ಬೆಂಗಳೂರು:ಗೌರಿ ಗಣೇಶ ಹಬ್ಬದ ಪ್ರಯುಕ್ತ, ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ರಕ್ಷಿತ್​ ಶೆಟ್ಟಿಯವರ ‘777 ಚಾರ್ಲಿ’ ಚಿತ್ರದ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ರಿಲೀಸ್ ಆಗಿರುವ ಈ ‘ಟಾರ್ಚರ್ ಸಾಂಗ್’ ಎಂಬ ಹೆಸರಿನ ಹಾಡು ಐದು ಭಾಷೆಗಳಲ್ಲಿ ಮೂಡಿಬಂದಿದೆ.
ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸಾಗಿರುವ ‘ಟಾರ್ಚರ್​ ಸಾಂಗ್’​ನ ಕನ್ನಡ ಆವೃತ್ತಿಯನ್ನು ಗಾಯಕ ವಿಜಯ್​ ಪ್ರಕಾಶ್​ ಹಾಡಿದ್ದಾರೆ. ಈ ಗೀತೆಗೆ ನಾಗಾರ್ಜುನ ಶರ್ಮ ಸಾಹಿತ್ಯ ಒದಗಿಸಿದ್ದರೆ, ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ಹಿಂದಿ ಆವೃತ್ತಿಗೆ ಶೈನಿ ದಾಸ್​ ಸಾಹಿತ್ಯ ಬರೆದಿದ್ದರೆ, ಸ್ವರೂಪ್​ ಖಾನ್​ ಹಾಡಿದ್ದಾರೆ. ಚಿತ್ರದ ವಿವಿಧ ಭಾಷಾ ಆವೃತ್ತಿಗಳ ವಿವರಗಳನ್ನು ಹೊಂದಿದ ಲಿಂಕ್​ಅನ್ನು ನಟ ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.
ನಮ್ಮ "777 ಚಾರ್ಲಿ" ಚಿತ್ರದ ಮೊದಲ ಹಾಡು "ಟಾರ್ಚರ್ ಸಾಂಗ್" ಇದೀಗ ನಿಮ್ಮ ಮುಂದೆ ✨https://t.co/2JpEkDiMfC#777Charlieಚಿತ್ರ ಇದೇ ಡಿಸೆಂಬರ್ 31ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ಇರಲಿ 🤗#TortureSongOutNow#777CharlieOnDec31pic.twitter.com/0RqTyJ6NPI— Rakshit Shetty (@rakshitshetty)September 9, 2021
ನಮ್ಮ "777 ಚಾರ್ಲಿ" ಚಿತ್ರದ ಮೊದಲ ಹಾಡು "ಟಾರ್ಚರ್ ಸಾಂಗ್" ಇದೀಗ ನಿಮ್ಮ ಮುಂದೆ ✨https://t.co/2JpEkDiMfC#777Charlieಚಿತ್ರ ಇದೇ ಡಿಸೆಂಬರ್ 31ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ಇರಲಿ 🤗#TortureSongOutNow#777CharlieOnDec31pic.twitter.com/0RqTyJ6NPI
ಪ್ಯಾನ್​ ಇಂಡಿಯ ಚಿತ್ರವಾಗಿರುವ 777 ಚಾರ್ಲಿ ಚಿತ್ರವನ್ನು ಬರುವ ಡಿಸೆಂಬರ್ 31 ಕ್ಕೆ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇತ್ ಮತ್ತು ಬಾಬಿ ಸಿಂಹ​ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವನ್ನು ಕಿರಣ್​ರಾಜ್ ಕೆ. ನಿರ್ದೇಶಿಸಿದ್ದಾರೆ. ನಾಯಿಯೊಂದರ ಸುತ್ತ ಹೆಣೆದಿರುವ ಈ ಚಿತ್ರವನ್ನು ಜಿ.ಎಸ್​.ಗುಪ್ತ ಮತ್ತು ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ಹು-ಧಾ ಪಾಲಿಕೆ: ಬಿಜೆಪಿಗೆ ಹೊಸತೊಂದು ವಿಘ್ನ – ಪಕ್ಷದಲ್ಲಿ ಉಪಮೇಯರ್​ ಅಭ್ಯರ್ಥಿಯೇ ಇಲ್ಲ!
ಡ್ರಗ್ಸ್​ ಕೇಸಲ್ಲಿ ಅನುಶ್ರೀ ಹೆಸರು: ಪೊಲೀಸ್​ ಕಮಿಷನರ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
