ಅನಂತಪುರ (ಆಂಧ್ರಪ್ರದೇಶ):ದೇಹಕ್ಕೆ ಎಷ್ಟೇ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗದಿದ್ದರೆ, ಎಷ್ಟೊಂದು ಚಟುವಟಿಕೆಯಿಂದ ಇರಬಹುದು ಎನ್ನುವುದಕ್ಕೆ ಈ ಅಜ್ಜಿಯೇ ಸಾಕ್ಷಿ.
ವಯಸ್ಸು 40 ದಾಟುತ್ತಿದ್ದಂತೆಯೇ ಎಷ್ಟೋ ಮಂದಿ ಅಯ್ಯೋ ವಯಸ್ಸಾಗಿ ಹೋಯ್ತು ಎಂದು ಗೊಣಗುವವರೇ ಹೆಚ್ಚು. ಅಂಥದ್ದರಲ್ಲಿ ವಯಸ್ಸು 70 ದಾಟಿದರೆ? ಜೀವನವೇ ಮುಗಿದು ಹೋಯ್ತು ಎಂದುಕೊಳ್ಳುತ್ತಾರೆ. ಅಂಥವರೆಲ್ಲರೂ ಈ ಅಜ್ಜಿಯನ್ನು ನೋಡಿ ಕಲಿಯಬೇಕು!
ವಯಸ್ಸು 76. ಆದರೆ ಜೋಕಾಲಿ ಮೇಲೆ ನಿಂತು ಅಜ್ಜಿ ಶರವೇಗದಲ್ಲಿ ಅತ್ತಿತ್ತ ಓಲಾಡುವುದನ್ನು ನೋಡಿದರೆ ನಿಬ್ಬೆರಗಾಗಬೇಕು, ಅಂಥ ತಾಕತ್ತು. ಯುವಕ-ಯುವತಿಯರನ್ನೂ ನಾಚಿಸುವಂತೆ ಈ ಅಜ್ಜಿ ಜೋಕಾಲಿ ಆಡುತ್ತಾರೆ. ಅದೂ ನಿಂತುಕೊಂಡೇ! ಕುಳಿತು ಜೋಕಾಲಿ ಆಡುವುದಕ್ಕೇ ಎಷ್ಟೋ ಮಂದಿ ಭಯ ಪಡುವ ನಡುವೆ, ಈ ಅಜ್ಜಿ, ಧೈರ್ಯದಿಂದ ವೇಗದಲ್ಲಿ ಜೀಕುವುದನ್ನು ನೋಡುವುದೇ ಹಬ್ಬ.
ಇದನ್ನೂ ಓದಿ:VIDEO: ಯುವಕನ ಜತೆ ಓಡಿಹೋದ ಬಾಲಕಿ: ತಂದೆಯೆದುರೇ ಗ್ರಾಮಸ್ಥರಿಂದ ಅಮಾನುಷ ಹಲ್ಲೆ
ಅಂದಹಾಗೆ ಈ ಅಜ್ಜಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬ್ರಾಹ್ಮಣಪಲ್ಲೆಯಳು. ಜಯಾ ಎನ್ನುವ ಈ ಮಹಿಳೆ ಲಾಕ್​ಡೌನ್​ ವೇಳೆಯಲ್ಲಿ ಸಮಯ ಕಳೆಯಲು ಜೋಕಾಲಿ ಕಟ್ಟಿಕೊಂಡು ಆಡುತ್ತಿದ್ದರೆ ನೋಡಿದವರೆಲ್ಲರೂ ನಿಬ್ಬೆರಗಾಗುತ್ತಿದ್ದಾರೆ. ಚಿಕ್ಕ ಮಕ್ಕಳಂತೆಯೇ ಜೋಕಾಲಿಯಲ್ಲಿ ಸಂತೋಷ ಪಡುವ ಈಕೆಯನ್ನು ನೋಡಿದವರೆಲ್ಲರೂ ಶಹಭಾಸ್​ಗಿರಿ ಕೊಡುತ್ತಿದ್ದಾರೆ.
ಅಕ್ಕಪಕ್ಕದ ಮನೆಯವರಿಗಷ್ಟೇ ಸ್ಫೂರ್ತಿಯಾಗಿದ್ದ ಈ ಅಜ್ಜಿ ಇದೀಗ ಸೋಷಿಯಾ ಮೀಡಿಯಾದ ಹೈಲೈಟ್​. ಪಕ್ಕದ ಮನೆಯಾತ ಅಜ್ಜಿ ಜೋಕಾಲಿ ಆಡುವ ವಿಡಿಯೋ ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ರಾತ್ರೋ ರಾತ್ರಿ ಈ ವಿಡಿಯೋ ಸಹಸ್ರಾರು ಶೇರ್​ಗಳನ್ನು ಕಂಡು ಕಮೆಂಟ್​ಗಳು ಮಹಾಪೂರವೇ ಹರಿದು ಬಂದಿದೆ.
ಇಲ್ಲಿದೆ ನೋಡಿ ವಿಡಿಯೋ
https://www.youtube.com/watch?v=pBl52HvGkDU
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
