ಉತ್ತರಪ್ರದೇಶ:75 ವರ್ಷ ವಯಸ್ಸಿನ ವೃದ್ಧನಿಗೆ ತನ್ನ ಉಗುಳನ್ನೇ ನೆಕ್ಕಲು ಹೇಳಿ, ಚಪ್ಪಲಿ ಹಾರವನ್ನು ಧರಿಸುವಂತೆ ಒತ್ತಾಯಿಸಿದ ಪುಂಡರು, ವ್ಯಕ್ತಿಗೆ ಹಿಂಸಿಸಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಘಟನೆ ಉತ್ತರಪ್ರದೇಶದ ಸಿದ್ಧಾರ್ಥನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಲೀಲಮ್ಮ ವಿಧಿವಶ!; ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ, ಪಾರ್ಥಿವ ಶರೀರ ಸ್ಥಳ ಬದಲಾವಣೆ
75 ವರ್ಷದ ವ್ಯಕ್ತಿಯೊಬ್ಬರಿಗೆ ಬಲವಂತವಾಗಿ ಚಪ್ಪಲಿ ಹಾರ ಹಾಕಿದ ಪುಂಡರ ಗ್ಯಾಂಗ್​, ತನ್ನದೇ ಉಗುಳನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ. ವೃದ್ಧನನ್ನು ಮೊಹಬ್ಬತ್ ಅಲಿ ಎಂದು ಗುರುತಿಸಲಾಗಿದ್ದು, ಅವರ ಮುಖಕ್ಕೆ ಮಸಿ ಬಳೆದು ಮೆರವಣಿಗೆ ಕೂಡ ಮಾಡಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಘಟನೆ ಗುರುವಾರ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿರುವ ವೀಡಿಯೊ ಮೂಲಕ ಘಟನೆ ಬೆಳಕಿಗೆ ಬಂದಿದೆ. ತೊಂದರೆಗೆ ಸಿಲುಕಿದ ವ್ಯಕ್ತಿ ತಿಘರಾ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಅಲಿ ವಿರುದ್ಧ ವ್ಯಕ್ತಿಯೊಬ್ಬರು ತನ್ನ ಮಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ದೂರು ದಾಖಲಾದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಸದ್ಯ ಅಲಿಗೆ ಹಿಂಸೆ ನೀಡಿದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ:19 ವಯೋಮಿತಿಯ ಏಷ್ಯಾಕಪ್ ಭಾರತ ಕಿರಿಯರ ತಂಡ ಶುಭಾರಂಭ: ಅರ್ಶಿನ್ ಕುಲಕರ್ಣಿ ಆಲ್ರೌಂಡ್ ಆಟ, 6 ವಿಕೆಟ್ ಕಬಳಿಸಿದ ಪಾಕ್ ವೇಗಿ
ಆರೋಪಿಗಳನ್ನು ಜಾಫರ್, ಅಮನ್ ಪಾಂಡೆ, ಅಖಿಲೇಶ್ ಸಾಹ್ನಿ ಮತ್ತು ಘನಶ್ಯಾಮ್ ತಿವಾರಿ ಎಂದು ಗುರುತಿಸಲಾಗಿದೆ ಎಂದು ಗೋಲ್ಹೌರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಜಯನಾಥ್ ಕನೌಜಿಯಾ ತಿಳಿಸಿದ್ದಾರೆ. ಈ ನಾಲ್ವರ ವಿರುದ್ಧ ಅಕ್ರಮ ಸಂಯಮ, ನೋವುಂಟು ಮಾಡುವುದು, ಮನೆ ಒಡೆಯುವುದು, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).
‘ಲೀಲಮ್ಮನ ಮಾತು ಕೇಳಿದ್ದಿದ್ರೆ ನಾನು ಕೋಟ್ಯಾಧೀಶ್ವರ ಆಗ್ತಿದ್ದೆ’!: ಶೂಟಿಂಗ್​ ಕೃಷ್ಣ ಭಾವುಕ, ಇಲ್ಲಿದೆ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
