ನವದೆಹಲಿ:ದೇಶವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಬಾರಿ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಟ್ಟರು.
ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಕೆಲಸ ನಡೆಯಿತು. ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್‌ ಲಾಂಚರ್‌, ಸ್ವಾತಿ – ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್‌ ಸಿಸ್ಟಮ್‌, ಸರ್ವತ್ರ ಮೊಬೈಲ್‌ ಬ್ರಿಡ್ಜಿಂಗ್‌ ಸಿಸ್ಟಮ್‌, ಡ್ರೋನ್‌ ಜಾಮರ್‌ ಸಿಸ್ಟಮ್‌, ಪ್ರಚಂಡ, ರುದ್ರ‌ ಹೆಲಿಕಾಪ್ಟರ್‌, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‌ಪಿಎಫ್‌ ಬ್ಯಾಂಡ್‌ ಪಥಸಂಚಲನ, ಬಿಎಸ್‌ಎಫ್‌ ಒಂಟೆ ರೆಜಿಮೆಂಟ್‌ ಪರೇಡ್‌ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದವು.
#WATCH| The#RepublicDay2024tableau of Madhya Pradesh takes part in the parade.
The tableau portrays the 'Self-reliant and progressive; women of the state.pic.twitter.com/2XoU9TDJdN
— ANI (@ANI)January 26, 2024

ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಿದರು. ಇದರೊಂದಿಗೆ 148 NCC ಬಾಲಕಿಯರು, 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಿ ದೇಶದ ಸಾಂಸ್ಕೃತಿಕತೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಮಾಡಿದರು. ಇನ್ನೂ ಆತ್ಮನಿರ್ಭರ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಸ್ತಬ್ಧಚಿತ್ರ ʻನಾರಿ ಶಕ್ತಿʼಗೆ ಹೆಸರುವಾಸಿಯಾಗಿತ್ತು. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಅಂತರಿಕ್ಷದಲ್ಲಿ ಮಹಿಳೆಯರ ಸಾಧನೆಗಳನ್ನು ತೋರಿಸಲಾಯಿತು. ಜೊತೆಗೆ ʻವಂದೇ ಭಾರತ್‌ʼ ನಾರಿಶಕ್ತಿ ತಂಡದ 1,500 ಮಹಿಳೆಯರು ಏಕಕಾಲಕ್ಕೆ ನೃತ್ಯಪ್ರದರ್ಶಿಸಿದರು.
ನಂತರ 262 ಫೀಲ್ಡ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಪ್ರಿಯಾಂಕಾ ಸೆವ್ದಾ ನೇತೃತ್ವದಲ್ಲಿ 1890 ರಾಕೆಟ್ ರೆಜಿಮೆಂಟ್‌ನಿಂದ ಫಿರಂಗಿ ರೆಜಿಮೆಂಟ್‌ನ ಪಿನಾಕಾ ತುಕಡಿ ಹಾಗೂ ಜೊತೆಗೆ 42 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಲೆಫ್ಟಿನೆಂಟ್ ಫಯಾಜ್ ಸಿಂಗ್ ಧಿಲ್ಲೋನ್ ನೇತೃತ್ವದ ಟ್ಯಾಂಕ್ T-90 ಭೀಷ್ಮಾದ ತುಕಡಿ ಆಕರ್ಷಕ ಪಥಸಂಚಲನ ನಡೆಸಿಕೊಟ್ಟಿತು.
ಬಾಲರಾಮನ ಕಣ್ಣುಗಳಿಗೆ ಅಷ್ಟೊಂದು ಹೊಳಪು ಸಿಕ್ಕಿದ್ದು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಿಂದ!
ಬಾಲರಾಮನ ಕಣ್ಣುಗಳಿಗೆ ಅಷ್ಟೊಂದು ಹೊಳಪು ಸಿಕ್ಕಿದ್ದು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಿಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
