೊಂದ ಘಟನೆ ನಡೆದಿದೆ. ರಾಜಸ್ಥಾನದ ದಿದ್ವಾನಾ-ಕಚಮನ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 70 ವರ್ಷದ ಸಂತ ಮೋಹನದಾಸ್ ಕೊಲೆಗೀಡಾದ ಸ್ವಾಮೀಜಿ.
ರಸಲ್ ಗ್ರಾಮದ ಅವರ ಆಶ್ರಮದಲ್ಲಿ ಭಾನುವಾರ ರಾತ್ರಿ ಈ ಪ್ರಕರಣ ನಡೆದಿದ್ದು, ಸೋಮವಾರ ಬೆಳಗ್ಗೆ ವಿಷಯ ಬಹಿರಂಗಗೊಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾಮೀಜಿಯ ರಕ್ತಸಿಕ್ತ ದೇಹವನ್ನು ನೋಡಿ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದುಷ್ಕರ್ಮಿಗಳು ಸ್ವಾಮೀಜಿಯ ಕೈಕಾಲು ಕಟ್ಟಿ ಬಳಿಕ ಇರಿದು ಕೊಲೆ ಮಾಡಿದ್ದರು. ಈ ಕುರಿತು ಸ್ವಾಮೀಜಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ರಸಲ್ ಗ್ರಾಮದ ಹೊರವಲಯದ ಹರಿರಾಂ ಬಾಬಾ ಗಾರ್ಡನ್​ನ ಭೈರುಬಾಬಾ ದೇವಸ್ಥಾನದಲ್ಲಿ ಕಳೆದ 14 ವರ್ಷಗಳಿಂದ ಸ್ವಾಮೀಜಿ ಮೋಹನದಾಸ್ ಸೇವೆ ಮಾಡಿಕೊಂಡಿದ್ದರು. ಸ್ವಾಮೀಜಿ ಆಶ್ರಮದಲ್ಲಿ ಏಕಾಂಗಿಯಾಗಿ ನೆಲೆಸಿದ್ದಾಗ ಈ ಘಟನೆ ನಡೆದಿದೆ.
ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

‘ಕರಾಳ ಶನಿವಾರ: 37 ಜನರ ಸಾವು..’ ಎಂದು ಕಿವಿಮಾತು ಹೇಳಿದ ಅಲೋಕ್​ ಕುಮಾರ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − 10 =
Remember me
