ಇಂದೋರ್:ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಮಧ್ಯಪ್ರದೇಶದ ವಿಧಾನಸಭೆಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಶೇ. 71.66 ಮತದಾನವಾಗಿದೆ. ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 47 ಕ್ಷೇತ್ರಗಳು ಹಾಗೂ ಪರಿಶಿಷ್ಟ ಜಾತಿಗಳಿಗೆ 35 ಕ್ಷೇತ್ರಗಳು ಸೇರಿ ಎಲ್ಲ 230 ಸ್ಥಾನಗಳಿಗೆ ಒಂದೇ ಹಂತದ ಮತದಾನ ನಡೆಯಿತು. ಈ ಎಲ್ಲ ಕ್ಷೇತ್ರಗಳ ಒಟ್ಟು 2533 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಯಿತು.
ಬಿಜೆಪಿ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಕೇಂದ್ರ ಸಚಿವ ಪ್ರಲ್ಹಾದ್ ಸಿಂಗ್ ಪಟೇಲ್, ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮೊದಲಾದ ಪ್ರಮುಖರು ಮತ ಚಲಾಯಿಸಿದರು. ಮತ ಕೇಂದ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಆರಂಭವಾಯಿತು. ನಕ್ಸಲ್ ಪೀಡಿತ ಬಾಲಾಘಾಟ್, ಮಂಡ್ಲಾ ಮತ್ತು ದಿಂಡೋರಿ ಜಿಲ್ಲೆಗಳಲ್ಲಿ ಮತದಾನ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡರೆ, ಉಳಿದೆಡೆ ಸಂಜೆ 6 ಗಂಟೆಯವರೆಗೆ ಮುಂದುವರಿಯಿತು.
ಕಮಲ್​ನಾಥ್ ಪುತ್ರನಿಗೆ ತಡೆ:ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಪುತ್ರ, ಕಾಂಗ್ರೆಸ್ ಸಂಸದ ನಕುಲ್​ನಾಥ್​ರನ್ನು ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ರಾಜ್ಯದ ಛಿಂದ್ವಾರಾದಲ್ಲಿ ಮತಗಟ್ಟೆಗೆ ಪ್ರವೇಶಿಸದಂತೆ ತಡೆದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ರೇಸ್​ನಲ್ಲಿ ಇಲ್ಲ ಎಂದ ಸಿಂಧಿಯಾ:ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿ ತಾವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಗ್ವಾಲಿಯರ್​ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿಂಧಿಯಾ, ಈ ಹಿಂದೆ ಮತ್ತು ಈಗಲೂ ಮುಖ್ಯಮಂತ್ರಿ ರೇಸ್​ನಲ್ಲಿ ತಾವಿಲ್ಲ ಎಂದಿದ್ದಾರೆ.
ಛತ್ತೀಸಗಢದಲ್ಲಿ 68% ಮತ:ಛತ್ತೀಸ್​ಗಢದ ವಿಧಾನಸಭೆಗೆ ಶುಕ್ರವಾರ ಜರುಗಿದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 68.15 ಮತದಾನವಾಗಿದೆ. 19 ಜಿಲ್ಲೆಗಳ 70 ವಿಧಾನಸಭೆ ಸ್ಥಾನಗಳ 958 ಅಭ್ಯರ್ಥಿಗಳ ಆಯ್ಕೆಗಾಗಿ ಈ ಮತದಾನ ನಡೆಯಿತು. ಮುಖ್ಯಮಂತ್ರಿ ಭೂಪೇಶ್ ಬಘೕಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಮತ್ತು ಬಿಜೆಪಿ ಮುಖ್ಯಸ್ಥ ಅರುಣ್ ಸಾವೊ ಇನ್ನಿತರ ನಾಯಕರು ಮತ ಚಲಾಯಿಸಿದರು.
ಕಲ್ಲು ತೂರಾಟ:ಮಧ್ಯಪ್ರದೇಶದ ವಿವಿಧ ಪ್ರದೇಶಗಳಲ್ಲಿ ಕಲ್ಲು ತೂರಾಟ ಘಟನೆಗಳು ನಡೆದಿವೆ. ಭಿಂಡ್ ಜಿಲ್ಲೆಯ ಮನ್ಹಾರ್ ಗ್ರಾಮದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ಶುಕ್ಲಾ ಗಾಯಗೊಂಡಿದ್ದಾರೆ. ಶುಕ್ಲಾ ಅವರ ಕಾರಿನ ಗಾಜು ಕೂಡ ಒಡೆದಿದೆ. ಝುಬುವಾದಲ್ಲಿ ಇದೇ ರೀತಿಯ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಮೇಲೆ ಕಲ್ಲು ತೂರಿ, ಕಾರ್ಯಕರ್ತರ ವಾಹನವನ್ನು ತಡೆದರು ಎಂದು ಕಾಂಗ್ರೆಸ್ ಆರೋಪಿಸಿದೆ. ಮೊರೆನಾ ಜಿಲ್ಲೆಯ ಮಿರ್ಘಾನ್​ನಲ್ಲಿರುವ ದಿಮಾನಿ ವಿಧಾನಸಭೆ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಇಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿವೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಪುರ:ಛತ್ತೀಸ್​ಗಢದ ಬಿಂದ್ರನವಗಢ ಪ್ರದೇಶದಲ್ಲಿ ಶುಕ್ರವಾರ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ನಕ್ಸಲರು ಸುಧಾರಿತ ಸ್ಪೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಿದ್ದಾರೆ. ಬಡೆ ಗೋಬ್ರಾ ಮತಗಟ್ಟೆಯಿಂದ ವಾಪಸಾಗುತ್ತಿದ್ದಾಗ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಪೋಟಿಸಿದ್ದಾರೆ. ಐಟಿಬಿಪಿ ಹೆಡ್ ಕಾನ್​ಸ್ಟೆಬಲ್ ಜೋಗಿಂದರ್ ಸಿಂಗ್ ಈ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಶುಕ್ರವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯು ಪಕ್ಷವು ಈ ಹಿಂದೆ ಘೊಷಿಸಿದ ಆರು ಖಾತರಿಗಳು ಹಾಗೂ ಇನ್ನೂ ಅನೇಕ ಯೋಜನೆಗಳನ್ನು ಒಳಗೊಂಡಿದೆ.
ವಿಶ್ವಕಪ್ ಕ್ರಿಕೆಟ್ ಫೈನಲ್​ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?

ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
