ಜೈಪುರ :ಸರ್ಕಾರಿ ಅನುದಾನಿ ಗೋಶಾಲೆಯಲ್ಲಿ ಒಂದೇ ದಿನ 78 ಹಸುಗಳು ನಿಗೂಢವಾಗಿ ಮೃತಪಟ್ಟಿವೆ. ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ದುರಂತ ಸಂಭವಿಸಿದೆ ಎಂದು ಪಶು ಸಂಗೋಪನಾ ಇಲಾಖೇಯ ಜಂಟಿ ನಿರ್ದೇಶಕ ಡಾ. ಜಗದೀಶ್ ಶನಿವಾರ ತಿಳಿಸಿದ್ದಾರೆ.
ಸರ್ದರ್ಶಹರ್​ ಎಂಬಲ್ಲಿಯ ಬಿಲ್ಯುಬಾಸ್ ರಾಮಪುರ ಗ್ರಾಮದಲ್ಲಿರುವ ಗೋಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಫುಡ್​ ಪಾಯ್ಸನಿಂಗ್ ಆಗಿ ಹಸುಗಳು ಮೃತಪಟ್ಟಿರುವ ಸಾಧ್ಯತೆ ಗೋಚರಿಸಿದೆ. ಅಲ್ಲಿದ್ದ ಮೇವನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ಗೊತ್ತಾಗಲಿದೆ ಎಂದು ಡಾ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ
ಭಗವಾನ್ ಶ್ರೀಕೃಷ್ಣ ಮತ್ತು ಗೋವುಗಳಿಗೆ ಸಂಬಂಧಿಸಿ ಗೋಸಪ್ತಮಿ ಹಬ್ಬ ಆಚರಣೆಯ ಒಂದು ದಿನ ಮುಂಚಿತವಾಗಿ ನಡೆದ ಈ ದುರಂತ ಗ್ರಾಮಸ್ಥರನ್ನು ದುಃಖಕ್ಕೀಡುಮಾಡಿದೆ. (ಏಜೆನ್ಸೀಸ್)
ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
