ಅಮೃತಸರ:ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭರ್ಜರಿ ಬೇಟೆಯಾಡಿರುವ ಪಂಜಾಬ್​ ಪೊಲೀಸರೂ ಫಿರೋಜ್​ಪುರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್, ಪಿಸ್ತೂಲ್​ಗಳನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಿಂದ ಒಟ್ಟು 41 ಹಾಗು 31 ಕೆಜಿ ಹೆರಾಯಿನ್​ ಹಾಗೂ ಬಂಧಿತ ಆರೋಪಿಗಳಿಂದ ಮೂರು ಪಿಸ್ತೂಲ್​ಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ರಾಜ್ಯ​ ಪೊಲೀಸ್​ ಮಹಾನಿರ್ದೇಶಕ(DGP) ಗೌರವ್​ ಯಾದವ್​ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಮಾದಕವಸ್ತು ಕಳ್ಳಸಾಗಾಣೆಯನ್ನೂ ಪತ್ತೆ ಹಚ್ಚಲೂ ಎರಡು ಪ್ರತ್ಯೇಕ ತಂಡಗಳನ್ನೂ ರಚಿಸಲಾಗಿತ್ತು. ಬಂಧಿತ ಆರೋಪಿಗಳೂ ದೇಶದ ಗಡಿಯಾಚೆ ಹಾಗೂ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಾಣೆಯಲ್ಲಿ ತೊಡಗಿದ್ದರೂ.
Ferozepur Counter Intelligence seizes 77Kg Heroin & 3 pistols in two separate operations, nabs 4 drug traffickers.Trans-border & inter-state drug smuggling in#Punjabtargeted.FIRs registered at#SSOCFazilka. Investigation underway to dismantle the drug network. (1/2)pic.twitter.com/ZeCsYeSDzF
ಇದನ್ನೂ ಓದಿ:ಪದ್ಮ ನದಿಯಲ್ಲಿ ಬೋಟ್​ ಮುಳುಗಡೆ; ದುರಂತದಲ್ಲಿ 8 ಮಂದಿ ಮೃತ್ಯು
ಬಂಧಿತರಿಂದ ವಶಪಡಿಸಿಕೊಳ್ಳಲಾಗಿರುವ 77 ಕೆಜಿ ಹೆರಾಯಿನ್​ ಮೌಲ್ಯವೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳೂ ಫಿರೋಜ್​ಪುರದ ಗಗ್ಗಾ ಗಿಲ್​, ವೀರ್​ ಸಿಂಗ್, ಜಸ್​ಬಿಂದರ್​ ಸಿಂಗ್​ ಹಾಗೂ ಜಗದೀಪ್​ ಸಿಂಗ್​ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ನಾರ್ಕೋಟಿಕ್​ ಡ್ರಗ್ಸ್​ ಮತ್ತು ಸೈಕೋಟ್ರೋಪಿಕ್​ ಸಬ್​ಸ್ಟೆನ್ಸ್​, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಡ್ರಗ್ಸ್​ ಪ್ರಕರಣ ಸಂಬಂಧ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಎರಡು ತಂಡಗಳು ಈ ವಿಚಾರವಾಗಿ ತನಿಖೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದು ಪಂಜಾಬ್ ರಾಜ್ಯ​ ಪೊಲೀಸ್​ ಮಹಾನಿರ್ದೇಶಕ(DGP) ಗೌರವ್​ ಯಾದವ್​ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
