ಕಾಠ್ಮಂಡು:ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.
ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​ ಮಾನಾಕ್ಸೈಡ್​ ಪರಿಣಾಮದಿಂದ ದುರ್ಘಟನೆ ಸಂಭವಿಸಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಕಾಠ್ಮಂಡುವಿನಲ್ಲಿರುವ ರೆಸಾರ್ಟ್​ವೊಂದರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯು ಮಂಗಳವಾರ ಸಮಿತಿಯೊಂದನ್ನು ರಚನೆ ಮಾಡಿ ತನಿಖೆಗೆ ಸೂಚನೆ ನೀಡಿದೆ.
ಮೃತಪಟ್ಟವರಲ್ಲಿ ನಾಲ್ವರು ವಯಸ್ಕರು ಮತ್ತು ನಾಲ್ವರು ಮಕ್ಕಳು ಎಂದು ತಿಳಿದುಬಂದಿದೆ. ಮೃತರೆಲ್ಲರೂ ಕೇರಳ ಮೂಲದವರು. ಮೃತರನ್ನು ಪ್ರವೀಣ್​ ಕೃಷ್ಣನ್​ ನಾಯರ್​, ಸರಣ್ಯ ಸಸಿ, ಶ್ರೀಭದ್ರ ಪ್ರವೀಣ್​, ಆರ್ಚ ಪ್ರವೀಣ್​, ಅಭಿನವ್​ ಸರಣ್ಯ ನಾಯರ್​, ರಂಜಿತ್​ ಕುಮಾರ್​ ಅದಾತೊಲತ್​ ಪುನಥಿಲ್​, ಇಂದು ಲಕ್ಷ್ಮಿ ಪೀತಾಂಬರಂ ರಗಲತಾ ಮತ್ತು ವೈಷ್ಣವ್​ ರಂಜಿತ್​ ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ಕೇರಳ ಪ್ರವಾಸೋದ್ಯಮ ಸಚಿವ ಕದಕಂಪಲ್ಲಿ ಸುರೇಂದ್ರನ್​, ಕಾಠ್ಮಂಡುವಿನಲ್ಲಿರುವ ಭಾರತ ಮಿಷನ್​ ಅನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದೇವೆ. ಶವಪರೀಕ್ಷೆ ನಂತರ ಇತರೆ ಕ್ರಮಕ್ಕೆ ಸೂಚಿಸಿ, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 + 17 =
Remember me
