ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ವರದಿಯಾಗಿದೆ. ವಿಶ್ವದಲ್ಲಿ ಒಟ್ಟು 10,906 ತಳಿಗಳ ಪಕ್ಷಿಗಳು ವಾಸಿಸುತ್ತಿದ್ದು, ಈ ಪೈಕಿ ಭಾರತದಲ್ಲಿ ಒಟ್ಟು 1,353 ವಿಧದ ಪಕ್ಷಿಗಳು ಅವಾಸನಗೊಂಡಿದೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ವರದಿ ಮಾಡಿದೆ.
ಇದು ವಿಶ್ವದಲ್ಲಿರುವ ಹಕ್ಕಿಗಳ ಪೈಕಿ ಶೇ.12.4ರಷ್ಟಿದೆ. ಇದರಲ್ಲಿ 78 ತಳಿಯ ಪಕ್ಷಿಗಳು ಭಾರತದಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಕಾಣ ಸಿಗುವುದಿಲ್ಲ ಎಂದು ಹೇಳಿದೆ. ಈ 78 ತಳಿಯ ಪಕ್ಷಿಗಳಲ್ಲಿ 28 ಪಶ್ಚಿಮಘಟ್ಟ, 25 ಅಂಡಮಾನ್‌ ನಿಕೋಬಾರ್‌ ದ್ವೀಪ, 4 ಪೂರ್ವ ಹಿಮಾಲಯ, ದಕ್ಷಿಣ ದಕ್ಕನ್‌ ಪ್ರಸ್ತಭೂಮಿ ಹಾಗೂ ಮಧ್ಯಭಾರತದ ಅರಣ್ಯದಲ್ಲಿ ತಲಾ 1 ಪಕ್ಷಿಗಳು ಕಾಣಸಿಗುತ್ತದೆ.
ಆತಂಕ ರೇಖೆಯಲ್ಲಿರುವ 25 ತಳಿ ಪಕ್ಷಿಗಳ ಪೈಕಿ 3 ತೀವ್ರ ಅಳಿವಿನಂಚಿನಲ್ಲಿದ್ದು, 5 ಅಳಿವಿನಂಚಿನಲ್ಲಿದೆ ಹಾಗೂ 17 ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ವರದಿ ಪ್ರಕಾರ ಮಣಿಪುರ ಬುಷ್‌ ಕ್ವೈಲ್‌ ಹಕ್ಕಿಯು 1907ರ ಬಳಿಕ ಕಂಡಿಲ್ಲ, ಹಿಮಾಲಯನ್‌ ಕ್ವೈಲ್‌ ಪಕ್ಷಿ 1876 ಬಳಿಕ 2009ರಲ್ಲಿ ಕೊನೆಯ ಬಾರಿ ಪ್ರತ್ಯಕ್ಷವಾಗಿತ್ತು.
ಒಟ್ಟಾರೆಯಾಗಿ ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಅನ್ನೋದು ಹೆಮ್ಮೆಯ ವಿಚಾರ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
