ನವದೆಹಲಿ:ದೇಶದ ಕೆಲವು ಭಾಗಗಳಲ್ಲಿ ಜನರು ಹೊರಗೆ ಬರಲು ಹೆದರುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲೇ ಅತ್ಯಂತ ದೊಡ್ಡ ಆಘಾತ ಎಂಬಂಥ ಮಿಂಚಿನ ಹೊಡೆತಕ್ಕೆ ಒಟ್ಟು 74 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲೇ ಇಷ್ಟೊಂದು ಸಾವುಗಳು ಸಂಭವಿಸಿವೆ.
ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಈ ದುರಂತ ಸಂಭವಿಸಿದ್ದು, ಅತ್ಯಧಿಕ ಸಾವು ಉತ್ತರಪ್ರದೇಶದಲ್ಲಿ ಆಗಿದೆ. ಆಯಾ ರಾಜ್ಯಗಳ ಅಧಿಕೃತ ಮಾಹಿತಿ ಇದನ್ನು ದೃಢಪಡಿಸಿದೆ. ಜೈಪುರದ ಅಮೇರ್​ ಫೋರ್ಟ್ ಬಳಿ ಭಾನುವಾರ ಪಂಜಾಬ್​ನಿಂದ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ 11 ಪ್ರವಾಸಿಗರು ಮಿಂಚಿನ ಹೊಡೆತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ:ಸೂಟು-ಬೂಟು​ ಹಾಕೊಂಡು ಬಂದ, ಮನೆಯವರು ಒಳಗಿರುವಾಗಲೇ ಲ್ಯಾಪ್​ಟಾಪ್​ ಕದ್ದೊಯ್ದ!
ಉತ್ತರಪ್ರದೇಶದ 16 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಒಟ್ಟು 41 ಮಂದಿ ಮಿಂಚಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಮಾತ್ರವಲ್ಲ 30 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ 250 ಪ್ರಾಣಿಗಳು ಕೂಡ ಜೀವ ಕಳೆದುಕೊಂಡಿದ್ದು, 20 ಗಾಯಗೊಂಡಿವೆ ಎಂದು ಯುಪಿ ರಿಲೀಫ್ ಕಮಿಷನರ್​ ರಣ್​ವೀರ್ ಪ್ರಸಾದ್ ತಿಳಿಸಿದ್ದಾರೆ. ಮಿಂಚಿನ ಹೊಡೆತದಿಂದ ಸಾವಿಗೀಡಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಧನವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. (ಏಜೆನ್ಸೀಸ್​)
ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಸಿಬಿಐಗೆ ವಹಿಸಿ: ಗುಹಾ ಆಗ್ರಹ

ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
