ನವದೆಹಲಿ :“ನಮಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗಲಿಲ್ಲ. ನಮ್ಮ ಆಕ್ಸಿಜನ್ ಸಪ್ಲೈ ಮಧ್ಯಾಹ್ನ 12 ಗಂಟೆಗೆ ಮುಗಿದುಹೋಯಿತು. ಮತ್ತೆ 1.35 ಕ್ಕೆ ಆಕ್ಸಿಜನ್ ತಲುಪಿತು. ನಮ್ಮ ವೈದ್ಯರೊಬ್ಬರು ಸೇರಿದಂತೆ ಎಂಟು ಕರೊನಾ ರೋಗಿಗಳ ಪ್ರಾಣ ಕಳೆದುಕೊಂಡೆವು” ಎಂದು ದೆಹಲಿಯ ಬಾತ್ರಾ ಆಸ್ಪತ್ರೆ ಹೇಳಿಕೊಂಡಿದೆ.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗಾಗಿ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗುವಂತೆ ಮೇಲ್ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಮುಂದೆ ಆಸ್ಪತ್ರೆಯ ವಕೀಲರು ಈ ಹೇಳಿಕೆ ನೀಡಿದರು. ಸಕಾಲಿಕವಾಗಿ ಆಕ್ಸಿಜನ್ ಪೂರೈಸುವಂತೆ ಕೋರ್ಟ್​ ಸಹಾಯ ಕೋರಿರುವ ಹಲವು ಆಸ್ಪತ್ರೆಗಳಲ್ಲಿ ಬಾತ್ರಾ ಆಸ್ಪತ್ರೆಯೂ ಒಂದು.
ಇದನ್ನೂ ಓದಿ:ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!
ಇಂದು ಬೆಳಿಗ್ಗೆ ಬಾತ್ರಾ ಆಸ್ಪತ್ರೆಯು “ಇನ್ನು 10 ನಿಮಿಷಗಳಿಗೆ ಆಗುವಷ್ಟು ಆಕ್ಸಿಜನ್ ಇದೆ. ಆಸ್ಪತ್ರೆಯಲ್ಲಿ 326 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಎಸ್​ಒಎಸ್​ ಸಂದೇಶ ನೀಡಿತ್ತು. ಸ್ವಲ್ಪ ಸಮಯದ ನಂತರ ದೆಹಲಿ ಸಚಿವ ರಾಘವ್ ಛಡ್ಡ ಅವರು, “ಲಿಖ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತ ನಮ್ಮ ಎಸ್​ಒಎಸ್​ ಕ್ರಯೋಜೆನಿಕ್ ಟ್ಯಾಂಕರ್​ ಐದು ನಿಮಿಷಗಳಲ್ಲಿ ಬಾತ್ರಾ ಆಸ್ಪತ್ರೆ ತಲುಪಲಿದೆ. ಅವರ ಆಕ್ಸಿಜನ್ ಪೂರೈಕೆದಾರ ಮತ್ತೆ ಆಕ್ಸಿಜನ್ ಸಪ್ಲೈ ಇಲ್ಲ ಎಂದು ಹೇಳಿ ಕೈಕೊಟ್ಟಿದ್ದಾನೆ” ಎಂದು ಹೇಳಿದ್ದರು.
ಸರ್ಕಾರದ ವತಿಯಿಂದ ಆಕ್ಸಿಜನ್ ಪೂರೈಸಲಾದರೂ, ಅಷ್ಟು ಹೊತ್ತಿಗೆ 8 ರೋಗಿಗಳ ಪ್ರಾಣ ಹೋಗಿತ್ತು. “ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯು ಆಕ್ಸಿಜನ್ ಪೂರೈಕೆ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಇದರಿಂದಾಗಿ ಆಸ್ಪತ್ರೆಯ ವೈದ್ಯರೊಬ್ಬರು ಸೇರಿದಂತೆ 8 ಜನ ಕರೊನಾ ರೋಗಿಗಳು ಇಂದು ಸಾವಪ್ಪಿದ್ದಾರೆ” ಎಂದು ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಎಸ್​​.ಸಿ.ಎಲ್.ಗುಪ್ತ ತಿಳಿಸಿದ್ದಾರೆ.(ಏಜೆನ್ಸೀಸ್)
ರಸ್ತೆ ಬದಿ ಅನಾಥವಾಗಿ ಸಿಕ್ಕಿತು ಕರೊನಾ ಲಸಿಕೆ ತುಂಬಿದ ಟ್ರಕ್​ !

ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + sixteen =
Remember me
