ಕೋಝಿಕ್ಕೋಡ್: ರೈಲು ಟಿಕೆಟ್‌ ರದ್ದುಗೊಳಿಸಲು ಹೋಗಿ ಹಿರಿಯ ನಾಗರಿಕನೊಬ್ಬ ನಾಲ್ಕು ಲಕ್ಷಕ್ಕೂ ಹೆಚ್ಚು ರೂ. ಕಳೆದುಕೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್ ಬಳಿ ನಡೆದಿದೆ.ವಂಡಿಪೆಟ್ಟಾದ ಎಂ. ಮೊಹಮ್ಮದ್ ಬಶೀರ್(78) ಎಂಬಾತನೇ ಆನ್​ಲೈನ್​ ಸ್ಕ್ಯಾಮ್​​ಗೆ ಬಲಿಯಾದ ವ್ಯಕ್ತಿಯಾಗಿದ್ದು, ನಕಲಿ ವೆಬ್‌ಸೈಟ್‌ನಲ್ಲಿ ಬಶೀರ್ ತನ್ನ ಟಿಕೆಟ್ ರದ್ದುಗೊಳಿಸಲು ಪ್ರಯತ್ನಿಸಿದಾಗ, ಒಬ್ಬ ವ್ಯಕ್ತಿ ತನ್ನನ್ನು ರೈಲ್ವೆ ಉದ್ಯೋಗಿ ಎಂದು ಪರಿಚಯಿಸಿಕೊಂಡು ಫೋನ್ ಕರೆ ಮೂಲಕ ಈತನಿಗೆ ಸಹಾಯ ಮಾಡಿದ್ದಾನೆ.ವಂಚಕನು ಹೇಳಿದಂತೆ ಬಶೀರ್​, ಗೂಗಲ್ ತೆರೆದು ಟೈಪ್ ಮಾಡಿದ್ದು ತದನಂತರ ಪರದೆಯ ಮೇಲೆ ನೀಲಿ ಲಾಂಛನವಿರುವ ವೆಬ್​ಸೈಟ್​ವೊಂದು ಕಾಣಿಸಿಕೊಂಡಿದೆ. ಈ ವೇಳೆ ಬಶೀರ್, ಆತನ ಬೇಡಿಕೆಯಂತೆ ತನ್ನ ಬ್ಯಾಂಕ್ ಖಾತೆ ವಿವರ ಹಾಗೂ ಎಟಿಎಂ ಕಾರ್ಡ್ ನಂಬರ್ ಕೂಡ ನೀಡಿದ್ದಾನೆ. ಕೂಡಲೇ ತನ್ನ ಉಳಿತಾಯ ಖಾತೆಯಲ್ಲಿನ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಬಂದಾಗಲೇ ಬಶೀರ್‌ಗೆ ತಾನು ವಂಚನೆಗೆ ಬಲಿಯಾಗಿದ್ದೇನೆ ಎಂಬುದು ಅರಿವಾಗಿದ್ದು, ಬ್ಯಾಂಕ್​ಗೆ ತೆರಳಿದ್ದು ಅದಾಗಲೇ ಅಕೌಂಟ್​ನಿಂದ ಹಣ ಟ್ರಾನ್ಸ್​ಫರ್​ ಆಗಿತ್ತು.ತದನಂತರ ಬಶೀರ್​, ಬ್ಯಾಂಕ್ ಮತ್ತು ಪೊಲೀಸ್ ಎರಡೂ ಸೈಬರ್ ಸೆಲ್ ವಿಭಾಗಗಳಲ್ಲಿ ದೂರು ದಾಖಲಿಸಿದ್ದು, ಹೆಚ್ಚಿನ ಡೇಟಾ ಸೋರಿಕೆಯಾಗದಂತೆ ಮುನ್ನೆಚ್ಚರಿಕಗೆ ವಹಿಸಿ ತನ್ನ ಫೋನ್​ನ್ನು ಫಾರ್ಮ್ಯಾಟ್ ಮಾಡಿದ್ದಾನೆ. ‘ರೆಸ್ಟ್ ಡೆಸ್ಕ್’ ಎಂಬ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದರಿಂದ ವಂಚಕರು ಆರಾಮವಾಗಿ ಫೋನ್‌ಗೆ ಪ್ರವೇಶ ಪಡೆದುಕೊಂಡು ವಂಚನೆ ಎಸಗಿದ್ದಾರೆ ಎಂದು ಪೊಲೀಸ್ ಸೈಬರ್ ಸೆಲ್‌ನ ತನಿಖಾ ತಂಡ ಹೇಳಿದೆ. ಹಣವನ್ನು ನಾಲ್ಕು ಕಂತುಗಳಲ್ಲಿ ಡೆಬಿಟ್ ಮಾಡಲಾಗಿದ್ದು, ಕೋಲ್ಕತ್ತಾದಿಂದ 4,05,919 ರೂಪಾಯಿ ಡೆಬಿಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
