ನವದೆಹಲಿ:ಭಾರತದ ಆತಿಥ್ಯದಲ್ಲಿ ನಡೆಯಲಿರುವ 71ನೇ ಆವೃತ್ತಿಯ ವಿಶ್ವ ಸುಂದರಿ 2023 ಸ್ಪರ್ಧೆಯನ್ನು ಕಾಶ್ಮೀರದಲ್ಲಿ ಆಯೋಜಿಸಲಾಗುವುದು ಎಂದು ಮಿಸ್​ ವರ್ಲ್ಡ್​ ಸಂಸ್ಥೆಯ ಮುಖ್ಯಸ್ಥೆ ಜೂಲಿಯಾ ಎರಿಕ್​ ಮೊರೆಲಿ ತಿಳಿಸಿದ್ದಾರೆ.
ನಿಜವಾಗಿ ಹೇಳುವುದಾದರೆ ಕಾಶ್ಮೀರದ ನೈಜ ಸೌಂದರ್ಯವನ್ನು ನೋಡುವುದು ನಮಗೆ ಸಂತೋಷದ ವಿಚಾರವಾಗಿದೆ. ನಮಗೆ ಇಲ್ಲಿ ಪ್ರತಿಯೊಬ್ಬರು ಸಹಾಯ ಮಾಡುತ್ತಿದ್ದಾರೆ ಎಂದು ಮಿಸ್​ ವರ್ಲ್ಡ್​ ಸಂಸ್ಥೆಯ ಮುಖ್ಯಸ್ಥೆ ಜೂಲಿಯಾ ಎರಿಕ್​ ಮೊರೆಲಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮೊರೆಲಿ 71ನೇ ಆವೃತ್ತಿಯ ವಿಶ್ವ ಸುಂದರಿ 2023ರ ಸ್ಪರ್ಧೆ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಕಾಶ್ಮೀರದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಕಾಶ್ಮೀರ ಕಣಿವೆಗೆ 140 ದೇಶದಿಂದ ಆಗಮಿಸುವ ಸ್ಪರ್ಧಿಗಳನ್ನು ನಾನು ಸ್ವಾಗತಿಸಲು ಹೆಚ್ಚು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.
71st#MissWorld2023 contest is set to be held in#Kashmirlater this year with 140 participating countries, thanks to#G20meet held in May.This was disclosed at a breakfast press briefing in#Srinagaron Tuesday. Press briefing was attended by Miss World,#KarolinaBielawski,…pic.twitter.com/ur0CziFEEC
ಇದನ್ನೂ ಓದಿ:ಕೋವಿಡ್​​ ಹಗರಣ; ಬಿಜೆಪಿಗರು ಸತ್ಯ ಹರಿಶ್ಚಂದ್ರನ ಮರಿ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ: ಕಾಂಗ್ರೆಸ್​
ಇಲ್ಲಿನ ಜನರು ತುಂಬಾ ಒಳ್ಳೆಯವರಾಗಿದ್ದು, ಪ್ರತಿಯೊಂದು ವಿಚಾರದಲ್ಲೂ ನಮಗೆ ಸಹಾಯ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಸ್ಪರ್ಧೆ ಆಯೋಜನೆ ಮಾಡುತ್ತಿರುವುದು ನಮಗೆ ತುಂಬಾ ಸಂತಸ ತಂದಿದ್ದು, ನೈಜ ಸೌಂದರ್ಯವನ್ನು ಸವಿಯಲು ಕಾತುರದಿಂದ ಕಾಯುತ್ತಿದ್ಧೇವೆ. ನವೆಂಬರ್​ ತಿಂಗಳು ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆ ಡಿಸೆಂಬರ್​​ 8ರಂದು ಆರಂಭವಾಗಲಿದ್ದು, ನವೆಂಬರ್​ ತಿಂಗಳಲ್ಲಿ ಈವೆಂಟ್​​ಗೆ ಪೂರ್ವಸಿದ್ದತೆ ಆರಂಭವಾಗಲಿದೆ. 1996ರಲ್ಲಿ ಭಾರತ ಕೊನೆಯದಾಗಿ ವಿಶ್ವಸುಂದರಿ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
