ಅಸ್ಸಾಂ:ಕಳೆದ ಕೆಲ ವರ್ಷಗಳಿಂದ ಯುವಪೀಳಿಗೆಯೂ ಹೆಚ್ಚಾಗಿ ಮೊಬೈಲ್​ ಚಟಕ್ಕೆ ಹೆಚ್ಚಾಗಿ ಅಡಿಕ್ಟ್​ ಆಗುತ್ತಿದ್ದು, ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 75 ವರ್ಷದ ವೃದ್ಧೆಯೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 10 ಕಿಲೋಮೀಟರ್​ ನಡಿಗೆಯನ್ನು ಹಮ್ಮಿಕೊಂಡಿದ್ದರು.
ಅಸ್ಸಾಂನ ದಿಬ್ರುಗಢದ ನಿವಾಸಿ ಹೀರಾ ಬೋರಾ(75) ಅವರು ಯುವ ಪೀಳಿಗೆಯಲ್ಲಿ ಆರೋಗ್ಯದ ಮಹತ್ವವನ್ನು ಸಾರಲು ನಡಿಗೆಯನ್ನು ಹಮ್ಮಿಕೊಂಡಿದ್ದರು. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.
ಇಳಿವಯಸ್ಸಿನಲ್ಲೂ ನಡಿಗೆ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ವೃದ್ಧೆ ಹೀರಾ ಬೋರಾ ಇಂದಿನ ಯುವ ಪೀಳಿಗೆ ಹೆಚ್ಚಿನ ಸಮಯವನ್ನು ಮೊಬೈಲ್​ನಲ್ಲಿ ಕಳೆಯುತ್ತಿದ್ದಾರೆ. ಇದು ಅವರ ಆರೋಗ್ಯ ಹಾಗೂ ವ್ಯಕ್ತಿರಿಕ್ತ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ನಾನು ಯುವ ಪೀಳಿಗೆಯಲ್ಲಿ ಆರೋಗ್ಯದ ಮಹತ್ವವನ್ನು ತಿಳಿಸಲು ಅದರ ಬಗ್ಗೆ ಜಾಗೃತಿಯನ್ನು ಮೂಡಿಸಲು 10 ಕಿಲೋಮೀಟರ್​ಗಳ ನಡಿಗೆಯನ್ನು ಹಮ್ಮಿಕೊಂಡಿದ್ದಾಗಿ ತಿಳಿಸಿದ್ದಾರೆ.
VIDEO | A 75-year-old woman from Assam's Dibrugarh embarked on a 10-km walk carrying the tricolour yesterday as the entire country gets ready to celebrate the 77th Independence Day.Through her walk, Hira Bora wanted to raise awareness among the younger generation about the…pic.twitter.com/hq7YqgCHCY
ಇದನ್ನೂ ಓದಿ:ಜಾತಿ ನಿಂದನೆ ಪ್ರಕರಣ; ನಟ ಉಪೇಂದ್ರಗೆ ರಿಲೀಫ್​ ನೀಡಿದ ಹೈಕೋರ್ಟ್​
ಬಿಗಿ ಪೊಲೀಸ್​ ಭದ್ರತೆಯಲ್ಲಿ ನಡಿಗೆ ಆರಂಭಿಸಿದ ವೃದ್ಧೆ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಗಿಬೀಲ್​ ಸೇತುವೆ ಮೂಲಕ ಹಾದು ಹೋಗಿ ತಮ್ಮ ನಡಿಗೆಯನ್ನು ಅಂತ್ಯಗೊಳಸಿದ್ದಾರೆ. ಇವರ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವೃದ್ಧೆಯ ಕಾರ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉತ್ತಮ ಸಂದೇಶವನ್ನು ಸಾರಲು ವಯಸ್ಸು ಯಾವುದೇ ಕಾರಣಕ್ಕೂ ಅಡ್ಡಿಯಾಗುವುದಿಲ್ಲ. ಈ ರೀತಿ ಕಾರ್ಯಗಳಿಂದ ಹೀರಾ ಬೋರಾ ಅವರು ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹಲವರು ಹೇಳಿದ್ದಾರೆ. 10 ಕಿಲೋಮೀಟರ್​ ನಡಿಗೆಗಾಗಿ ಅಷ್ಟೊಂದು ಪೊಲೀಸ್​ ಭದ್ರತೆ ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eleven =
Remember me
